ನೀಟ್‌ ನಲ್ಲಿ ಎಕ್ಸಲಂಟ್ ಶಿಕ್ಷಣ ಸಂಸ್ಥೆ ಐತಿಹಾಸಿಕ ಸಾಧನೆ

KannadaprabhaNewsNetwork |  
Published : Jul 18, 2026, 01:30 AM IST
ನೀಟ್‌ನಲ್ಲಿ ಐತಿಹಾಸಿಕ ಫಲಿತಾಂಶ ನೀಡಿದ ಎಕ್ಸಲಂಟ್ ಶಿಕ್ಷಣ ಸಂಸ್ಥೆ | Kannada Prabha

ಸಾರಾಂಶ

2026ನೇ ಸಾಲಿನ ನೀಟ್ ಪರೀಕ್ಷೆಯಲ್ಲಿ ನಗರದ ಎಕ್ಸಲಂಟ್ ವಿಜ್ಞಾನ ಪದವಿಪೂರ್ವ ಕಾಲೇಜು ಮತ್ತೊಮ್ಮೆ ಐತಿಹಾಸಿಕ ಫಲಿತಾಂಶ ದಾಖಲಿಸಿದೆ.

ಕನ್ನಡಪ್ರಭ ವಾರ್ತೆ ವಿಜಯಪುರ

2026ನೇ ಸಾಲಿನ ನೀಟ್ ಪರೀಕ್ಷೆಯಲ್ಲಿ ನಗರದ ಎಕ್ಸಲಂಟ್ ವಿಜ್ಞಾನ ಪದವಿಪೂರ್ವ ಕಾಲೇಜು ಮತ್ತೊಮ್ಮೆ ಐತಿಹಾಸಿಕ ಫಲಿತಾಂಶ ದಾಖಲಿಸಿದೆ. 720 ಅಂಕ ಪೈಕಿ ಚನ್ನವಿರೇಶ ಕುಂಬಾರವರ 651 ಅಂಕ, ಸಲ್ಮಾನ ಗೋಡಿಹಾಳ 631, ಗಂಗಾಧರ ಮುತ್ತಗಿ 613, ಮಹೇಶ ಉಳ್ಳಾಗಡ್ಡಿ 612, ರುಮೇಜ್ ಶೇಖ್ 600 ಸೇರಿ 5 ವಿದ್ಯಾರ್ಥಿಗಳು 600ಕ್ಕೂ ಅಧಿಕ ಅಂಕ ಗಳಿಸಿದ್ದಾರೆ. ಬಸನಗೌಡ ಬೈರವಾಡಗಿ 582, ಪವಿತ್ರಾ ಹನಗಂಡಿ 580, ಅನುಷ್ಕಾ ಮಹಿಶಾಳೆ 579, ಸ್ನೇಹಾ ಪಟ್ಟಣಶೆಟ್ಟಿ 577, ಪ್ರಜ್ವಲ ಅವಟಿ 576, ದೃಶ್ಯಾ ಶೆಟ್ಟಿ 574, ಪ್ರತೀಕ ಚವ್ಹಾಣ 571, ಭೂಮಿಕಾ ಹಳ್ಳಿ 571, ಸಾಗರ ಬನಹಟ್ಟಿ 571, ಆಕಾಶ ಸತ್ತಿಗೇರಿ 570, ವಿನಾಯಕ ಪಾಯಣ್ಣವರ 568, ಸೃಷ್ಟಿ ಜತ್ತಿ 564, ಮಲ್ಲಿಕಾರ್ಜುನ ಹೂಗಾರ 562, ಪೂರ್ವಿ ಮಂಟೂರ 561, ಧೈರ್ಯಶೀಲ ಹವಾಲ್ದಾರ 558 ಸೇರಿದಂತೆ 63ಕ್ಕೂ ಅಧಿಕ ವಿದ್ಯಾರ್ಥಿಗಳು 500ಕ್ಕೂ ಅಧಿಕ ಅಂಕ ಪಡೆದು ಎಕ್ಸಲಂಟ್ ಶಿಕ್ಷಣ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.

