ಶಿವಾನಂದ ಗೊಂಬಿ
ಚುನಾವಣೆ ಎಂದರೆ ಆಯಾ ಸಮುದಾಯದ ಜನಸಂಖ್ಯೆ ಆದರಿಸಿಯೇ ಲೆಕ್ಕಾಚಾರ ಇರುತ್ತದೆ. ಆದರೆ, ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಜಾತಿಗಿಂತ ವ್ಯಕ್ತಿಯೇ ಮುಖ್ಯ ಎಂಬುದನ್ನು ಕಳೆದ 17 ಚುನಾವಣೆಗಳಲ್ಲಿ ಮತದಾರರು ಸಾಬೀತುಪಡಿಸಿದ್ದಾರೆ. ಇಲ್ಲಿ ಜಾತಿ ಆಧಾರದ ಮೇಲೆ ಅಭ್ಯರ್ಥಿಯಾಗಿದ್ದೇ ಇಲ್ಲ.
ಧಾರವಾಡ ಜಿಲ್ಲೆಯ ಏಳು ಹಾಗೂ ಹಾವೇರಿ ಜಿಲ್ಲೆಯ ಶಿಗ್ಗಾಂವಿ- ಸವಣೂರು ಸೇರಿ ಒಟ್ಟು ಎಂಟು ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿದ್ದು, ಒಟ್ಟು17,91,386 ಮತದಾರರನ್ನು ಹೊಂದಿದೆ. ಇದರಲ್ಲಿ ಸರಿಸುಮಾರು 5 ಲಕ್ಷ ವೀರಶೈವ- ಲಿಂಗಾಯತ ಮತದಾರರಿದ್ದರೆ, ಎಸ್ಸಿಎಸ್ಟಿ- 2.25 ಲಕ್ಷಕ್ಕೂ ಅಧಿಕ, ಮುಸ್ಲಿಂ 3.10 ಲಕ್ಷ, ಕುರುಬ- 2 ಲಕ್ಷ, ವಿವಿಧ ಹಿಂದುಳಿದ ವರ್ಗ- 3.7 ಲಕ್ಷ, ಬ್ರಾಹ್ಮಣ, ರಡ್ಡಿ ಸಮುದಾಯ- 1 ಲಕ್ಷ ಸೇರಿದಂತೆ ವಿವಿಧ ಸಣ್ಣ ಪುಟ್ಟಸಮುದಾಯಗಳು ಸೇರಿ 17,91,386 ಮತದಾರರಿದ್ದಾರೆ.ಇಲ್ಲಿ ಲಿಂಗಾಯತ- ವೀರಶೈವ ಸಮಾಜಕ್ಕೆ ಸೇರಿದ ಮತದಾರರ ಸಂಖ್ಯೆಯೇ ದೊಡ್ಡ ಪ್ರಮಾಣದಲ್ಲಿದೆ. ವಿಧಾನಸಭೆ ಚುನಾವಣೆಗಳಲ್ಲೂ ಅದೇ ಸಮಾಜದವರೇ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರಾಗಿ ಆಯ್ಕೆಯಾಗುತ್ತಾರೆ. ಆದರೆ ಲೋಕಸಭೆ ಚುನಾವಣೆಯಲ್ಲಿ ಮಾತ್ರ ಕ್ಷೇತ್ರದಲ್ಲಿ ಕಡಿಮೆ ಮತಗಳನ್ನು ಹೊಂದಿದ ಸಮುದಾಯದ ಅಭ್ಯರ್ಥಿಗಳೇ ಹೆಚ್ಚಿನ ಬಾರಿ ಆಯ್ಕೆಯಾಗಿರುವುದು ಹಿಂದಿನ ಚುನಾವಣೆಗಳ ಫಲಿತಾಂಶ ಸಾಕ್ಷಿಯಾಗಿದೆ.
1952ರಿಂದ ಈ ವರೆಗೆ 17 ಚುನಾವಣೆಗಳು ನಡೆದಿವೆ. ಐವರು ಮಾತ್ರ ಸಂಸದರಾಗಿ ಆಯ್ಕೆಯಾಗುವ ಮೂಲಕ ಪದೇ ಪದೇ ಅವರನ್ನೇ ಆಯ್ಕೆ ಮಾಡುವ ಕ್ಷೇತ್ರವಿದು ಎಂಬುದನ್ನು ಸಾಬೀತಾಗಿದೆ. ಇನ್ನೊಂದು ವಿಚಿತ್ರವೆಂದರೆ ಈ ವರೆಗೆ ಆಯ್ಕೆಯಾದ ಐವರು ಸಂಸದರಲ್ಲಿ ಒಬ್ಬರೇ ಒಬ್ಬರು ಲಿಂಗಾಯತ ಸಮುದಾಯಕ್ಕೆ ಸೇರಿದವರು. ಹೆಚ್ಚು ಬಾರಿ ಸೋತವರು ಲಿಂಗಾಯತ ಸಮುದಾಯಕ್ಕೆ ಸೇರಿದವರು ಎಂಬುದು ಅಷ್ಟೇ ಸತ್ಯ. ಆಯ್ಕೆಯಾದ ಇನ್ನುಳಿದ ನಾಲ್ವರಲ್ಲಿ ಮೂವರು ಬ್ರಾಹ್ಮಣರಾದರೆ, ಇನ್ನೊಬ್ಬರು ಕುರುಬ ಸಮುದಾಯದವರು.
ಬಳಿಕ 1996ರಿಂದ 2004ರ ವರೆಗೆ ಲಿಂಗಾಯತ ಸಮುದಾಯದ ವಿಜಯ ಸಂಕೇಶ್ವರ ಕ್ಷೇತ್ರದಲ್ಲಿ ಜಯಸಾಧಿಸಿ ಸಂಸದರಾಗಿದ್ದರು. ಈ ಮೂರು ಚುನಾವಣೆಗಳಲ್ಲಿ ಮಾತ್ರ ಲಿಂಗಾಯತ ಸಮುದಾಯಕ್ಕೆ ಸೇರಿದವರು ಸಂಸದರಾಗಿದ್ದರು. ಬಳಿಕ 2004ರಿಂದ ನಾಲ್ಕು ಚುನಾವಣೆಯಲ್ಲಿ ಬ್ರಾಹ್ಮಣ ಸಮುದಾಯದ ಪ್ರಹ್ಲಾದ ಜೋಶಿ ಸಂಸದರಾಗಿದ್ದಾರೆ. ಈಗಲೂ ಅವರೇ ಬಿಜೆಪಿಯಿಂದ ಕಣಕ್ಕಿಳಿಯುತ್ತಿದ್ದಾರೆ. ಇವರ ವಿರುದ್ಧ ಕಾಂಗ್ರೆಸ್‌ನ ಕುರುಬ ಸಮುದಾಯದ ವಿನೋದ ಅಸೂಟಿ ಅವರನ್ನು ಪಕ್ಷ ಕಣಕ್ಕಿಳಿಸುತ್ತಿದೆ. ಕಾಂಗ್ರೆಸ್ ಈ ಸಲ ಅಹಿಂದ ಮತ ಬುಟ್ಟಿಗೆ ಹಾಕಿಕೊಂಡು ಜೋಶಿ ಅವರ ಗೆಲುವಿನ ಓಟಕ್ಕೆ ಬ್ರೇಕ್ ಹಾಕಬೇಕೆಂಬ ಇರಾದೆ ಹೊಂದಿದೆ.
ಪದೇ ಪದೇ ಆಯ್ಕೆಯ ಕ್ಷೇತ್ರ: