ಜಲಜೀವನ ಮಿಷನ್‌ ಸಫಲತೆಗೆ ಹಳ್ಳಿಗಳಿಗೆ ಭೇಟಿ ನೀಡಿ

KannadaprabhaNewsNetwork |  
Published : Jan 17, 2026, 04:00 AM IST
ಸಿಂದಗಿ | Kannada Prabha

ಸಾರಾಂಶ

ಜಲಜೀವನ ಮಿಷನ್‌ ಯೋಜನೆಯಡಿ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರಿನ ಯೋಜನೆ ಕಲ್ಪಿಸಿಕೊಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾಕಷ್ಠು ಹಣ ವ್ಯಯ ಮಾಡಿದೆ. ಆದರೆ, ಸರಿಯಾದ ನಿರ್ವಹಣೆ ಕೊರತೆಯಿಂದ ಯಾವ ನಲ್ಲಿಯಲ್ಲಿ ಬರುತ್ತಿಲ್ಲ. ಅಧಿಕಾರಿಗಳು ಪ್ರತಿ ಗ್ರಾಮ ಪಂಚಾಯತಿಯ ಹಳ್ಳಿಗಳಿಗೆ ಭೇಟಿ ನೀಡುವ ಮೂಲಕ ಯೋಜನೆಯ ಸಫಲತೆ ಮಾಡಿ ಎಂದು ಶಾಸಕ ಅಶೋಕ ಮನಗೂಳಿ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಸಿಂದಗಿ

ಜಲಜೀವನ ಮಿಷನ್‌ ಯೋಜನೆಯಡಿ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರಿನ ಯೋಜನೆ ಕಲ್ಪಿಸಿಕೊಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾಕಷ್ಠು ಹಣ ವ್ಯಯ ಮಾಡಿದೆ. ಆದರೆ, ಸರಿಯಾದ ನಿರ್ವಹಣೆ ಕೊರತೆಯಿಂದ ಯಾವ ನಲ್ಲಿಯಲ್ಲಿ ಬರುತ್ತಿಲ್ಲ. ಅಧಿಕಾರಿಗಳು ಪ್ರತಿ ಗ್ರಾಮ ಪಂಚಾಯತಿಯ ಹಳ್ಳಿಗಳಿಗೆ ಭೇಟಿ ನೀಡುವ ಮೂಲಕ ಯೋಜನೆಯ ಸಫಲತೆ ಮಾಡಿ ಎಂದು ಶಾಸಕ ಅಶೋಕ ಮನಗೂಳಿ ಸೂಚಿಸಿದರು.

