ಹೊಸ ಕಲ್ಪನೆಯೊಂದಿಗೆ ಹಿಂದೂ ಮಹಾಗಣಪತಿ ಮಹೋತ್ಸವ: ಬೋಜರಾಜ್

KannadaprabhaNewsNetwork |  
Published : Sep 03, 2025, 01:00 AM IST
ಹೊಸ ಕಲ್ಪನೆಯೊಂದಿಗೆ  ಶ್ರೀ ಹಿಂದೂ ಮಹಾಗಣಪತಿ ಮಹೋತ್ಸವಃ ಟಿ.ಎಂ.ಬೋಜರಾಜ್ | Kannada Prabha

ಸಾರಾಂಶ

ವಿಶ್ವ ಹಿಂದೂ ಪರಿಷತ್, ಭಜರಂಗ ದಳ ತರೀಕೆರೆ ವತಿಯಿಂದ ಪಟ್ಟಣದಲ್ಲಿ ಈ ಬಾರಿ ಹೊಸ ಕಲ್ಪನೆಯೊಂದಿಗೆ 8ನೇ ಶ್ರೀ ಹಿಂದೂ ಮಹಾ ಗಣಪತಿ ಮಹೋತ್ಸವವನ್ನು ನಡೆಸಲಾಗುತ್ತಿದ್ದು, ಸೆ.3ರಂದು ಶ್ರೀ ಹಿಂದೂ ಮಹಾ ಗಣಪತಿ ವಿಸರ್ಜನಾ ಕಾರ್ಯಕ್ರಮ ಮತ್ತು ಬೃಹತ್ ಶೋಭಾಯಾತ್ರೆಯನ್ನು ಏರ್ಪಡಿಸಲಾಗಿದೆ

ಕನ್ನಡಪ್ರಭ ವಾರ್ತೆ ತರೀಕೆರೆ

ವಿಶ್ವ ಹಿಂದೂ ಪರಿಷತ್, ಭಜರಂಗ ದಳ ತರೀಕೆರೆ ವತಿಯಿಂದ ಪಟ್ಟಣದಲ್ಲಿ ಈ ಬಾರಿ ಹೊಸ ಕಲ್ಪನೆಯೊಂದಿಗೆ 8ನೇ ಶ್ರೀ ಹಿಂದೂ ಮಹಾ ಗಣಪತಿ ಮಹೋತ್ಸವವನ್ನು ನಡೆಸಲಾಗುತ್ತಿದ್ದು, ಸೆ.3ರಂದು ಶ್ರೀ ಹಿಂದೂ ಮಹಾ ಗಣಪತಿ ವಿಸರ್ಜನಾ ಕಾರ್ಯಕ್ರಮ ಮತ್ತು ಬೃಹತ್ ಶೋಭಾಯಾತ್ರೆಯನ್ನು ಏರ್ಪಡಿಸಲಾಗಿದೆ ಎಂದು ಹಿಂದೂ ಮಹಾ ಗಣಪತಿ 8ನೇ ವರ್ಷದ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪುರಸಭೆ ಸದಸ್ಯ ಟಿ.ಎಂ.ಬೋಜರಾಜ್ ತಿಳಿಸಿದರು.

