ಕನ್ನಡಪ್ರಭ ವಾರ್ತೆ ಕೆಜಿಎಫ್
ಹಿಂದು ಸಮಾಜವು ಭವ್ಯ ಸಂಸ್ಕೃತಿ, ಸಂಸ್ಕಾರವನ್ನು ಹೊಂದಿದೆ. ನಮ್ಮ ಆಚಾರ ವಿಚಾರಗಳನ್ನು ಮುಂದಿನ ಪೀಳಿಗೆ ಉಳಿಸಿ ಬೆಳಸುವ ಕಾರ್ಯದಲ್ಲಿ ತೊಡಗಬೇಕಿದೆ ಎಂದು ಚಿಕ್ಕಬಳ್ಳಾಪುರ ಮಠದ ಸ್ವಾಮೀಜಿ ಮಂಗಳಾನಂದನಾಥ ಸ್ವಾಮೀಜಿ ಹೇಳಿದರು.ಅವರು ಪ್ರಸನ್ನ ಲಕ್ಷ್ಮೀವೆಂಕಟರಮಣಸ್ವಾಮಿ ೯೦ ನೇ ಬ್ರಹ್ಮ ಮಹೋತ್ಸವದ ಪ್ರಯುಕ್ತವಾಗಿ ಒಕ್ಕಲಿಗ ಸಮುದಾಯದಿಂದ ಹಮ್ಮಿಕೊಂಡಿದ್ದ ಹುನುಮಂತ ವಾಹನೋತ್ಸವದಲ್ಲಿ ಭಾಗವಹಿಸಿ ಭಕ್ತರಿಗೆ ನೀಡಿದ ಆರ್ಶೀವಾಚನ ನೀಡಿದರು.
ಆಚಾರ ವಿಚಾರ ಮರೆಯಬಾರದುನಾವು ನಮ್ಮ ಸಂಸ್ಕೃತಿ ಆಚಾರ ವಿಚಾರಗಳನ್ನು ಮರೆತರೆ ಜೀವನದಲ್ಲಿ ನೆಮ್ಮದಿ ಕಾಣುವುದಿಲ್ಲ ಆದ್ದರಿಂದ ನಮ್ಮ ಸಂಸ್ಕೃತಿ ಆಚಾರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನೆಡೆದರೆ ಜೀವನದಲ್ಲಿ ನೆಮ್ಮದಿ ಕಾಣಲಿದ್ದೇವೆ ಜೀವನದ ಪ್ರತಿ ಕ್ಷಣ ಪರಮತ್ಮನ ಚಿಂತನೆ ಮಾಡಬೇಕು ಆದರೆ ಇಂದು ನಮ್ಮ ಸಂಸ್ಕೃತಿಗೆ ಧಕ್ಕೆ ಬರುವಂತೆ ನಡೆವಳಿಕೆಗಳು ನಡೆಯುತ್ತಿದು ಖೇಧಕರ ಸಂಗತಿ ಎಂದರು.
ನೀವು ರಸ್ತೆಯಲ್ಲಿ ತೆಗೆದುಕೊಂಡು ಬಂದ ಜ್ಯೋತಿ ಕೇವಲ ಎಣ್ಣೆ ಮತ್ತು ಬತ್ತಿಯಲ್ಲ ಆದು ಜ್ಞಾನ ಜ್ಯೋತಿ ನಿಮ್ಮ ಕುಟುಂಬ ಮತ್ತು ಅಂತರರಂಗವನ್ನು ಶುದ್ಧಿಕರಣಗೊಳಿಸುವ ಸಾಮಾರ್ಥ್ಯವನ್ನು ಹೊಂದಿದೆ ಹಾಗೂ ಪ್ರತಿಯೋಬ್ಬರು ದೀಪವನ್ನು ಹಚ್ಚುವುದರಿಂದ ನಿಮ್ಮ ಜೀವನದ ಅಂದಕಾರವನ್ನು ತೊಲಗಿಸಿ ನಿಮ್ಮ ಜೀವನದಲ್ಲಿ ಹೊಸ ಬೆಳಕು ಮೂಡಲಿದೆ. ಹಿರಿಯರು ಹುಟ್ಟು ಹಾಕಿರುವ ಸಂಸ್ಕೃತಿಯನ್ನು ಇಂದಿನ ಪೀಳಿಗೆ ಮುಂದುವೆರೆಸಬೇಕು ಎಂದು ಹೇಳಿದರು.ಮಕ್ಕಳಿಗೆ ಸಂಸ್ಕಾರ ಕಲಿಸಿಪೋಷಕರು ತಮ್ಮ ಮಕ್ಕಳಿಗೆ ಉತ್ತಮವಾದ ಸಂಸ್ಕಾರ ಆಚಾರ ವಿಚಾರಗಳನ್ನು ಕಲಿಸಿದಾಗ ಜೀವನದಲ್ಲಿ ಒಳ್ಳೆಯ ಮನುಷ್ಯನಾಗಿ ಬದುಕು ಕಂಡುಕೊಳ್ಳಲಿದ್ದಾರೆ. ಜಾತ್ರೆ ಎಂಬುದು ಒಂದು ಸಂಭ್ರಮದ ಹಬ್ಬ. ಅದರಲ್ಲಿ ಎಲ್ಲರು ಭಾಗಿಯಾಗಿ ಅದ್ದೂರಿಯಾಗಿ ಆಚರಿಸಿ ವರ್ಷದಿಂದ ವರ್ಷಕ್ಕೆ ಜ್ಯೊತಿಗಳ ಸಂಖ್ಯೆಗಳು ಕಡಿಮೆಯಾಗುತ್ತಿರುವುದು ಒಳ್ಳೆಯ ಬೆಳವಣಿಗೆಯೆಲ್ಲ ಜಾತ್ರೆ ಸಂಭ್ರದಲ್ಲಿ ಎಲ್ಲರು ಭಾಗವಹಿಸಿ ನಮ್ಮ ಸಮುದಾಯ ನಡೆಸಿಕೊಡುವ ಜಾತ್ರ ಮಹೋತ್ಸವಕ್ಕೆ ಮಠದವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡಲಿದ್ದೆವೆ ಎಂದು ಹೇಳಿದರು.
