ಗ್ಯಾರಂಟಿ ಪ್ರಗತಿ ಪರಿಶೀಲನಾ ಸಭೆಗೆ ಹೆಸ್ಕಾಂ ಅಧಿಕಾರಿಗಳು ಗೈರು

KannadaprabhaNewsNetwork |  
Published : Oct 24, 2025, 01:00 AM IST
ಪೊಟೋ23ಎಸ್.ಆರ್‌.ಎಸ್‌9 (ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಸಭೆ ಶಿರಸಿಯಲ್ಲಿ ನಡೆಯಿತು.) | Kannada Prabha

ಸಾರಾಂಶ

ಗ್ಯಾರಂಟಿ ಯೋಜನೆಯ ಸಭೆಗೆ ಪದೇ ಪದೇ ಹೆಸ್ಕಾಂ ಅಧಿಕಾರಿಗಳು ಗೈರಾಗುತ್ತಿದ್ದು, ತಿಂಗಳದಲ್ಲಿ 2 ಬಾರಿ ಸಭೆ ನಡೆಸಲಾಗುತ್ತಿದೆ.

ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷೆ ಸುಮಾ ಉಗ್ರಾಣಕರ್ ಆಕ್ಷೇಪಕನ್ನಡಪ್ರಭ ವಾರ್ತೆ ಶಿರಸಿ

ಗ್ಯಾರಂಟಿ ಯೋಜನೆಯ ಸಭೆಗೆ ಪದೇ ಪದೇ ಹೆಸ್ಕಾಂ ಅಧಿಕಾರಿಗಳು ಗೈರಾಗುತ್ತಿದ್ದು, ತಿಂಗಳದಲ್ಲಿ 2 ಬಾರಿ ಸಭೆ ನಡೆಸಲಾಗುತ್ತಿದೆ. ಕನಿಷ್ಠ ಒಂದು ಸಭೆಗಾದರೂ ಅಧಿಕಾರಿಗಳು ಭಾಗವಹಿಸದೇ ಸಿಬ್ಬಂದಿ ಇಲ್ಲ ಎಂಬ ಕಾರಣ ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯ ವಿತರಿಸುವಲ್ಲಿ ಅಡಚಣೆ ಆಗುತ್ತಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷೆ ಸುಮಾ ಉಗ್ರಾಣಕರ್ ಆಕ್ಷೇಪಿಸಿದರು.

ಗುರುವಾರ ನಗರದ ತಾಪಂ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ರಾಜ್ಯದ ಕಾಂಗ್ರೆಸ್‌ ಸರ್ಕಾರದ ಪಂಚ ಯೋಜನೆಗಳು ಪ್ರತಿಯೊಬ್ಬರಿಗೂ ತಲುಪಬೇಕು. ಇನ್ನೂ ಸಹ ಫಲಾನುಭವಿಗಳು ತಪ್ಪಿದ್ದು, ಅವರ ಬಗ್ಗೆ ಮಾಹಿತಿ ಸಂಗ್ರಹಿಸಿ ಅವರಿಗೆ ತಲುಪುವಂತೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕು ಸದಸ್ಯ ಪ್ರಸನ್ನ ಶೆಟ್ಟಿ ಮಾತನಾಡಿ, ಕಳೆದ ತಿಂಗಳು ಗ್ಯಾರಂಟಿ ಯೋಜನೆ ಪ್ರಾಧಿಕಾರಕ್ಕೆ ಬಿಡುಗಡೆ ಆದ ಹಣದಲ್ಲಿ ₹75 ಸಾವಿರ ಹಣ ವಾಪಸ್‌ ಹೋಗಿದೆ. ಸಾರ್ವಜನಿಕರಿಗೆ ತಲುಪಬೇಕಾದ ಈ ಹಣ ವಾಪಸ್‌ ಹೋಗದಂತೆ ನೋಡಿಕೊಳ್ಳಬೇಕಾಗಿರುವುದು ಅಧಿಕಾರಿಗಳ ಜವಾಬ್ದಾರಿ. ಯೋಜನೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಕೇಳಿದರೆ ಆ ಮಾಹಿತಿ ಪತ್ರಕ್ಕೆ ಅಧಿಕಾರಿಗಳು ಸಹಿ ಸಹ ಹಾಕದೇ ನೀಡುತ್ತಾರೆ. ಅದು ಬೇಜವಾಬ್ದಾರಿಯ ಲಕ್ಷಣ ಎಂದು ಆರೋಪಿಸಿದರು.

ಪ್ರಾಧಿಕಾರದ ಸಭೆಗಳ ವೇಳೆ ಅಲ್ಪೋಪಹಾರಕ್ಕಾಗಿ ₹29 ಸಾವಿರ ಖರ್ಚು ತೋರಿಸಲಾಗಿದೆ. ನಮಗೆ ಅಲ್ಪೋಪಹಾರ ಬೇಕಾಗಿಲ್ಲ. ಬದಲಿಗೆ ಈ ಹಣದಿಂದ ಪ್ರತಿ ಗ್ರಾಪಂನಲ್ಲಿಯೂ ಪಂಚ ಯೋಜನೆಗಳ ಕುರಿತು ಹಾಗೂ ಅವುಗಳನ್ನು ಪಡೆಯುವ ವಿಧಾನದ ಕುರಿತು ಮಾಹಿತಿ ಫಲಕ ಅಳವಡಿಸಿ. ಇದರಿಂದ ಸಾರ್ವಜನಿಕರಿಗೆ ಪ್ರಯೋಜನವಾಗುತ್ತದೆ ಎಂದರು.

ಪ್ರಾಧಿಕಾರದ ತಾಲೂಕು ಉಪಾಧ್ಯಕ್ಷ ನಾಗರಾಜ ಮುರ್ಡೆಶ್ವರ, ಪ್ಲಾನಿಂಗ್ ಸಮಿತಿ ಅಧ್ಯಕ್ಷ ಅಶೋಕ ಮತ್ತಿತರರು ಇದ್ದರು.

PREV

Recommended Stories

2028ರ ವರೆಗೂ ಸಿದ್ದರಾಮಯ್ಯ ಸಿಎಂ : ಸಚಿವ ಜಮೀರ್ ಅಹ್ಮದ್
ನಾವು ಆರೆಸ್ಸೆಸ್‌ ಗುಲಾಮರಲ್ಲ : ಪ್ರಿಯಾಂಕ್‌ ಖರ್ಗೆ