ಹೆಬ್ರಿ: ವಿದ್ಯಾರ್ಥಿಗಳಲ್ಲಿ ಉದ್ಯೋಗಪರ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಹೆಬ್ರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 90 ಗಂಟೆಗಳ ‘UNXT’ ಉದ್ಯೋಗ ಕೌಶಲ್ಯ ತರಬೇತಿ ಕಾರ್ಯಕ್ರಮಕ್ಕೆ ಶುಕ್ರವಾರ (ಆ.7) ಚಾಲನೆ ನೀಡಲಾಯಿತು.ಕಾಲೇಜಿನ ಪ್ಲೇಸ್‌ಮೆಂಟ್ ಸೆಲ್ ಹಾಗೂ ಐಕ್ಯೂಎಸಿ, ಉನ್ನತಿ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಿರುವ ಈ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ವಿದ್ಯಾಧರ ಹೆಗ್ಡೆ ಎಸ್., ಉದ್ಯಮಿ ಹಾಗೂ ಸಿಡಿಸಿ ಸದಸ್ಯ ಶಶಿಧರ ಶೆಣೈ ಮತ್ತು ತರಬೇತುದಾರ ಕೆ. ಗುರುಪ್ರಸಾದ್ ಭಟ್ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಮಾತನಾಡಿದ ಶಶಿಧರ ಶೆಣೈ, ಉದ್ಯೋಗ ಕೌಶಲ್ಯ ತರಬೇತಿಗಳು ವಿದ್ಯಾರ್ಥಿಗಳಿಗೆ ಕಾರ್ಪೊರೇಟ್ ಕ್ಷೇತ್ರದಲ್ಲಿ ಉತ್ತಮ ಉದ್ಯೋಗಾವಕಾಶಗಳನ್ನು ಪಡೆಯಲು ಸಹಕಾರಿಯಾಗಲಿವೆ. ವಿದ್ಯಾರ್ಥಿಗಳು ಇಂತಹ ತರಬೇತಿಗಳ ಸದುಪಯೋಗ ಪಡೆದುಕೊಂಡು ತಮ್ಮ ವೃತ್ತಿ ಜೀವನಕ್ಕೆ ಅಗತ್ಯವಾದ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ಪ್ರಾಂಶುಪಾಲ ಡಾ. ವಿದ್ಯಾಧರ ಹೆಗ್ಡೆ ಎಸ್. ಮಾತನಾಡಿ, ತರಬೇತಿಯಲ್ಲಿ ಮಾತನಾಡುವ ಇಂಗ್ಲಿಷ್, ನಾಯಕತ್ವ, ಸಂವಹನ ಕೌಶಲ್ಯ, ಸಂದರ್ಶನ ಎದುರಿಸುವ ತಂತ್ರಗಳು ಸೇರಿದಂತೆ ಉದ್ಯೋಗ ಕ್ಷೇತ್ರಕ್ಕೆ ಅಗತ್ಯವಾದ ವಿವಿಧ ಕೌಶಲ್ಯಗಳನ್ನು ಕಲಿಸಲಾಗುವುದು ಎಂದು ತಿಳಿಸಿದರು.ಅಂತಿಮ ವರ್ಷದ ಬಿ.ಕಾಂ ವಿದ್ಯಾರ್ಥಿ ಅಥ್ಮಿಕ ಕಾರ್ಯಕ್ರಮ ನಿರೂಪಿಸಿದರು. ಪ್ಲೇಸ್‌ಮೆಂಟ್ ಸೆಲ್ ಕಾರ್ಯದರ್ಶಿ ಸಂಜನಾ ಸ್ವಾಗತಿಸಿದರು. ಪ್ಲೇಸ್‌ಮೆಂಟ್ ಸೆಲ್ ಸಂಯೋಜಕಿ ಡಾ. ಮೇವಿ ಮಿರಾಂಡಾ, ಐಕ್ಯೂಎಸಿ ಸಂಯೋಜಕ ಡಾ. ಗಣೇಶ್ ಎಸ್., ವಿದ್ಯಾರ್ಥಿ ಕಲ್ಯಾಣಾಧಿಕಾರಿ ಸುಷ್ಮಾ ರಾವ್ ಕೆ., ಪ್ಲೇಸ್‌ಮೆಂಟ್ ಸೆಲ್ ಕಾರ್ಯದರ್ಶಿ ಸಂಜನಾ ಹಾಗೂ ಅಂತಿಮ ವರ್ಷದ ಬಿ.ಎ ಮತ್ತು ಬಿ.ಕಾಂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ದ್ವಿತೀಯ ವರ್ಷದ ಬಿ.ಕಾಂ ವಿದ್ಯಾರ್ಥಿನಿ ಲಕ್ಷ್ಯಾ ವಂದಿಸಿದರು.