ಕನ್ನಡಪ್ರಭ ವಾರ್ತೆ ಬೇಲೂರು
ನಾಗೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಮಾತನಾಡಿದ ಹಿರಿಗದ್ದೆ ಮಂಜುನಾಥ್, ನಮ್ಮ ನಾಗೇನಹಳ್ಳಿಯ ಪ್ರಾಥಮಿಕ ಸಹಕಾರ ಸಂಘವು ಈ ಹಿಂದೆ ಉತ್ತಮ ವಹಿವಾಟಿನೊಂದಿಗೆ ಮುಂಚೂಣಿ ಸಂಘವೆಂದು ಹೆಸರು ಪಡೆದಿತ್ತು. ಆದರೆ ನಂತರದ ದಿನಗಳಲ್ಲಿ ನಿರ್ದೇಶಕರ ಇಚ್ಛಾಶಕ್ತಿಯ ಕೊರತೆ ಕಾರಣ ಹಿಂದುಳಿಯಲು ಕಾರಣವಾಗಿತ್ತು. ಆದರೆ ಮುಂದಿನ ದಿನಗಳಲ್ಲಿ ಎಲ್ಲ ನಿರ್ದೇಶಕರ ಹಾಗೂ ಗ್ರಾಮಸ್ಥರು ಮತ್ತು ಷೇರುದಾರರ ಸಹಕಾರ ಪಡೆದು ಉತ್ತಮ ಆಡಳಿತದೊಂದಿಗೆ ಸಹಕಾರ ಸಂಘವನ್ನು ಪುನಃ ಮೇಲ್ಮಟ್ಟಕ್ಕೆ ಕೊಂಡೊಯ್ಯುವ ಕೆಲಸವನ್ನು ಮಾಡಲಾಗುವುದು. ಇಲ್ಲಿ ಆಡಳಿತ ಮಂಡಳಿಯವರೊಂದಿಗೆ ಅಧಿಕಾರಿ, ಸಿಬ್ಬಂದಿಗೆ ಚರ್ಚಿಸಿ ಈ ಭಾಗದ ರೈತರ ಅನುಕೂಲಕ್ಕಾಗಿ ಏನೇನು ಅಗತ್ಯ ವಸ್ತುಗಳು ಹಾಗೂ ಪರಿಕರಗಳು ಬೇಕು ಎಂಬುದನ್ನು ತಿಳಿದು ಎಲ್ಲವೂ ನಮ್ಮ ಸಂಘದಲ್ಲೆ ಸಿಗುವಂತೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ನಾಗೇನಹಳ್ಳಿ ಪ್ರಾಥಾಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ತೇಜಪಾಲ್, ನಂದೀಶ್, ಹೊನ್ನೇಗೌಡ, ಚಂದ್ರೇಗೌಡ, ಪ್ರಫುಲ್ಲ ಎನ್.ಆರ್.ಪುಟ್ಟಸ್ವಾಮಿಗೌಡ, ಎಂ.ಎಂ.ಸುಧಾ ವೀರಭದ್ರೇಗೌಡ, ಸತೀಶ್ ಚಂದ್ರ ಹೆಗಡೆ, ರಾಜಯ್ಯ, ಭೋಜ, ರಜತ್ ಕುಮಾರ್, ಟಿಎಪಿಸಿಎಂಎಸ್ ನಿರ್ದೇಶಕ ಮಲ್ಲೇಗೌಡ, ಮುಖಂಡರಾದ ಅಭಿಗೌಡ, ನಂದಕುಮಾರ್, ಸೇರಿದಂತೆ ಗ್ರಾಮಸ್ಥರಿದ್ದರು.