ವಿಶ್ವ ಹಿಂದೂ ಪರಿಷತ್, ಭಜರಂಗದಳ, ಹಿಂದೂ ಮಹಾಗಣಪತಿ ಸೇವಾ ಸಮಿತಿ ವತಿಯಿಂದ ಇಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಸರ್ಕಾರ ನೀಡಿದ ಪ್ರತ್ಯುತ್ತರ ಸಿಂದೂರ ಆಪರೇಷನ್ ಜನರು ಮೆಚ್ಚಿದ್ದಾರೆ, ಸಿಂದೂರ ಅಪರೇಶನ್ ಕಲ್ಪನೆಯಲ್ಲೇ ಮಂಟಪವನ್ನು ರಚಿಸಲಾಗಿದ್ದು, ಸೆ.3 ರಂದು ಮಧ್ಯಾಹ್ನ 12.15ಕ್ಕೆ ಪುತ್ಥಳಿಯೊಂದಿಗೆ ಪಟ್ಟಣದ ಎಲ್ಲ ರಾಜಹಬೀದಿಗಳಲ್ಲಿ ಬೃಹತ್ ಶೋಭಾಯಾತ್ರೆಯನ್ನು ಆಯೋಜಿಸಲಾಗಿದೆ, ಶೋಭಾಯಾತ್ರೆಯಲ್ಲಿ ವಿವಿಧ ಸಾಂಸ್ಕೃತಿಕ ಕಲಾ ತಂಡಗಳು ಭಾಗವಹಿಸಲಿದ್ದು, ಪಟ್ಟಣದಲ್ಲಿ ಪ್ರಥಮ ಬಾರಿಗೆ ನಾಸಿಕ್ ಡೋಲು ನಾದ ಸ್ವರ, ಶ್ರೀರಾಮನ ಮೂರ್ತಿಯೊಂದಿಗೆ ಭಜನಾ ತಂಡಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಶೋಬಾಯಾತ್ರೆಯಲ್ಲಿ ಮುಖಂಡರು, ಮಾಜಿ ಸಂಸದರಾದ ಪ್ರತಾಪ್ ಸಿಂಹ, ಶಾಸಕರಾದ ಜಿ.ಎಚ್.ಶ್ರೀನಿವಾಸ್, ಚೆನ್ನಬಸಪ್ಪ, ಮಾಜಿ ಶಾಸಕರಾದ ಡಿ.ಎಸ್.ಸುರೇಶ್, ಎಸ್.ಎಂ.ನಾಗರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರು, ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲು ವಿನಂತಿಸಲಾಗಿದೆ, ಸ್ತ್ರೀಶಕ್ತಿ ಸಂಘಗಳು, ದಾನಿಗಳು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

8ನೇ ವರ್ಷದ ಶ್ರೀ ಹಿಂದೂ ಮಹಾ ಗಣಪತಿ ಮಹೋತ್ಸವ ,ಅದ್ದೂರಿಯಾಗಿ ಮತ್ತು ಯಶಸ್ವಿಯಾಗಿ ನೆಡೆಸಲು ಸಹಕರಿಸುತ್ತಿರುವ ದಾನಿಗಳು, ಕಾರ್ಯಕರ್ತರುಗಳಿಗೆ, ಪುರಸಭೆ, ಬಿಗಿ ಪೋಲೀಸ್‌ ಬಂದೋಬಸ್ತ್ ಮಾಡಿರುವ ಪೋಲೀಸ್ ಇಲಾಖೆ, ಗಣೇಶೋತ್ಸವ ಮಂಟಪ ನಿರ್ಮಿಸಲು ಅವಕಾಶ ನೀಡಿದ ಎ.ಪಿ.ಎಂ.ಸಿ.ಯವರಿಗೆ ಮತ್ತು ಯಕ್ಷಗಾನ ಕಾರ್ಯಕ್ರಮ ನೆಡೆಸಿದ ಕುಂದಾಪುರ ಹಟ್ಟಿಅಂಗಡಿ ಶ್ರೀ ಸಿದ್ದಿವಿನಾಯಕ ಯಕ್ಷಗಾನ ಮಂಡಳಿಯವರಿಗೆ ಕೃತಜ್ಞತೆ ಅರ್ಪಿಸಿದ ಅವರು ಎಲ್ಲಡೆ ಶಾಂತಿ ಸಮೃದ್ದಿ ನೆಲಸಬೇಕು ಎಂದು ಮನವಿ ಮಾಡಿದರು.

ಪುರಸಭೆ ಮಾಜಿ ಸದಸ್ಯ ಮಿಲ್ಟ್ರಿ ಶ್ರೀನಿವಾಸ್, ವಿಶ್ವ ಹಿಂದೂ ಪರಿಷತ್ ತರೀಕೆರೆ ತಾಲೂಕು ನಗರ ಅಧ್ಯಕ್ಷರು ಆನಂದ (ಗುಂಡ) ಜಿಲ್ಲಾ ಭಜರಂಗದಳ ಸುರಕ್ಷಾ ಪ್ರಮುಖ್ ಜಗದೀಶ್, ಭಜರಂಗದಳ ತಾಲೂಕು ಸಂಯೋಜಕರು ಚಂದ್ರಶೇಖರ್ (ಚಂದು) ನಗರ ಸಂಯೋಜಕರು ಸಂತೋಷ್ ಕೆ, ವಿಶ್ವ ಹಿಂದೂ ಪರಿಷತ್ ತರೀಕೆರೆ ಘಟಕದ ಸದಸ್ಯರು, ಭಜರಂಗದಳ ತರೀಕೆರೆ ತಾಲೂಕು ಸದಸ್ಯರು ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