ಹೆಬ್ರಿ: ಶ್ರೀ ಧನ್ವಂತರಿ ಜಯಂತಿ ಆಚರಣೆ

KannadaprabhaNewsNetwork |  
Published : Oct 20, 2025, 01:04 AM IST
19ಹೆಬ್ರಿಹೆಬ್ರಿಯಲ್ಲಿ ಶ್ರೀ ಧನ್ವಂತರಿ ಜಯಂತಿ ಆಚರಣೆ ನಡೆಯಿತು. | Kannada Prabha

ಸಾರಾಂಶ

ಆರೋಗ್ಯ ಭಾರತಿ ಉಡುಪಿ ಜಿಲ್ಲಾ ಸಮಿತಿ ಮತ್ತು ಹೆಬ್ರಿ ತಾಲೂಕು ಸಮಿತಿಗಳ ಸಹಭಾಗಿತ್ವದಲ್ಲಿ ಭಾನುವಾರ ಹೆಬ್ರಿಯ ಶ್ರೀ ರಾಮಮಂದಿರದಲ್ಲಿ ಬೆಳಗ್ಗೆ 10.30ಕ್ಕೆ ಶ್ರೀ ಧನ್ವಂತರಿ ಜಯಂತಿ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಆರೋಗ್ಯ ಭಾರತಿ ಉಡುಪಿ ಜಿಲ್ಲಾ ಸಮಿತಿ ಮತ್ತು ಹೆಬ್ರಿ ತಾಲೂಕು ಸಮಿತಿಗಳ ಸಹಭಾಗಿತ್ವದಲ್ಲಿ ಭಾನುವಾರ ಹೆಬ್ರಿಯ ಶ್ರೀ ರಾಮಮಂದಿರದಲ್ಲಿ ಬೆಳಗ್ಗೆ 10.30ಕ್ಕೆ ಶ್ರೀ ಧನ್ವಂತರಿ ಜಯಂತಿ ಆಚರಿಸಲಾಯಿತು.ದೀಪ ಪ್ರಜ್ವಲನ ಮತ್ತು ಶ್ರೀ ಧನ್ವಂತರಿ ಆರತಿಯೊಂದಿಗೆ ಪ್ರಾರಂಭವಾದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾದ ನಿವೃತ್ತ ಪ್ರಾಂಶುಪಾಲ ಮತ್ತು ಲೇಖಕ ಡಾ.ಸತ್ಯನಾರಾಯಣ ಭಟ್, ಆರೋಗ್ಯಭಾರತಿ ಉಡುಪಿ ಜಿಲ್ಲಾಧ್ಯಕ್ಷ ಡಾ. ದಿನೇಶ್ ನಾಯಕ್, ಜಿಲ್ಲಾ ಕಾರ್ಯದರ್ಶಿ ಪ್ರಭಾಕರ ಭಟ್, ಸಹ ಕಾರ್ಯದರ್ಶಿ ಕೃಷ್ಣರಾಜ ಸಾಮಗ, ಜಿಲ್ಲಾ ಸಂಯೋಜಕ ಗಣೇಶ ಶೆಣೈ ಬೈಲೂರು, ಹೆಬ್ರಿ ತಾಲೂಕು ಉಪಾಧ್ಯಕ್ಷೆ ಡಾ. ಭಾರ್ಗವಿ ಐತಾಳ್, ಡಾ.ಸರಿತಾ, ಡಾ.ಸುಷ್ಮಾ ಹೆಗ್ಡೆ, ಹಿರಿಯರಾದ ಬಾಲಕೃಷ್ಣ ಮಲ್ಯ, ಸುಧೀರ್‌ ನಾಯಕ್, ಕೃಷ್ಣ ಪ್ರಭು, ಉದ್ಯಮಿ ಬಾಲಕೃಷ್ಣ ನಾಯಕ್, ಸದಾನಂದ ನಾಯಕ್ ಹೆಬ್ರಿ, ರಾಮಮಂದಿರದ ವ್ಯವಸ್ಥಾಪಕ ಉಮೇಶ ನಾಯಕ್ ಮತ್ತಿತರ ಗಣ್ಯರು ಭಾಗವಹಿಸಿದರು.ಈ ಸಂದರ್ಭ ಡಾ.ಸತ್ಯನಾರಾಯಣ ಭಟ್ ಬರೆದ ‘ಆಯುರ್ವೇದ ಭೀಷ್ಮ - ಎಡತೊರೆ ಪಾರ್ಥನಾರಾಯಣ ಪಂಡಿತರು’ ಪುಸ್ತಕದ ಲೋಕಾರ್ಪಣೆಗೊಂಡಿತು. ಸಭಾಧ್ಯಕ್ಷತೆಯನ್ನು ಹೆಬ್ರಿ ತಾಲೂಕು ಅಧ್ಯಕ್ಷ ಡಾ. ರವಿಪ್ರಸಾದ ಹೆಗ್ಡೆ ವಹಿಸಿದ್ದರು. ಹೆಬ್ರಿ ತಾಲೂಕು ಕಾರ್ಯದರ್ಶಿ ಹೆಬ್ರಿ ಕೇಶವ ನಾಯಕ ಕಾರ್ಯಕ್ರಮ ನಿರೂಪಿಸಿದರು. ಸಹ ಕಾರ್ಯದರ್ಶಿ ವಿಘ್ನೇಶ ನಾಯಕ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಾಯಿಯ ಆರೈಕೆಗೆ ಮಗನ ಅಸಡ್ಡೆ: ಎಸಿ ಮಹತ್ವದ ತೀರ್ಪು
ಸಿದ್ದರಾಮೇಶ್ವರರು ಸಮಾಜ ಸುಧಾರಕರು: ಶಾಸಕ ತುನ್ನೂರು