ಹಿಂದೂ ಮಹಾಸಭಾ ಗಣಪತಿಮೂರ್ತಿ ವಿಸರ್ಜನಾ ಮಹೋತ್ಸವ

KannadaprabhaNewsNetwork |  
Published : Oct 04, 2026, 01:45 AM IST
3ಕೆಎಂಎನ್ ಡಿ20,21  | Kannada Prabha

ಸಾರಾಂಶ

ಕೆ.ಆರ್.ಪೇಟೆ ಪಟ್ಟಣದ ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣದ ಬಳಿ ಮುಖ್ಯ ರಸ್ತೆಯ ಬದಿ ಪ್ರತಿಷ್ಠಾಪಿಸಿದ್ದ ಹಿಂದೂ ಮಹಾಸಭಾ ಗಣಪತಿ ಮೂರ್ತಿಯ ವಿಸರ್ಜನಾ ಮಹೋತ್ಸವ ಪೊಲೀಸರ ಸರ್ಪಗಾವಲಿನಲ್ಲಿ ಶನಿವಾರ ಅದ್ಧೂರಿಯಾಗಿ ನಡೆಯಿತು. ಅಲಂಕೃತ ವಾಹನದಲ್ಲಿ ಮಹಾಗಣಪತಿ ಮೂರ್ತಿಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶೋಭಾಯಾತ್ರೆ ಮಾಡಿದರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪಟ್ಟಣದ ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣದ ಬಳಿ ಮುಖ್ಯ ರಸ್ತೆಯ ಬದಿ ಪ್ರತಿಷ್ಠಾಪಿಸಿದ್ದ ಹಿಂದೂ ಮಹಾಸಭಾ ಗಣಪತಿ ಮೂರ್ತಿಯ ವಿಸರ್ಜನಾ ಮಹೋತ್ಸವ ಪೊಲೀಸರ ಸರ್ಪಗಾವಲಿನಲ್ಲಿ ಶನಿವಾರ ಅದ್ಧೂರಿಯಾಗಿ ನಡೆಯಿತು.

ಅಲಂಕೃತ ವಾಹನದಲ್ಲಿ ಮಹಾಗಣಪತಿ ಮೂರ್ತಿಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶೋಭಾಯಾತ್ರೆ ಮಾಡಿದ ಭಕ್ತರು, ಭಕ್ತಿ ಭಾವದಲ್ಲಿ ಕುಣಿದು ಕುಪ್ಪಳಿಸಿದರು. ಮಹಾಗಣಪತಿ ವಿಸರ್ಜನಾ ಮಹೋತ್ಸವದ ಅಂಗವಾಗಿ ಸಮಗ್ರ ಪಟ್ಟಣ ಕೇಸರಿ ಮಯವಾಗಿತ್ತು.

ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಕೇಸರಿ ಧ್ವಜಗಳನ್ನು ಬೀಸುತ್ತಾ ಸಂಭ್ರಮ ಸಡಗರಗಳಿಂದ ರಸ್ತೆಯಲ್ಲಿ ಹೆಜ್ಜೆ ಹಾಕಿದರು. ಕೀಲೊ ಮೀಟರ್ ಉದ್ದಕ್ಕೆ ಸಾಗಿದ ಮೆರವಣಿಗೆಯಲ್ಲಿ ರಾವಣ ವಧೆ, ಜಟಾಯು ಮುಂತಾದ ಆಕರ್ಷಕ ಸ್ತಬ್ಧ ಚಿತ್ರಗಳು, ವಿವಿಧ ಜಾನಪದ ಕಲಾ ಪ್ರದರ್ಶನಗಳು ಎಲ್ಲರ ಗಮನ ಸೆಳೆದವು.

ಯಾವುದೇ ಅಹಿತರ ಘಟನೆಗಳು ನಡೆಯದಂತೆ ಪೊಲೀಸರು ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದರು. ಮಹಾಗಣಪತಿ ವಿಸರ್ಜನೆ ಹಿನ್ನೆಲೆಯಲ್ಲಿ ಪಟ್ಟಣಾದ್ಯಂತ ಮದ್ಯ ಮಾರಾಟ ನಿಷೇಧಿಸಲಾಗಿತ್ತು.

