18ರಿಂದ ಫೆ. 1 ರ ವರೆಗೆ ಹಿಂದೂ ಸಂಗಮ

KannadaprabhaNewsNetwork |  
Published : Jan 18, 2026, 03:15 AM IST
ಮೂಲ್ಕಿ ತಾಲೂಕಿನ 9 ಮಂಡಲಗಳಲ್ಲಿ  18ರಿಂದ ಹಿಂದೂ ಸಂಗಮ | Kannada Prabha

ಸಾರಾಂಶ

ಮೂಲ್ಕಿ ತಾಲೂಕಿನ ಒಂಬತ್ತು ಮಂಡಲಗಳಲ್ಲಿ ಹಿಂದೂ ಸಂಗಮ ಕಾರ್ಯಕ್ರಮ ನಡೆಯಲಿದೆ ಎಂದು ಆಯೋಜನಾ ಸಮಿತಿ ಅಧ್ಯಕ್ಷ ಶ್ರೀಹರಿನಾರಾಯಣದಾಸ ಆಸ್ರಣ್ಣ

ಕನ್ನಡಪ್ರಭವಾರ್ತೆ ಮೂಲ್ಕಿ

ಹಿಂದೂಗಳಲ್ಲಿ ಒಗ್ಗಟ್ಟನ್ನು ಮೂಡಿಸುವ ನಿಟ್ಟಿನಲ್ಲಿ ಮೂಲ್ಕಿ ತಾಲೂಕಿನ ಒಂಬತ್ತು ಮಂಡಲಗಳಲ್ಲಿ ಹಿಂದೂ ಸಂಗಮ ಕಾರ್ಯಕ್ರಮ ನಡೆಯಲಿದೆ ಎಂದು ಆಯೋಜನಾ ಸಮಿತಿ ಅಧ್ಯಕ್ಷ ಶ್ರೀಹರಿನಾರಾಯಣದಾಸ ಆಸ್ರಣ್ಣ ತಿಳಿಸಿದರು.

ಕಟೀಲು ಕಾಲೇಜಿನಲ್ಲಿ ನಡೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜ. 18 ರ ಸಂಜೆ 3 ಗಂಟೆಗೆ ಪಡುಪಣಂಬೂರು ವಲಯದ ಹಿಂದೂ ಸಂಗಮ ತೋಕೂರು ಸುಬ್ರಹ್ಮಣ್ಯ ವಠಾರದಲ್ಲಿ , 25ರಂದು ಸಂಜೆ 3 ಗಂಟೆಗೆ ಕೆಮ್ರಾಲ್ ಮಂಡಲದ ಕಾರ್ಯಕ್ರಮ, ಹೊಸಕಾಡು ಶ್ರೀ ನಾಗಬ್ರಹ್ಮ ಭಜನಾ ಮಂದಿರದ ಮೈದಾನದಲ್ಲಿ, ಹಳೆಯಂಗಡಿ ಮಂಡಲದ ಕಾರ್ಯಕ್ರಮ ಪಾವಂಜೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಹಾಗೂ ಮೂಲ್ಕಿ ಮಂಡಲದ ಕಾರ್ಯಕ್ರಮ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಠಾರದಲ್ಲಿ, 26ರಂದು ಕಟೀಲು ಮಂಡಲದ ಕಟೀಲು ಪದವಿಪೂರ್ವ ಕಾಲೇಜಿನಲ್ಲಿ, ಬಳಕುಂಜೆ ಮಂಡಲ ಕರ್ನಿರೆ ವಿಷ್ಣುಮೂರ್ತಿ ದೇವಸ್ಥಾನದಲ್ಲಿ , ಐಕಳ ಮಂಡಲದ ಪಟ್ಟೆ ಶ್ರೀ ಜಾರಂದಾಯ ದೈವಸ್ಥಾನದಲ್ಲಿ, ಫೆ. 1ರಂದು ಕಿಲ್ಪಾಡಿ ಮಂಡಲದ ಶಿಮಂತೂರು ಶ್ರೀ ಆದಿಜನಾರ್ದನ ದೇವಸ್ಥಾನದಲ್ಲಿ, ಕಿನ್ನಿಗೋಳಿ ಮಂಡಲದ ಹೊಸಕಾವೇರಿಯಲ್ಲಿ ಕಾರ್ಯಕ್ರಮಗಳು ಜರುಗಲಿದ್ದು ಜ. 18ರಂದು ಪ್ರಾರಂಭಗೊಂಡು ಫೆ. 1ರವರೆಗೆ ತಾಲೂಕಿನ ಒಂಬತ್ತು ಕಡೆಗಳಲ್ಲಿ ನಡೆಯಲಿವೆ. ಸಾಮಾಜಿಕ ಸೇವೆ, ಸಹಕಾರ ಮತ್ತು ಸ್ವಾವಲಂಬನೆಯನ್ನು ಹೆಚ್ಚಿಸುವ ಮಹತ್ತರ ಉದ್ದೇಶದಿಂದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸಮಾಜದ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಸೇವಾ, ಕ್ರೀಡಾ, ಕಲಾ ಮತ್ತು ಸಹಕಾರಿ ಕ್ಷೇತ್ರಗಳ ವಿವಿಧ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಲಾಗುತ್ತಿದೆ ಎಂದು ಅವರು ತಿಳಿಸಿದರು. ಸಮಿತಿಯ ಪಾಂಡುರಂಗ ಭಟ್ ಮಾತನಾಡಿ, ಈಗಾಗಲೇ ತಾಲೂಕಿನ ಎಲ್ಲ ಹಿಂದೂಗಳ ಮನೆಗಳನ್ನು ಸಂಪರ್ಕಿಸಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭ ಸಂಪತ್ ಕಾರ್ನಾಡ್, ಪೃಥ್ವಿರಾಜ್ ಆಚಾರ್ಯ, ಧನಂಜಯ ಶೆಟ್ಟಿಗಾರ್, ದೇವಿಪ್ರಸಾದ್ ಶೆಟ್ಟಿ, ಹರಿದಾಸ ಭಟ್ ತೋಕೂರು ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲಾಡಳಿತ ಸಂಧಾನ ಸಭೆ ವಿಫಲ; ನಾಳೆ ಮಹಾಲಿಂಗಪುರ ಬಂದ್
ಟೀಮ್ ಒನ್ ಟಚ್ ಚಾಂಪಿಯನ್