ರಬಕವಿ-ಬನಹಟ್ಟಿ: ಜ.೬ರಂದು ಹಿಪ್ಪರಗಿ ಬ್ಯಾರೇಜ್‌ನ ಗೇಟ್ ನಂ.೨೨ರಲ್ಲಿನ ಪೆನಲ್(ಪ್ಲೇಟ್) ಮುರಿದು ಅಪಾರ ನೀರು ಖಾಲಿಯಾಗಿ ತಾತ್ಕಾಲಿಕ ದುರಸ್ತಿ ಕಾರ್ಯ ನಡೆಸಿ ತಾತ್ಕಾಲಿಕವಾಗಿ ಪ್ಲೇಟ್ ಅಳವಡಿಸಲಾಗಿತ್ತು. ಸಂಪೂರ್ಣ ನೀರು ಸೋರಿಕೆ ತಡೆಯಲು ಸಿಬ್ಬಂದಿ ಹರಸಾಹಸ ಮುಂದುವರಿಸಿದ್ದಾರೆ.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಜ.೬ರಂದು ಹಿಪ್ಪರಗಿ ಬ್ಯಾರೇಜ್‌ನ ಗೇಟ್ ನಂ.೨೨ರಲ್ಲಿನ ಪೆನಲ್(ಪ್ಲೇಟ್) ಮುರಿದು ಅಪಾರ ನೀರು ಖಾಲಿಯಾಗಿ ತಾತ್ಕಾಲಿಕ ದುರಸ್ತಿ ಕಾರ್ಯ ನಡೆಸಿ ತಾತ್ಕಾಲಿಕವಾಗಿ ಪ್ಲೇಟ್ ಅಳವಡಿಸಲಾಗಿತ್ತು. ಸಂಪೂರ್ಣ ನೀರು ಸೋರಿಕೆ ತಡೆಯಲು ಸಿಬ್ಬಂದಿ ಹರಸಾಹಸ ಮುಂದುವರಿಸಿದ್ದಾರೆ.ಗುಜರಾತ್‌ನ ಎಚ್‌ಟಿಎಂಪಿಎಲ್ ಅಭಿಯಂತರರ ತಂಡ ಹಾಗೂ ಮಹಾರಾಷ್ಟ್ರದ ಸಾತಾರದಿಂದ ಆಗಮಿಸಿರುವ ಮುಳುಗುತಜ್ಞರ ತಂಡ ಶುಕ್ರವಾರ ಸಂಜೆ ೮ ಗಂಟೆವರೆಗೂ ದುರಸ್ತಿಯಲ್ಲಿ ತೊಡಗಿ ಕ್ರೇನ್ ಬಳಕೆ ಮೂಲಕ ಕಾರ್ಯ ಇನ್ನೇನು ಯಶಸ್ವಿಯಾಯ್ತು ಎನ್ನುವಾಗಲೇ ಮತ್ತೆ ಸಮಸ್ಯೆ ಉಂಟಾಗಿದ್ದು, ಸಂಪೂರ್ಣ ನೀರು ಸೋರಿಕೆ ತಡೆಯುವ ಕಾರ್ಯ ಶನಿವಾರ ಮಧ್ಯಾಹ್ನದ ಹೊತ್ತಿಗೆ ಮುಕ್ತಾಯಗೊಳ್ಳಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಿರ್ಲಕ್ಷ್ಯವೇ ವಿಳಂಬಕ್ಕೆ ಕಾರಣ: ಆಧುನಿಕ ತಂತ್ರಜ್ಞಾನ ಬಳಕೆಯ ಮೂಲಕ ಒಂದೆರಡು ದಿನಗಳಲ್ಲಿ ಮುಗಿಯಬೇಕಿದ್ದ ಗೇಟ್ ಪೆನಲ್(ಪ್ಲೇಟ್) ಅಳವಡಿಕೆ ಕಾರ್ಯ ವಿಳಂಬವಾಗುತ್ತಿರುವುದು ಏಕೆ ಎಂಬುದು ಸ್ಪಷ್ಟವಾಗುತ್ತಿಲ್ಲ. ಅಧಿಕಾರಿಗಳ ತಂಡ ಕೇವಲ ವೀಕ್ಷಣೆಗೆ ಮಾತ್ರ ಸೀಮಿತವಾಗಿದ್ದು, ಒಂದು ಪೆನಲ್(ಪ್ಲೇಟ್) ಅಳವಡಿಕೆಗೆ ಗುಜರಾತ್‌ದಿಂದ ಅನುಭವಸ್ಥರು ಬರಬೇಕಾಗಿರುವುದು ದುರದೃಷ್ಟಕರ. ಪ್ಲೇಟ್‌ಗಳು ಸವಕಳಿ ಬಂದರೂ ತಾಂತ್ರಿಕ ವರ್ಗವಿಲ್ಲದಿರುವುದೇ ಅವಘಡಕ್ಕೆ ಕಾರಣ ಎಂಬ ಮಾತುಗಳು ಕೇಳಿಬರುತ್ತಿದೆ.
ತಕ್ಷಣವೇ ಅಭಿಯಂತರರ ನೇಮಕ ಮಾಡಿ ಬ್ಯಾರೇಜ್ ರಕ್ಷಣೆಯ ಜತೆಗೆ ಲಕ್ಷಾಂತರ ರೈತರ ಹಾಗೂ ಜನರ ಭವಿಷ್ಯ ಹುದುಗಿರುವ ಹಿಪ್ಪರಗಿ ಬ್ಯಾರೇಜ್‌ನ ಕಾಳಜಿ ಸರ್ಕಾರ ವಹಿಸಬೇಕಿದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಜನತೆಯ ಕೆಂಗಣ್ಣಿಗೆ ಗುರಿಯಾಗುವ ಸ್ಥಿತಿ ಬರಲಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.