ಪಟ್ಟಣದ ತಾಲೂಕು ಪಂಚಾಯತಿ ಸಭಾಭವನದಲ್ಲಿ ನಡೆದ ಪ್ರಗತಿ ಪರಿಶೀಲನಾ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ಕಾಮಗಾರಿಗಳು ಸರಿಯಾಗಿ ನೋಡುವಲ್ಲಿ ಅಧಿಕಾರಿಗಳ ವಿಫಲತೆ ಕಂಡು ಬರುತ್ತಿದೆ. ಅದಕ್ಕೆ ಪ್ರತಿಯೊಂದು ಗ್ರಾಮಗಳಿಗೆ ತೆರಳಿ ಅಲ್ಲಿನ ಸಮಸ್ಯೆ ಪರಿಹಾರಕ್ಕೆ ಮುಂದಾಗಿ ಎಂದು ತಿಳಿಸಿದರು.ಜಿಲ್ಲಾ ಕೆಡಿಪಿ ಸದಸ್ಯ ಶಿವಣ್ಣ ಕೊಟಾರಗಸ್ತಿ ಮಾತನಾಡಿ, ಬೋರಗಿ ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಕೈಕೊಂಡು ಹಲವಾರು ವರ್ಷಗಳೇ ಕಳೆದಿವೆ. ಆದರೆ, ನಲ್ಲಿಯಲ್ಲಿ ನೀರು ಕಂಡಿಲ್ಲ. ಸರ್ಕಾರದ ಯೋಜನೆಗೆ ಕೋತ ಬಿದಂತಾಗಿದೆ. ಅಧಿಕಾರಿಗಳು ನಿರ್ವಹಣೆಯಲ್ಲಿ ಎಡವಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು. ಕೆಡಿಪಿ ಸದಸ್ಯ ಗಂಗಾಧರ ಚಿಂಚೋಳಿ ಮಾತನಾಡಿ, ತಾಲೂಕಿನಲ್ಲಿ ದಿಕ್ಕು ದಿಸೆಯಿಲ್ಲ ಜೆಜೆಎಂ ಕಾಮಗಾರಿ ಆಗಿವೆ. ಅದರಲ್ಲಿ ನೀರು ಸಹ ಕಂಡಿಲ್ಲ. ಅಧಿಕಾರಿಗಳು ಕೇಳಬೇಕು ಎಂದರೇ ಕರೆ ಸ್ವೀಕರಿಸುವುದಿಲ್ಲ. ಅಲ್ಲದೆ ನಾವು ಕೆಡಿಪಿ ಸದಸ್ಯರೆನ್ನುವುದೇ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ನಾಮಕಾವಸ್ಥೆ ನೇಮಕವಾದಂತಾಗಿದೆ ಎಂದು ಅಸಮಾಧಾನ ಹೊರ ಹಾಕಿದರು.ಕೆಡಿಪಿ ಸದಸ್ಯ ಅನಿಲ ಉಡಚ್ಯಾಣ ಮಾತನಾಡಿ, ಕುಮಸಗಿಯಲ್ಲಿ ಗ್ರಾಮದಲ್ಲಿ 5 ಸಾವಿರ ಲೀಟರ್‌ನ ಓವರ್ ಹೆಡ್ ಟ್ಯಾಂಕ್‌ ಕಳಪೆಯಾಗಿ ಕಟ್ಟಿದ್ದಾರೆ. ಇದರಿಂದ ಹೊಸದರಲ್ಲೇ ಸೂರುತ್ತಿದೆ. ಅಧಿಕಾರಿಗೆ ತಿಳಿಸಿದರೇ ರಿಪೇರಿ ಮಾಡಿಸೋಣ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಕೂಡಲೇ ಗುತ್ತಿಗೆದಾರರಿಂದ ದುರಸ್ಥಿ ಕಾರ್ಯ ಕೈಕೊಳ್ಳುವುದರ ಜೊತೆಗೆ ಜೆಜೆಎಂ ಸರಿಯಾಗಿ ನಿರ್ವಹಣೆ ಮಾಡುವಂತೆ ಸಲಹೆ ನೀಡಿದರು.ಜಿಲ್ಲಾ ಕೆಡಿಪಿ ಸದಸ್ಯ ನೂರಹ್ಮದ್‌ ಅತ್ತಾರ ಮಾತನಾಡಿ, ಬಳಗಾನೂರ ಗ್ರಾಮದಿಂದ ಕೆಲವು ಗ್ರಾಮಗಳಿಗೆ ಚಾಂದಕವಟೆ ಮಾರ್ಗವಾಗಿ ನೀರು ಸರಬರಾಜುಗೊಳ್ಳುತ್ತಿದೆ. ಆದರೆ, ಈ ಗ್ರಾಮದಲ್ಲಿ ನೀರಿನ ಅಭಾವವೇ ಕಾರಣ. ಮುಂಬರುವ ಬೇಸಿಗೆ ಬರುವುದೊಳಗೆ ನೀರಿನ ಸಮಸ್ಯೆ ಉಲ್ಬಣಿಸದಂತೆ ಕ್ರಮವಹಿಸಿ ಎಂದು ಕೋರಿದರು.ಲೋಕೋಪಯೋಗಿ ಇಲಾಖೆಯ ಎಇಇ ಅರುಣಕುಮಾರ ವಡಗೇರಿ, ನೀರು ನೈರ್ಮಲ್ಯ ಇಲಾಖೆಯ ಎಇಇ ತಾರಾನಾಥ ರಾಠೋಡ, ಹೆಸ್ಕಾಂ ಎಇಇ ಚಂದ್ರಕಾಂತ ನಾಯಕ, ಪಿಎಂಜಿಎಸ್‌ವೈ ಜಿ.ವೈ.ಮುರಾಳ, ಸಿಡಿಪಿಒ ಹಳ್ಳಿ, ದೈಹಿಕ ಶಿಕ್ಷಣಾಧಿಕಾರಿ ರಮೇಶ ಬಿರಾದಾರ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಅರವಿಂದ ಡೋಣೂರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ವಿವರಣೆ ನೀಡಿದರು.

ಜಿಪಂ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಹೇಶ ಪೋದ್ದಾರ, ಯೋಜನಾಧಿಕಾರಿ ಸಿ.ಬಿ.ಕುಂಬಾರ, ಆಲಮೇಲ ಎಇಇ ಪರೀದಾ ಪಠಾಣ, ತಹಸೀಲ್ದಾರ್‌ ಕರೆಪ್ಪ ಬೆಳ್ಳಿ, ಆಲಮೇಲ ತಹಸೀಲ್ದಾರ್‌ ಸುರೇಶ ಅರಕೇರಿ, ತಾಪಂ ಎಇಇ ರಾಮು ಅಗ್ನಿ ಇದ್ದರು.ಸಿಂದಗಿ ತಾಲೂಕಿನಲ್ಲಿ 486 ಅಂಗನವಾಡಿ ಕೆಂದ್ರಗಳಿದ್ದು, ಅವುಗಳಲ್ಲಿ 248 ಸ್ವಂತ ಕಟ್ಟಡ, 155 ವಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಆಲಮೇಲ, ಕಡಣಿ, ತೋಂಟಾಪುರ, ಬಮ್ಮನಹಳ್ಳಿ, ಬಳಗಾನೂರ, ದೇವರನಾವದಗಿ, ಕುಮಸಗಿ ಸೇರಿದಂತೆ ಕೆಲವು ಗ್ರಾಮಗಳಲ್ಲಿ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಮಾಡಬೇಕಾಗಿದೆ.

-ಅಶೋಕ ಮನಗೂಳಿ,

ಶಾಸಕರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೂಡುಬಿದಿರೆ ಸಿಂಥೆಟಿಕ್ ಟ್ರ್ಯಾಕ್ ಗೆ 11 ವರ್ಷ ಕ್ರೀಡಾಭಿಮಾನಿಗಳ ಹರ್ಷ
ಹಿಪ್ಪರಗಿ ಬ್ಯಾರೇಜ್‌: ಸೋರಿಕೆ ತಡೆಗೆ ಮುಂದುವರಿದ ಕಾರ್ಯಾಚರಣೆ