ಲಾರಿ ಹಾಯ್ದು ಪೊಲೀಸ್ ಚೆಕ್‌ಪೋಸ್ಟ್ ಧ್ವಂಸ

KannadaprabhaNewsNetwork |  
Published : Oct 24, 2025, 01:00 AM IST
ಪೊಲೀಸ್  ಚಕ್ ಪೋಸ್ಟ್ ಮೇಲೆ ಲಾರಿ ಹಾಯ್ದು ನುಜ್ಜುಗುಜ್ಜಾಗಿರುವುದು  | Kannada Prabha

ಸಾರಾಂಶ

ಪೊಲೀಸ್ ಚೆಕ್‌ಪೋಸ್ಟ್ ಮೇಲೆ ಲಾರಿ ಬಿದ್ದು ಅದೃಷ್ಟಶವಶಾತ್ ಪೊಲೀಸ್ ಸಿಬ್ಬಂದಿ ಜೀವಾಪಾಯದಿಂದ ಪಾರಾದ ಘಟನೆ ಹಿರೇಗುತ್ತಿಯಲ್ಲಿ ಗುರುವಾರ ಬೆಳಗಿನ ಜಾವ ನಡೆದಿದೆ.

ಕನ್ನಡಪ್ರಭ ವಾರ್ತೆ ಗೋಕರ್ಣ

ಪೊಲೀಸ್ ಚೆಕ್‌ಪೋಸ್ಟ್ ಮೇಲೆ ಲಾರಿ ಬಿದ್ದು ಅದೃಷ್ಟಶವಶಾತ್ ಪೊಲೀಸ್ ಸಿಬ್ಬಂದಿ ಜೀವಾಪಾಯದಿಂದ ಪಾರಾದ ಘಟನೆ ಹಿರೇಗುತ್ತಿಯಲ್ಲಿ ಗುರುವಾರ ಬೆಳಗಿನ ಜಾವ ನಡೆದಿದೆ.

ಈ ಹಿಂದೆ ಸಂಚಾರಿ ಪೊಲೀಸ್ ಠಾಣೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಕಚೇರಿಯನ್ನ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದಿಂದ ತೆರವು ಮಾಡಲಾಗಿತ್ತು. ನಂತರ ಸಿಬ್ಬಂದಿಗೆ ಕಾರ್ಯನಿರ್ವಹಿಸಲು ಅರೆಬರೆಯಾದ ಚತುಷ್ಪಥ ರಸ್ತೆಯ ಮಧ್ಯದಲ್ಲಿ ತಾತ್ಕಾಲಿಕ ತಗಡಿನ ಶೆಡ್ ನಿರ್ಮಿಸಿಕೊಡಲಾಗಿತ್ತು. ಇಲ್ಲಿಯೇ ಕುಳಿತು ವಾಹನ ತಪಾಸಣೆ ಹಾಗೂ ಸಂಚಾರ ದಟ್ಟಣೆಯ ನಿಗಾ ವಹಿಸಲಾಗುತ್ತಿತ್ತು. ಬುಧವಾರ ರಾತ್ರಿ ೧.೩೦ಸುಮಾರಿಗೆ ಅಂಕೋಲಾದಿಂದ ಕುಮಟಾ ಕಡೆ ತೆರಳುತ್ತಿದ್ದ ಸರಕು ತುಂಬಿದ ಲಾರಿ ನಿಯಂತ್ರಣ ತಪ್ಪಿ ಶೆಡ್ ಹತ್ತಿರ ನುಗ್ಗಿದ್ದು, ತಕ್ಷಣ ಎಚ್ಚೆತ್ತುಗೊಂಡ ಕರ್ತವ್ಯದಲ್ಲಿದ್ದ ಸಿಬ್ಬಂದಿ ತಪ್ಪಿಸಿಕೊಂಡಿದ್ದು, ಸಣ್ಣ, ಪುಟ್ಟ ಗಾಯಗಳಾಗಿದ್ದು, ಜೀವ ಉಳಿಸಿಕೊಂಡಿದ್ದಾರೆ. ಸ್ಥಳಕೆ ಪಿಐ ಶ್ರೀಧರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಾರ್ವಜನಿಕರ ಆಕ್ರೋಶ:

ಹೆದ್ದಾರಿ ಅಗಲೀಕರಣ ಕಾರ್ಯಮಾಡುತ್ತಿರುವ ಐಆರ್‌ಬಿ ಕಂಪನಿಯವರ ನಿರ್ಲಕ್ಷದಿಂದ ಈ ಅವಘಡ ನಡೆದಿದ್ದು, ಈ ಹಿಂದೆ ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ತ್ವರಿತವಾಗಿ ರಸ್ತೆ ಸರಿಪಡಿಸಿ, ಟ್ರಾಫಿಕ್ ಪೊಲೀಸ್ ಠಾಣೆ ನಿರ್ಮಿಸಿ ಕೊಡುವಂತೆ ಆಗ್ರಹಿಸಿದ್ದು, ಇಲ್ಲವಾದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದಾರೆ.

