ಜೆ.ಜಿ.ಸಹಕಾರಿ ಆಸ್ಪತ್ರೆಗೆ ಹೈಕೋರ್ಟ್‌ ನೋಟಿಸ್‌

KannadaprabhaNewsNetwork | Published : Apr 1, 2025 12:47 AM

ಸಾರಾಂಶ

ಜೆ.ಜಿ.ಸಹಕಾರಿ ಆಸ್ಪತ್ರೆ ಸೊಸೈಟಿ ನಿಯಮಿತ ಘಟಪ್ರಭಾದಲ್ಲಿ ಭ್ರಷ್ಟಾಚಾರ ಸಂಶಯ ವ್ಯವಕ್ತಪಡಿಸಿ ಸಂಸ್ಥೆಯ ಸದಸ್ಯ ಕಲ್ಲಪ್ಪ ಕಾಡದವರ ಹೈಕೋರ್ಟ್‌ ಮೆಟ್ಟಿಲೇರಿದ್ದು, ಸದಸ್ಯರಿಗೆ ಮಾಹಿತಿ ಒದಗಿಸಲು ನಿರಾಕರಿಸಿದ ಕುರಿತು ಸರ್ಕಾರ ಮತ್ತು ಜೆಜಿಕೋ ಆಸ್ಪತ್ರೆಗೆ ಹೈಕೋರ್ಟ್‌ ನೋಟಿಸ್ ಜಾರಿ ಮಾಡಿ ಆದೇಶಿಸಿದೆ.

ಕನ್ನಡಪ್ರಭ ವಾರ್ತೆ ಗೋಕಾಕ

ಜೆ.ಜಿ.ಸಹಕಾರಿ ಆಸ್ಪತ್ರೆ ಸೊಸೈಟಿ ನಿಯಮಿತ ಘಟಪ್ರಭಾದಲ್ಲಿ ಭ್ರಷ್ಟಾಚಾರ ಸಂಶಯ ವ್ಯವಕ್ತಪಡಿಸಿ ಸಂಸ್ಥೆಯ ಸದಸ್ಯ ಕಲ್ಲಪ್ಪ ಕಾಡದವರ ಹೈಕೋರ್ಟ್‌ ಮೆಟ್ಟಿಲೇರಿದ್ದು, ಸದಸ್ಯರಿಗೆ ಮಾಹಿತಿ ಒದಗಿಸಲು ನಿರಾಕರಿಸಿದ ಕುರಿತು ಸರ್ಕಾರ ಮತ್ತು ಜೆಜಿಕೋ ಆಸ್ಪತ್ರೆಗೆ ಹೈಕೋರ್ಟ್‌ ನೋಟಿಸ್ ಜಾರಿ ಮಾಡಿ ಆದೇಶಿಸಿದೆ.

ಜೆ.ಜಿ.ಸಹಕಾರಿ ಆಸ್ಪತ್ರೆ ಸೊಸೈಟಿ ನಿ, ಘಟಪ್ರಭಾ ಇದರ ಅಂಗ ಸಂಸ್ಥೆಗಳಾಗಿರುವ ಆಯುರ್ವೇದಿಕ ಬಿಎಎಂಎಸ್ ಮೆಡಿಕಲ್ ಕಾಲೇಜು, ಬಿಎಸ್ಸಿ, ಎಂಎಸ್ಸಿ ನರ್ಸಿಂಗ್‌ ಕಾಲೇಜು, ಡಿಪ್ಲೋಮಾ ಜನರಲ್ ನರ್ಸಿಂಗ್‌ ಕಾಲೇಜು, ಕಾಲೇಜ ಆಫ್ ಫಾರ್ಮಸಿ, ಪ್ಯಾರಾ ಮೆಡಿಕಲ್ ಕೋರ್ಸ್‌, ಜೆಜಿಕೋ ಆಸ್ಪತ್ರೆ, ಅಯುರ್ವೇದ ಎಂಡಿ ಕಾಲೇಜು ಸೇರಿ ಬಿಎಂಎಸ್ ಕಾಲೇಜು ಕಟ್ಟಡ, ಹಾಸ್ಟೆಲ್ ಕಟ್ಟಡಗಳ ಹಣಕಾಸಿನ ದಾಖಲೆ ಪತ್ರಗಳನ್ನು ನೀಡುವಂತೆ ಇದೇ ಸಂಘದ ಸದಸ್ಯ ಕಲ್ಲಪ್ಪ ಕಾಡದವರ ದಾಖಲೆ ಪತ್ರಗಳನ್ನು ಕೊಡಲು ನಿರಾಕರಿಸಿದ್ದರಿಂದ ಧಾರವಾಡ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಮಾ.25ರಂದು ಧಾರವಾಡ ಹೈಕೋರ್ಟ್‌ ಪೀಠ ಆಸ್ಪತ್ರೆಗೆ ನೋಟಿಸ್ ಜಾರಿ ಮಾಡಿದೆ.

ಘಟನೆ ಹಿನ್ನೆಲೆ:

ಪ್ರತಿಷ್ಠಿತ ಜೆ.ಜಿ.ಸಹಕಾರಿ ಆಸ್ಪತ್ರೆ ಸೊಸೈಟಿ ನಿಯಮಿತದಲ್ಲಿ ಕೋಟ್ಯಂತರ ರುಪಾಯಿ ಹಣಕಾಸಿನ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿದೆ. ಅಲ್ಲದೇ ಸಾಕ್ಷಿಗಳನ್ನು ನಾಶ ಮಾಡಲಾಗಿದೆ. ಹೀಗಾಗಿ ಸಂಸ್ಥೆಯ ಎಲ್ಲ ಅಂಗ ಸಂಸ್ಥೆಗಳ ಹಾಗೂ ಆಸ್ಪತ್ರೆಯ ಹಣಕಾಸು ವಿಚಾರಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ನೀಡುವಂತೆ ಜೆ.ಜಿ. ಸಹಕಾರಿ ಆಸ್ಪತ್ರೆ ಸೊಸೈಟಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಕೆ.ಎಚ್.ಪಾಟೀಲ, ಬೆಳಗಾವಿ ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕರಿಗೆ ಹಾಗೂ ರಾಜ್ಯ ಸಹಕಾರಿ ಸಂಘಗಳ ಆಯುಕ್ತರಿಗೆ ಸತತವಾಗಿ ದೂರುಗಳನ್ನು ಸಲ್ಲಿಸಿದ್ದರು. ಸಂಸ್ಥೆಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕರು ಯಾವುದೇ ದಾಖಲೆಗಳನ್ನು ನೀಡಿಲ್ಲ. ಈ ಕುರಿತು ರಾಜ್ಯ ಸಹಕಾರಿ ಸಂಘಗಳ ಆಯುಕ್ತರು ಪತ್ರವನ್ನು ಉಲ್ಲೇಖಿಸಿ ಮಾಹಿತಿ ನೀಡುವಂತೆ ಶಿಫಾರಸು ಮಾಡಿದ್ದು, ಈ ಮಾಹಿತಿ ನೀಡಲು ಆಗಲ್ಲ ಎಂದು ಪತ್ರವನ್ನು ನೀಡಿದ್ದರಿಂದ ಸದಸ್ಯ ಕಲ್ಲಪ್ಪ ಕಾಡದವರ ಹೈಕೋರ್ಟ್‌ ಮೋರೆ ಹೋಗಿದ್ದರು.

Share this article