ಹಿಂದುಗಳು ಜಾತಿ, ಮತಭೇದ ಮರೆತು ಒಂದಾಗಿ: ಶಾಸಕ ಯತ್ನಾಳ

KannadaprabhaNewsNetwork |  
Published : Apr 06, 2026, 02:15 AM IST
ಸಮಾವೇಶದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದರು. | Kannada Prabha

ಸಾರಾಂಶ

ಹಿಂದೂ ಹೆಣ್ಣು ಮಕ್ಕಳು ಲವ್‌ ಜಿಹಾದ್‌ಗೆ ಬಲಿಯಾಗದಂತೆ ನೋಡಿಕೊಳ್ಳುವುದು ಹಾಗೂ ಅವರನ್ನು ರಕ್ಷಿಸುವುದು ಪ್ರತಿಯೊಬ್ಬ ಹಿಂದೂವಿನ ಜವಾಬ್ದಾರಿಯಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಹುಬ್ಬಳ್ಳಿ: ಜಾತಿ, ಮತ ಭೇದ ಮರೆತು ಹಿಂದೂಗಳೆಲ್ಲ ಒಂದಾಗುವ ಮೂಲಕ ದೇಶ ಕಟ್ಟುವ ಕೆಲಸಕ್ಕೆ ಮುಂದಾಗಬೇಕಿದೆ. ಜತೆಗೆ ಹಿಂದೂ ಹೆಣ್ಣು ಮಕ್ಕಳು ಲವ್‌ ಜಿಹಾದ್‌ಗೆ ಬಲಿಯಾಗದಂತೆ ನೋಡಿಕೊಳ್ಳುವುದು ಹಾಗೂ ಅವರನ್ನು ರಕ್ಷಿಸುವುದು ಪ್ರತಿಯೊಬ್ಬ ಹಿಂದೂವಿನ ಜವಾಬ್ದಾರಿಯಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಅವರು ಇಲ್ಲಿನ ನಗರದ ಹಳೇ ಹುಬ್ಬಳ್ಳಿ ಆನಂದ ನಗರ ವೃತ್ತದಲ್ಲಿ ಶ್ರೀರಾಮ ಉತ್ಸವ ಸಮಿತಿ ಚಾರಿಟೇಬಲ್‌ ಟ್ರಸ್ವ್‌ ವತಿಯಿಂದ ಭಾನುವಾರ ಸಂಜೆ ಆಯೋಜಿಸಲಾಗಿದ್ದ 12ನೇ ವರ್ಷದ ಶ್ರೀರಾಮ ನವಮಿ ಹಾಗೂ ಹನುಮ ಜಯಂತಿ ಅಂಗವಾಗಿ ನಡೆದ ಬೃಹತ್‌ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.

ಸಮಾಜದಲ್ಲಿ ಹಿಂದೂ ಯುವತಿಯರು ಲವ್‌ ಜಿಹಾದ್‌ಗೆ ಬಲಿಯಾಗುವ ಸಂಶಯ ಕಂಡು ಬಂದಲ್ಲಿ ತಕ್ಷಣವೇ ಆ ಯುವತಿಯ ಕುಟುಂಬದ ಗಮನಕ್ಕೆ ತರಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ತೋರಿದಲ್ಲಿ ಕರ್ನಾಟಕದ ಹಿಂದೂ ಯುವತಿಯರು ಲವ್‌ ಜಿಹಾದ್‌ಗೆ ಬಲಿಯಾಗುವುದು ನಿಶ್ಚಿತ ಎಂದರು.

ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಮಾತನಾಡಿ, ಜಿಮ್‌ ಟ್ರೈನಿಂಗ್‌ ನೆಪದಲ್ಲಿ ಹಿಂದೂ ಯುವತಿಯರನ್ನು ಲವ್‌ ಜಿಹಾದ್‌ಗೆ ಬಳಸಿಕೊಳ್ಳುವ ಕೃತ್ಯಗಳು ನಡೆಯುತ್ತಿವೆ. ಹಿಂದೂಗಳು ಬಹಳಷ್ಟು ಎಚ್ಚರಿಕೆಯಿಂದ ಇರಬೇಕು. ಹಿಂದೂಪರ ಸಂಘಟನೆಗಳು ಎಲ್ಲೆಡೆ ಜಾಗೃತಿ ಮೂಡಿಸುವ ಮೂಲಕ ಹೆಣ್ಣುಮಕ್ಕಳನ್ನು ರಕ್ಷಿಸುವ ಕೆಲಸ ಮಾಡಬೇಕು ಎಂದರು.

ಸಮಾವೇಶದ ಬಳಿಕ ಹಳೇ ಹುಬ್ಬಳ್ಳಿ ಮಂಜುನಾಥ ಸರ್ಕಲ್‌ದಿಂದ ಆನಂದನಗರ ಸರ್ಕಲ್‌ ವರೆಗೆ ಶ್ರೀರಾಮ ನವಮಿ ಹಾಗೂ ಹನುಮ ಜಯಂತಿಯ ಬೃಹತ್‌ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ನೂರಾರು ಯುವಕರು, ಹಿಂದೂಪರ ಕಾರ್ಯಕರ್ತರು ಭಾಗವಹಿಸಿದ್ದರು.

ಟ್ರಸ್ವ್‌ ಕಮಿಟಿಯ ಅಧ್ಯಕ್ಷ ಸಂಜೀವಗೌಡ ಮಾಳಗಿ, ಅಮರ ಪಾಟೀಲ, ಅರುಣಕುಮಾರ ಮಠ, ಕುಮಾರ ಹಕಾರಿ, ಸಂಜು ಬಿರಾದಾರ, ರಮೇಶ ಕುಲಕರ್ಣಿ, ವಿ.ಕೆ. ಪಾಟೀಲ, ಕಿರಣ ಪೂಜಾರ, ಚಂದ್ರಶೇಖರ ದವಳಗಿ, ಗೌರಿಶಂಕರ ಮೋಟ, ನಾರಾಯಣ ಮಿಸ್ಕಿನ್‌ ಸೇರಿದಂತೆ ಹಲವರಿದ್ದರು.

2028ಕ್ಕೆ ನಾನೇ ಸಿಎಂ: ಯತ್ನಾಳ

ಮುಂದೆ 2028ಕ್ಕೆ ನಮ್ಮದೇ ಸರ್ಕಾರ ಆಡಳಿತಕ್ಕೆ ಬರಲಿದೆ. ಆಗ ನಾನೇ ಮುಖ್ಯಮಂತ್ರಿಯಾಗುವೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿಶ್ವಾಸ ವ್ಯಕ್ತಪಡಿಸಿದರು. ಜತೆಗೆ ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ತಂದೆ-ಮಗ ನಿರ್ಧರಿಸುವುದಿಲ್ಲ. ನಾನು ಹೈಕಮಾಂಡ್‌ಗೆ ಹೆದರಿಸಿ ನಾಯಕನಾಗಿಲ್ಲ. ಜನರಿಂದ ನಾಯಕನಾದವನು. ಹೋದಲ್ಲೆಲ್ಲ ನನ್ನನ್ನೇ ಸಿಎಂ ಅಭ್ಯರ್ಥಿ ಎಂದು ಜನರು ಘೋಷಣೆ ಮಾಡುತ್ತಿದ್ದಾರೆ. 2028ಕ್ಕೆ ನಾನು ಸಿಎಂ ಆಗೋದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಬೂಜೀ, ಅಂಬೇಡ್ಕರ್‌ ಸಮಾಜದ ಎರಡು ಕಣ್ಣುಗಳಿದ್ದಂತೆ
ದಲಿತೋದ್ಧಾರಕ ಬಾಬು ಜಗಜೀವನರಾಮ್