ಹೆಗ್ಗಾಪುರ ತಾಂಡ ಜಾತಿ ಸಮೀಕ್ಷೆ ಎಡವಟ್ಟು: ಕ್ರಮಕ್ಕೆ ಒತ್ತಾಯ

KannadaprabhaNewsNetwork | Published : May 11, 2025 1:20 AM
Follow Us

ಸಾರಾಂಶ

ಹೆಗ್ಗಾಪುರ ತಾಂಡಾದಲ್ಲಿ ಜಾತಿ ಸಮೀಕ್ಷೆಗೆ ನೇಮಕವಾದ ಶಿಕ್ಷಕ ಸೋಮಪ್ಪ ಜಾತಿ ಸಮೀಕ್ಷೆ ಕಾಲಂನದಲ್ಲಿ ಲಂಬಾಣಿ ಅಂತ ಬರೆದುಕೊಳ್ಳದೇ ಆದಿ ಆಂಧ್ರ ಎಂದು ನಮೂದಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಲಿಂಗಸುಗೂರು

ತಾಲೂಕಿನ ನಾಗಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಾಪುರ ತಾಂಡಾದಲ್ಲಿ ಜಾತಿ ಸಮೀಕ್ಷೆ ಕಾಲಂನಲ್ಲಿ ಲಂಬಾಣಿ ಅಂತಾ ನಮೂದಿಸದೇ ಆದಿ ಆಂಧ್ರ ಎಂದು ನಮೂದಿಸಿ ಗಣತಿದಾರರು ಎಡವಟ್ಟು ಮಾಡಿದ್ದು ಕೂಡಲೇ ಸರಿಪಡಿಸಬೇಕೆಂದು ಒಳ ಮೀಸಲಾತಿ ಸಂರಕ್ಷಣ ಒಕ್ಕೂಟ ಸಮಿತಿಯ ಮುಖಂಡ ಲಾಲಪ್ಪ ರಾಠೋಡ್ ಆಗ್ರಹಿಸಿದರು.ಪಟ್ಟಣದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೆಗ್ಗಾಪುರ ತಾಂಡಾದಲ್ಲಿ ಜಾತಿ ಸಮೀಕ್ಷೆಗೆ ನೇಮಕವಾದ ಶಿಕ್ಷಕ ಸೋಮಪ್ಪ ಜಾತಿ ಸಮೀಕ್ಷೆ ಕಾಲಂನದಲ್ಲಿ ಲಂಬಾಣಿ ಅಂತ ಬರೆದುಕೊಳ್ಳದೇ ಆದಿ ಆಂಧ್ರ ಎಂದು ನಮೂದಿಸಿದ್ದಾರೆ. ಇದನ್ನು ತಾಂಡಾದಲ್ಲಿ ಇರುವ ವಿದ್ಯಾವಂತ ಯುವಕರು ಗಮನಸಿದ್ದಾರೆ. ಇದರ ಕುರಿತು ಪ್ರಶ್ನಿಸಿದಾಗ ಆದರೆ ಶಿಕ್ಷಕ ಸೋಮಪ್ಪ ಆದಿ ಆಂಧ್ರ ಸರಿಯಾದದ್ದು ಎಂದೇ ವಾದ ಮಾಡಿದ್ದಾರೆ. ಇದರ ಕುರಿತು ಸಹಾಯಕ ಆಯುಕ್ತರ ಗಮನಕ್ಕೆ ತಂದರೂ ಸಹಾಯಕ ಆಯುಕ್ತರು ನಮ್ಮ ಮನವಿಗೆ ಸ್ಪಂದಿಸದೇ ಸರ್ಕಾರ ಆದೇಶ ದಿಕ್ಕಿರಿಸಿದ್ದಾರೆ ಎಂದು ಆರೋಪಿಸಿದರು.ಹೆಗ್ಗಾಪುರ ತಾಂಡದಲ್ಲಿ ನಡೆದ ತಪ್ಪು ಜಾತಿ ಗಣತಿ ಕೈಬಿಟ್ಟು ಮರು ಸಮೀಕ್ಷೆ ಮಾಡಿ ಅಲ್ಲಿ ವಾಸ ಮಾಡುವ ಜನರದು ಜಾತಿ ಕಲಂನಲ್ಲಿ ಲಂಬಾಣಿ ಎಂದು ಸೇರಿಸಬೇಕು. ಅಲ್ಲದೇ ಜಾತಿ ಸಮೀಕ್ಷೆ ತಪ್ಪಾಗಿ ನಡೆಸಿದ ಶಿಕ್ಷಕ ಸೋಮಪ್ಪನವರನ್ನು ಕೂಡಲೇ ಅಮಾನತು ಮಾಡಬೇಕು. ಇದರ ಕುರಿತು ಸಹಾಯಕ ಆಯುಕ್ತರು ನಿರ್ಲಕ್ಷ ವಹಿಸಿದೇ ಇದೇ 12ರಂದು ಬಂಜಾರ, ಭೋವಿ, ಕೊರಮ, ಕೊರಚ ಹಾಗೂ ಇತರೆ ತಳ ಸಮುದಾಯಗಳ ಜನರೊಂದಿಗೆ ರಾಜ್ಯದಾದ್ಯಂತ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು.ಸುದ್ದಿಗೋಷ್ಠಿಯಲ್ಲಿ ಒಳ ಮೀಸಲಾತಿ ಸಂರಕ್ಷಣಾ ಸಮಿತಿ ಅಧ್ಯಕ್ಷ ನಾಗರೆಡ್ಡಿ ರಾಠೋಡ, ಪ್ರಧಾನ ಕಾರ್ಯದರ್ಶಿ ದೇವರೆಡ್ಡಿ ಭೋವಿ, ಅಖಿಲ ಭಾರತ ಬಂಜಾರ ಸೇವಾ ಸಂಘದ ಜಿಲ್ಲಾಧ್ಯಕ್ಷ ನಾರಾಯಣಪ್ಪ ನಾಯ್ಕ, ರಾಜ್ಯ ಕೋಶಾಧ್ಯಕ್ಷ ಜಿವಲೆಪ್ಪ ನಾಯ್ಕ, ಅಮರೇಶ ಕಟ್ಟಿಮನಿ ಇದ್ದರು.---10ಕೆಪಿಎಲ್ಎನ್ಜಿ01 :ಲಾಲಪ್ಪ ರಾಠೋಡ