ಪರಂಪರೆ, ಆಧುನಿಕತೆ ಸಮನ್ವಯಗೊಳ್ಳುವ ಅಗತ್ಯವಿದೆ

KannadaprabhaNewsNetwork |  
Published : Jun 13, 2026, 01:15 AM IST
೧೨ಶಿರಾ೨: ಶಿರಾ ತಾಲೂಕು ಬುಕ್ಕಾಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ “ಸ್ಪಂದನ ೨೦೨೬” ಸಮಾರೋಪ ಸಮಾರಂಭ ಹಾಗೂ ಅಂತಿಮ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮವನ್ನು ಡಾ. ಬಾಳಪ್ಪ ಎ.ಬಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಪರಂಪರೆ ಮತ್ತು ಆಧುನಿಕತೆ ಸಮನ್ವಯಗೊಳ್ಳುವುದು ಇಂದಿನ ಅನಿವಾರ್ಯತೆ ಹಾಗೂ ಅಗತ್ಯವಾಗಿದೆ ಎಂದು ಶಿರಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ. ಬಾಳಪ್ಪ ಎ.ಬಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಶಿರಾ

ಪರಂಪರೆ ಮತ್ತು ಆಧುನಿಕತೆ ಸಮನ್ವಯಗೊಳ್ಳುವುದು ಇಂದಿನ ಅನಿವಾರ್ಯತೆ ಹಾಗೂ ಅಗತ್ಯವಾಗಿದೆ ಎಂದು ಶಿರಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ. ಬಾಳಪ್ಪ ಎ.ಬಿ ಅಭಿಪ್ರಾಯಪಟ್ಟರು.

ಅವರು ಶಿರಾ ತಾಲೂಕು ಬುಕ್ಕಾಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಸ್ಪಂದನ ೨೦೨೬ ಸಮಾರೋಪ ಸಮಾರಂಭ ಹಾಗೂ ಅಂತಿಮ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಹಾಗೂ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಅವರು ಮಾತನಾಡಿದರು. ಇಂದಿನ ಆಧುನಿಕತೆಯ ಭರಾಟೆಯಲ್ಲಿ ನಮ್ಮ ಪರಂಪರೆ, ಮಣ್ಣಿನ ಸೊಗಡು ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಮರೆತಿರುವುದು ಸಮಾಜದಲ್ಲಿ ಅನೇಕ ಸಮಸ್ಯೆಗಳು ಮತ್ತು ದುರಂತಗಳಿಗೆ ಕಾರಣವಾಗುತ್ತಿದೆ, ವಿದ್ಯಾರ್ಥಿಗಳು ವ್ಯಕ್ತಿತ್ವ ವಿಕಸನ, ಮೌಲ್ಯಯುತ ಜೀವನ ಹಾಗೂ ಶಿಕ್ಷಣದ ಮಹತ್ವವನ್ನು ಅರಿತು ಸಮಾಜಮುಖಿ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಧರಣೇಂದ್ರ ಕುಮಾರಿ ವಹಿಸಿದ್ದರು. ಈ ಸಂದರ್ಭದಲ್ಲಿ ವಿದ್ಯಾರಣ್ಯ ಕಾಲೇಜಿನ ಪ್ರಾಂಶುಪಾಲರಾದ ಈರಣ್ಣ, ಹುಯಿಲದೊರೆ ಪ.ಪೂ ಕಾಲೇಜಿನ ಪ್ರಾಂಶುಪಾಲರಾದ ಪುಟ್ಟರಾಜು, ಬೋರನಕಣಿವೆ ಪ್ರಾಂಶುಪಾಲರಾದ ರೇವಣ್ಣ, ಕಾ.ಅ.ಸ ಸದಸ್ಯರಾದ ದಿವಾಕರ್, ನವೀನ್ ಕುಮಾರ್, ಬೋರಯ್ಯ, ಹಾಗೂ ನೂರ್ ಆಯಿಷಾ, ಕಾಲೇಜಿನ ಪ್ರಾಧ್ಯಾಪಕರಾದ ಡಾ. ಹನುಮಂತರಾಯ ಎಸ್.ಆರ್., ಸತೀಶ್ ಎ.ಎಂ., ವಿಜಯ್ ಎನ್., ಲೋಕೇಶ್, ಮಹೇಶ್ ಎನ್., ಡಾ. ಖಲೀದಾಖಾನಂ, ಅಮೃತ, ಶಾರ್ವರಿ, ಪುಟ್ಟಲಿಂಗಪ್ಪ, ಶ್ರೀನಿವಾಸ್, ಜಗದೀಶ್, ನಾಗರಾಜರಾವ್, ನರೇಂದ್ರ ಬಾಬು, ಸಚಿನ್ ಹಾಗೂ ಬಾನು ಸೇರಿದಂತೆ ಎಲ್ಲಾ ವಿಭಾಗಗಳ ಪ್ರಾಧ್ಯಾಪಕರು ವಿದ್ಯಾರ್ಥಿಗಳು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಿಪಟೂರಿನಲ್ಲಿ ರಾತ್ರಿಯೇ ಸ್ವಚ್ಛವಾಗಲಿದೆ ನಗರ
ಕುಡಿವ ನೀರು ಸಮಸ್ಯೆ ಉಂಟಾದಲ್ಲಿ ಅಧಿಕಾರಿಗಳೇ ಹೊಣೆ