ಗಂಗಾವತಿ: ಭರತ ಭೂಮಿಯ ಮೇಲೆ ಸಾವಿರಾರು ವರ್ಷಗಳಿಂದ ದಾಳಿಕೋರರ ಅತಿಕ್ರಮಣ ನಡೆಯುತ್ತಲೆ ಬಂದಿದೆ. ಆದರೆ ಭಾರತ ಎಂದಿಗೂ ತಲೆ ತಗ್ಗಿಲ್ಲ. ಮತ್ತೆ ಮತ್ತೆ ಪುಟಿದೆದ್ದು ನಿಂತಿದೆ. ಸನಾತನ ಹಿಂದು ಧರ್ಮಕ್ಕೆ ಅಂತಹ ಶಕ್ತಿ ಇದೆ.ಆದರೆ ಇಂದು ಹಿಂದು ಧರ್ಮಕ್ಕೆ ಸಾಕಷ್ಟು ಆತಂಕ ಎದುರಾಗಿದೆ. ಶತ್ರುಗಳು ಹೊರಗಿನವರಾದರೆ ಹೇಗೆ ಎದುರಿಸಬಹುದು. ಆದರೆ ನಮ್ಮದೇ ನೆಲದಲ್ಲಿ ಹುಟ್ಟಿದ ಸೈತಾನರಿಂದ ಧರ್ಮಕ್ಕೆ ಆತಂಕ ಎದುರಾಗಿದೆ ಎಂದು ವಿಶ್ವ ಹಿಂದು ಪರಿಷತ್ತಿನ ಉತ್ತರ ಕರ್ನಾಟಕ ಪ್ರಾಂತ ಸಹ ಕಾರ್ಯದರ್ಶಿ ವಿನಾಯಕ ತಳಗೇರಿ ಆತಂಕ ವ್ಯಕ್ತಪಡಿಸಿದರು.
ಆಕ್ರಮಣಕಾರಿಂದ ಜಾಗೃತರಾದರೆ ಮಾತ್ರ ಭಾರತ ಉಳಿಯಲು ಮತ್ತು ಧರ್ಮ ರಕ್ಷಣೆ ಸಾಧ್ಯವಾಗಲಿದೆ.ವಿಶ್ವದ ಎಲ್ಲ ದೇಶಗಳಿಗೆ ಹುಟ್ಟಿನ ದಿನಾಂಕವಿದೆ. ಆದರೆ ಭಾರತ ಎಂಬ ಸನಾತನ ದೇಶಕ್ಕೆ ಹುಟ್ಟೂ ಇಲ್ಲ. ಸಾವೂ ಇಲ್ಲ. ಯಾವಾಗ ಹುಟ್ಟಿದೆ ಎಂಬುವುದು ಯಾರಿಗೂ ಗೊತ್ತಿಲ್ಲ ಎಂದರು.
ಹಿಂದುಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶಕ್ಕೆ ಇಂತಹ ಸಮ್ಮೇಳನ ಆಯೋಜಿಸಲಾಗುತ್ತಿದೆ. ಸಂಘಕ್ಕೆ ನೂರು ವರ್ಷದ ತುಂಬಿದೆ. ಸಂಘವು ಸಮಾಜದಲ್ಲಿ ಲೀನವಾಗಬೇಕು ಎಂಬ ಉದ್ದೇಶವಿದೆ. ಇದಕ್ಕಾಗಿ ಧರ್ಮ ರಕ್ಷಣೆ, ಮತ ಸಾಮರಸ್ಯ, ಭಾತೃತ್ವ ನಮ್ಮ ಕುಟುಂಬಗಳಲ್ಲಿ ಮೂಡಿಸಲು ಸಂಘ ಯತ್ನಿಸುತ್ತಿದೆ ಎಂದರು.ವೇದಿಕೆ ಉದ್ದೇಶಿಸಿ ಹಿಂದು ಸಮ್ಮೇಳನದ ನಗರ ಸಂಚಾಲಕ ಡಾ.ಅಮರೇಶ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ರಾಘವೇಂದ್ರ ಕಟ್ಟಿಮನಿ, ವೆಂಕಟೇಶ್ ಕುಲಕರ್ಣಿ, ದಿಲೀಪ್ ಪವಾರ್,ರಾಜು ಎಂ, ಕಾಶಿನಾಥ್, ರಾಘವೇಂದ್ರ ಪತ್ತಾರ್, ಸುನಿಲ್ ಕುಮಾರ್ ಪತ್ತಾರ, ಮಂಜುನಾಥ ಪತ್ತಾರ್, ಸಂತೋಷ್ ಮ್ಯಾಗೇರಿ, ಡಿಪೋ ಮಲ್ಲಿಕಾರ್ಜುನ, ಶ್ರೀನಿವಾಸ ಎಂ.ಜೆ, ರಾಮಮೂರ್ತಿ ನವಲಿ, ಸುರೇಶ ಸಮಗಂಡಿ, ಮಹಾಲಿಂಗಪ್ಪ ಬನ್ನಿಕೊಪ್ಪ, ಸುರೇಶ ಗೌರಪ್ಪ, ವಾಸುದೇವ ನವಲಿ, ನಾಗರಾಜ್ ಗುತ್ತೇದಾರ್, ಅಶೋಕ್ ರಾಯ್ಕರ್ ಅರ್ಜುನ್ ರಾಯ್ಕರ್, ಶ್ರವಣಕುಮಾರ ರಾಯ್ಕರ್ ಸೇರಿದಂತೆ ಮಹಿಳಾ ಪ್ರಮುಖರು ಭಾಗವಹಿಸಿದ್ದರು.