ಫಲಿತಾಂಶದ ಕುರಿತು ಹರ್ಷವ್ಯಕ್ತಪಡಿಸಿದ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಚೇರಮನ್ ಬಸವರಾಜ ಕೌಲಗಿ ಮಾತನಾಡಿ, ಮೊದಲ ಬಾರಿಗೆ ಬರೆದ ಪರೀಕ್ಷೆ ರದ್ದಾದಾಗ ವಿದ್ಯಾರ್ಥಿಗಳಲ್ಲಿ ಆತಂಕ ಮನೆ ಮಾಡಿತ್ತು. ಇಷ್ಟು ಚೆನ್ನಾಗಿ ಬರೆದ ಪರೀಕ್ಷೆ ರದ್ದಾಯಿತು ಮುಂದೇನಾಗುತ್ತದೆಯೋ ಎಂದುಕೊಂಡಿದ್ದರು. ಅನಿವಾರ್ಯತೆ ಅರಿತುಕೊಂಡು ಹಗಲು ರಾತ್ರಿ ಓದಿದ ವಿದ್ಯಾರ್ಥಿಗಳು ಕೊನೆಗೂ ತಾವಂದುಕೊಂಡ ಫಲಿತಾಂಶ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಗೊಂದಲಗಳ ಮಧ್ಯದಲ್ಲಿಯೇ ನಮ್ಮ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜು ಹಾಗೂ ನೀಟ್ ಅಕಾಡೆಮಿಯ ವಿದ್ಯಾರ್ಥಿಗಳಲ್ಲಿ 5 ವಿದ್ಯಾರ್ಥಿಗಳು 600ಕ್ಕೂ ಅಧಿಕ ಹಾಗೂ 63ಕ್ಕೂ ಅಧಿಕ ವಿದ್ಯಾರ್ಥಿಗಳು 500ಕ್ಕೂ ಅಧಿಕ ಅಂಕ ಪಡೆಯುವುದರ ಮೂಲಕ ಐತಿಹಾಸಿಕ ಸಾಧನೆಗೆ ಸಾಕ್ಷಿಯಾಗಿದ್ದಾರೆ.

ಅವರ ಫಲಿತಾಶಂದ ಅನ್ವಯ ಉತ್ತಮ ಕಾಲೇಜುಗಳಲ್ಲಿ ಸೀಟು ಸಿಗುವುದರೊಂದಿಗೆ ಅವರ ಭವಿಷ್ಯವೂ ಉಜ್ವಲವಾಗುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಫಲಿತಾಂಶ ಪ್ರಸ್ತುತ ನೀಟ್ ಪರೀಕ್ಷೆ ಬರೆಯಬೇಕು ಎಂದುಕೊಂಡಿರುವ ವಿದ್ಯಾರ್ಥಿಗಳಲ್ಲಿ ಚೈತನ್ಯ ಮೂಡಿಸುವುದರ ಜೊತೆಗೆ ಇನ್ನೂ ಹೆಚ್ಚಿನ ಸಾಧನೆ ಮಾಡುವುದಕ್ಕೆ ಪ್ರೇರಣೆಯಾಗಲಿ ಎಂದು ಆಶಿಸಿ ಅತ್ಯುತ್ತಮ ಫಲಿತಾಂಶದ ಮೂಲಕ ಸಂಸ್ಥೆಗೆ, ಜಿಲ್ಲೆಗೆ, ನಾಡಿಗೆ ಕೀರ್ತಿ ತಂದಿರುವ ವಿದ್ಯಾರ್ಥಿಗಳಿಗೆ ಶುಭಾಷಯಗಳನ್ನು ಸಲ್ಲಿಸುವುದಾಗಿ ತಿಳಿಸಿದರು.

ಮಕ್ಕಳ ಸಾಧನೆಗೆ ಶ್ರಮಿಸಿದ ಬೋಧಕ ಸಿಬ್ಬಂದಿಗೂ ಅಭಿನಂದನೆ ಹೇಳಿದರು. ಕಾಲೇಜಿನ ಆಡಳಿತ ಮಂಡಳಿ ಸದಸ್ಯರು, ಕಾಲೇಜಿನ ಪ್ರಾಚಾರ್ಯ ಮಂಜುನಾಥ ಜುನಗೊಂಡ, ಶೈಕ್ಷಣಿಕ ಸಂಯೋಜಕ ಮಂಜುನಾಥ ತುಮ್ಮರಮಟ್ಟಿ ಸೇರಿದಂತೆ ಎಲ್ಲ ಬೋಧಕ-ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೊದಲ ಆಷಾಢ ಶುಕ್ರವಾರಕ್ಕೆ ಭಕ್ತರ ದಂಡು
ವೃಷಭಲಿಂಗೇಶ್ವರ ಮಠಕ್ಕೆ ಉತ್ತರಾಧಿಕಾರಿಯಾಗಿ ಸಂಗಬಸವ ಶ್ರೀ ಆಯ್ಕೆ