ಮುಂಜಾಗೃತ ಕ್ರಮವಾಗಿ ಪಟ್ಟಣದ ಮುಖ್ಯ ರಸ್ತೆಯ ಜಾಮೀಯಾ ಮಸೀದಿ ಎದುರು ಕಳೆದ ಎರಡೂ ದಿನಗಳಿಂದಲೂ ಪೊಲೀಸರ ಸರ್ಪಗಾವಲು ಹಾಕಲಾಗಿತ್ತು. ರಸ್ತೆಗಳಲ್ಲಿ ಅಲ್ಲಲ್ಲಿ ಬ್ಯಾರಿಕೆಡ್ ಅಳವಡಿಸಿ ಸಂಚಾರ ನಿಯಂತ್ರಣಕ್ಕೆ ಕ್ರಮವಹಿಸಲಾಗಿತ್ತು.

ಗಣಪತಿಮೂರ್ತಿ ಸುಗಮ ಮೆರವಣಿಗೆಗಾಗಿ ರಸ್ತೆ ಬದಿಯ ಅಂಗಡಿಗಳನ್ನು ತಾತ್ಕಾಲಿಕವಾಗಿ ತೆರವುಗೊಳಿಸಿದ ಪೊಲೀಸರು ಮೆರವಣಿಗೆ ಸಾಂತಿಯುತವಾಗಲು ಅಗತ್ಯ ಕ್ರಮ ವಹಿಸಿದ್ದರು.

ಮಹಾಗಣಪತಿ ವಿಸರ್ಜನೆ ಹಿನ್ನೆಲೆಯಲ್ಲಿ ಮುಂಜಾನೆಯಿಂದಲೇ ಗಣಪತಿ ಪೆಂಡಾಲ್ ನಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ಜರುಗಿದವು. ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಸಾಗಿದ ಮಹಾ ಮೆರವಣಿಗೆ ಮೂಲಕ ಪಟ್ಟಣದ ಹೊರವಲಯದ ದೇವಿರಮ್ಮಣ್ಣಿ ಕೆರೆಯಲ್ಲಿ ಮಹಾಗಣಪತಿಯನ್ನು ಸಂಜೆ ಶ್ರದ್ಧಾ ಭಕ್ತಿಯಿಂದ ವಿಸರ್ಜಿಸಲಾಯಿತು.ಅ.16 ರಂದು ಜಿಲ್ಲಾ ಮಟ್ಟದ ದಸರಾ ಯೋಗಾಸನ ಸ್ಪರ್ಧೆ

ಮಂಡ್ಯ: ಜಿಲ್ಲಾಡಳಿತ, ಶ್ರೀರಂಗಪಟ್ಟಣ ದಸರಾ ಯೋಗ ದಸರಾ ಉಪ ಸಮಿತಿಯಿಂದ ಅ.16ರಂದು ಶ್ರೀರಂಗಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ದಸರಾ ಯೋಗಾಸನ ಸ್ಪರ್ಧೆಯನ್ನು ಬೆಳಗ್ಗೆ 8 ರಿಂದ ಸಂಜೆ 5ಗಂಟೆವರಿಗೆ ಹಮ್ಮಿಕೊಳ್ಳಲಾಗಿದೆ. ಅ.17ರಂದು ಬೆಳಗ್ಗೆ 6 ರಿಂದ ಬೆಳಗ್ಗೆ 8 ಗಂಟೆವರಿಗೆ ಸಾಮೂಹಿಕ ಸೂರ್ಯ ನಮಸ್ಕಾರವನ್ನು ಶ್ರೀರಂಗಪಟ್ಟಣ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಮುಂಭಾಗ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮದ್ದೂರು ತಾಲೂಕಿನ ಸ.ಆ.ಚಿ. ಹೊನ್ನಯಕನಹಳ್ಳಿ ವೈದ್ಯಧಿಕಾರಿ ಡಾ.ಶ್ರೀನಿವಾಸು ಮೊ- 83100860887, ಮಂಡ್ಯ ಜಿಲ್ಲಾ ಆಯುಷ್ ಅಧಿಕಾರಿ ಡಾ.ಪುಷ್ಪ ಮೊ- 9986856726, ಶ್ರೀರಂಗಪಟ್ಟಣ ಸ.ಯು.ಚಿ. ವೈದ್ಯಧಿಕಾರಿ ಡಾ.ಲೋಕೇಶ್ ಮೊ-9972221795 ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಪಂಚಾಯ್ತಿ ಜಿಲ್ಲಾ ಆಯುಷ್ ವೈದ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯ ಸರ್ಕಾರ ಎಕರೆಗೆ ₹25000 ಪರಿಹಾರ ನೀಡಲಿ
ಯುವ ಸಮೂಹಕ್ಕೆ ಉತ್ತಮ ಸಂದೇಶಗಳು ಅಗತ್ಯ