ಸ್ವಾಮೀಜಿಗಳಿಗೆ ಪೂರ್ಣಕುಂಭ ಸ್ವಾಗತಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳಾನಂದ ಸ್ವಾಮೀಜಿ ರವರನ್ನು ಸೂರಜ್‌ಮಲ್ ವೃತ್ತದಿಂದ ಪೂರ್ಣ ಕುಂಭ ಹೋತ್ತ ಮಹಿಳೆರು ಸ್ವಾಗತಿಸಿದರು. ಗೀತಾ ರಸ್ತೆಯಲ್ಲಿ ಜ್ಯೋತಿಗಳೊಂದಿಗೆ ವಾದ್ಯಗೋಷ್ಠಿ, ಪುಷ್ಪ ದೀಪ ಅಲಂಕಾರ ಸಮೇತವಾಗಿ ಭಕ್ತ ವೃಂದದ ಜನ ಸಾಗರದೊಂದಿಗೆ ದೇವಾಲಯಕ್ಕೆ ಕರೆತರಲಾಯಿತ್ತು. ರಸ್ತೆಯಲ್ಲಿ ದೀಪಗಳ ಸಾಲನ್ನು ಕಾಣಲು ಸಾವಿರಾರು ಸಂಖ್ಯೆಯಲ್ಲಿ ಜನ ನೆರೆದಿದ್ದರು. ರಸಮಂಜರಿ ಕಾರ್ಯಕ್ರಮಶ್ರೀ ಪ್ರಸನ್ನ ಲಕ್ಷ್ಮೀವೆಂಕಟರಮಣಸ್ವಾಮಿಯ ಸುಪ್ರಭಾತದೊಂದಿಗೆ ಪ್ರಾರಂಭವಾಯಿತ್ತು ದೇವರಿಗೆ ವಿಶೇಷ ಅಲಂಕಾರವನ್ನು ಮಾಡಿ ಮಹಾ ಮಂಗಳಾರಾತಿ ಮಾಡಲಾಗಿತ್ತು ಮತ್ತು ಅನ್ನಮಯ್ಯ ಕೀರ್ತನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ನಗರದ ಪ್ರಮುಖ ರಸ್ತೆಯಲ್ಲಿ ರಸಮಂಜರಿ ಹಾಗೂ ಚಂಡೆ ನೃತ್ಯ ಜನರ ಆಕರ್ಷಣೆ ಸೆಳೆಯಿತ್ತು ಸಮುದಾಯದ ಸಾವಿರಾರು ಭಕ್ತರು ಭಾಗವಹಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಕೆಜಿಎಫ್ ಒಕ್ಕಲಿಗ ಸಂಘದ ಅಧ್ಯಕ್ಷ ರಾಜಗೋಪಾಲಗೌಡ,ಗೌರವ ಅಧ್ಯಕ್ಷರಾದ ಚಂದ್ರಶೆಖರ್‌ರೆಡ್ಡಿ, ಕೋಲಾರ ಸಿಎಂಆರ್.ಶ್ರೀನಾಥ್,ಮಾಲೂರು ಶಾಸಕ ನಂಜೇಗೌಡ, ಶ್ರೀನಿವಾಸ್,ಯರನಾಗನಹಳ್ಳಿ ರಾಮಚಂದ್ರ,ತಾರನಾಥ,ವೆAಕಟಪ್ಪ, ,ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಅ,ಮು.ಲಕ್ಷಿö್ಮನಾರಾಯಣ, ಮಮತರಮೇಶ್,ಕಾರಿಪ್ರಸನ್ನ ,ರಾಜಗೋಪಾಲಗೌಡ,ಪ್ರಧೀಪ್‌ಗೌಡ, ನಗರಸಭೆ ಸದಸ್ಯ ಮಾಣಿಕ್ಯಂ, ಆಂಂಜನೇಯಗೌಡ,ನರಸಿಂಹಯ್ಯ, ಸುರೇಶ್ ಹಾಗೂ ಇತರರು ಹಾಜರಿದ್ದರು.