ಗ್ರಾಪಂ ಅಧ್ಯಕ್ಷ ಶಾಂತಾ ನಾಯಕ ಮಾತನಾಡಿ, ಗ್ರಾಮ ಸಭೆ ಸೇರಿದಂತೆ ವಿವಿಧ ಸಮಯದಲ್ಲಿ ನಾವು ಸಂಬಂಧಿಸಿದ ಇಲಾಖೆಗೆ ಮನವಿ ಮಾಡಲಾಗಿದ್ದು, ಇಲ್ಲಿನ ಸಮಸ್ಯೆ ಹೀಗೆ ನಿರ್ಲಕ್ಷಿಸುತ್ತಾ ಹೋದರೆ ಜನರಿಗೆ ಆಗುವ ತೊಂದರೆ ಬಗ್ಗೆ ನ್ಯಾಯಾಲಯದ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.ಗೋಕರ್ಣ: ಸಂಭ್ರದಿಂದ ನಡೆದ ಗೋಪೂಜೆ

ಪುರಾಣ ಪ್ರಸಿದ್ಧ ಕ್ಷೇತ್ರದ ವಿವಿಧೆಡೆ ದೀಪಾವಳಿ ಹಬ್ಬದ ಗೋಪೂಜೆ ಬಲಿಪಾಡ್ಯ ದಿನವಾದ ಬುಧವಾರ ಅದ್ದೂರಿಯಾಗಿ ನಡೆಯಿತು.ಹಲವು ಮನೆಗಳಲ್ಲಿ ಸಾಕಿದ ಗೋಮಾತೆಗೆ ಸ್ನಾನ ಮಾಡಿಸಿ, ಅರಿಶಿನ ಕುಂಕುಮ, ಹಾಗೂ ಹೂವಿನ ಮಾಲೆ ಹಾಕಿ ಶೃಂಗರಿಸಿ ವಿಶೇಷ ಪೂಜೆ ನೆರವೇರಿಸಿ, ಗೋಗ್ರಾಸ ನೀಡಿ ಗೋಮಾತೆಗೆ ವಂದಿಸಿದರು.ನಂತರ ಕೊಟ್ಟಿಗೆಯ ಹಿರಿಯ ಆಕಳಿಗೆ ಅಥವಾ ಎತ್ತಿಗೆ ಕೊರಳಿಗೆ ತೆಂಗಿನ ಕಾಯಿ ಕಡಿ, ನೈವೇದ್ಯ ಮಾಡಿದ ಕಡಬು ಪೊಟ್ಟಣ ಕಟ್ಟಿ ಹೊರಗೆ ಬಿಡುವ ಪದ್ದತಿಯಿದ್ದು, ಇದರಂತೆ ಕೆಲವು ಕಡೆ ನಡೆಯಿತು. ಅಲ್ಲದೆ ಹೊರಗೆ ಬಿಟ್ಟಾಗ ಅದನ್ನು ಬಿಡಿಸಲು ಮಕ್ಕಳ ಗುಂಪು ಪೈಪೋಟಿಯಲ್ಲಿ ತೆಯುವುದು ಗೋವು ತನ್ನ ಕುತ್ತಿಗೆಯ ಪೊಟ್ಟಣ ಬಿಡಿಸಲು ಅಷ್ಟು ಸರಳವಾಗಿ ಕೊಡದೆ ಓಡುವುದು ಬಹು ಆಕರ್ಷಕವಾಗಿತ್ತು. ಇತ್ತ ಮಕ್ಕಳು ಒಂದಾದರೂ ಕಾಯಿ ಕಡಿ ಬಿಡಿಸಿಕೊಂಡರೆ ಖುಷಿಯ ಸಂಭ್ರಮದಲ್ಲಿಯೇ ಎಲ್ಲರೂ ಹಂಚಿ ತಿಂದು ಸಂಭ್ರಮಿಸುತ್ತಾರೆ. ಈ ಆಚರಣೆ ಇತ್ತೀಚಿಗೆ ವಿರಳವಾಗುತ್ತಿದೆ. ಬಹುತೇಕ ಗೋವುಗಳು ಸಂಜೆ ಕೊಟ್ಟಿಗೆಗೆ ವಾಪಸ್ ಬರುವಾಗ ಪೊಟ್ಟಣ, ಕಡಿ ಸಮೇತವಾಗಿ ಬರುವುದು ಹೆಚ್ಚಾಗಿದ್ದು, ಬಂದ ಗೋವುಗಳಿಗೆ ಯಜಮಾನ ಆರತಿ ಬೆಳಗಿ ಹೇಳಿಕೆ ಮಾಡಿಕೊಂಡು, ಚಿನ್ನದ ತುಂಡನ್ನ ತೋರಿಸಿ ಪ್ರಾರ್ಥಿಸಿದರು. ಆಭರಣ ಅಡವಿಟ್ಟಾದರೂ ಹುಲ್ಲು ಕಟ್ಟು ತಂದು ಸಾಕುವೆ ಎನ್ನುವ ಹೇಳಿಕೆ ಮಾಡಿಕೊಳ್ಳುವುದು ಇದರ ಉದ್ದೇಶವಾಗಿದ್ದು, ರೈತರು ಚಾಚು ತಪ್ಪದೇ ಈ ಪದ್ಧತಿ ಅನುಸರಿಸುತ್ತ ಗೋವಿನ ಸೇವೆ ಮಾಡುವ ಹಿಂದಿನ ತಲೆಮಾರಿನ ಅನುಕರಣೆ ಇಂದಿಗೂ ಮುಂದುವರೆಸುವುದು ಗೋವು ಸಾಕುವ ಮನೆಯಲ್ಲಿ ಈಗಲೂ ಕಂಡುಬಂತು. ಇನ್ನೂ ಹಾಲಕ್ಕಿ ಒಕ್ಕಲಿಗ ಸಮಾಜದವರು ಇನ್ನೂ ಅನೇಕ ವಿಶಿಷ್ಟ ಪದ್ದತಿಯ ಮೂಲಕ ಗೋಮಾತೆ ಆರಾಧಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು