ನಿರ್ಣಾಯಕರಾಗಿ ಶ್ರೀಕಾಂತ ಕಾಖಂಡಕಿ ಆಯ್ಕೆ

KannadaprabhaNewsNetwork |  
Published : Jul 18, 2026, 01:30 AM IST
ಫೋಟೋ ೧೭ಡಿಎಚಪಿ೩ | Kannada Prabha

ಸಾರಾಂಶ

ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೇಟ್‌ ಕ್ರೀಡಾಂಗಣದಲ್ಲಿ ಜು. 23 ರಿಂದ ಅಗಸ್ಟ 2ನೇ ತಾರೀಖಿನವರೆಗೆ ನಡೆಯಲಿರುವ ಮಹಿಳೆಯರ ಮಹಾರಾಣಿ ಪ್ರೀಮಿಯರ್ ಲೀಗ್ ಕ್ರಿಕೆಟ್‌ ಪಂದ್ಯಾವಳಿಗೆ ದೇವರಹಿಪ್ಪರಗಿ ಪಟ್ಟಣದ ಶ್ರೀಕಾಂತ ಕಾಖಂಡಕಿಯವರು ಆನ್ ಫೀಲ್ಡ್ ಅಂಪೈರ್‌ ಆಗಿ ಆಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೇಟ್‌ ಕ್ರೀಡಾಂಗಣದಲ್ಲಿ ಜು. 23 ರಿಂದ ಅಗಸ್ಟ 2ನೇ ತಾರೀಖಿನವರೆಗೆ ನಡೆಯಲಿರುವ ಮಹಿಳೆಯರ ಮಹಾರಾಣಿ ಪ್ರೀಮಿಯರ್ ಲೀಗ್ ಕ್ರಿಕೇಟ್‌ ಪಂದ್ಯಾವಳಿಗೆ ದೇವರಹಿಪ್ಪರಗಿ ಪಟ್ಟಣದ ಶ್ರೀಕಾಂತ ಕಾಖಂಡಕಿಯವರು ಆನ್ ಫೀಲ್ಡ್ ಅಂಪೈರ್‌ ಆಗಿ ಆಯ್ಕೆಯಾಗಿದ್ದಾರೆ.

ಕರ್ನಾಟಕ ರಾಜ್ಯ ಕ್ರಿಕೇಟ್‌ ಸಂಸ್ಥೆಯ ಉನ್ನತ ಪಂದ್ಯಾವಳಿಯಲ್ಲಿ ಅಂಪೈರ್ ಆಗಿ ಆಯ್ಕೆಯಾದವರಲ್ಲಿ ವಿಜಯಪುರ/ಬಾಗಲಕೋಟೆ ಜಿಲ್ಲೆಯ ಪ್ರಥಮ ನಿರ್ಣಾಯಕರೆಣಿಸಿಕೊಂಡಿದ್ದಾರೆ. ರಾಷ್ಟ್ರೀಯ ಟೆನ್ನಿಸ್‌ಬಾಲ್‌ ಕ್ರಿಕೇಟ್‌ ಚಾಂಪಿಯನಶಿಪ್‌ನಲ್ಲಿ, ಹಿಮಾಚಲಪ್ರದೇಶದ ಕುಲ್ಲು, ಉತ್ತರ ಪ್ರದೇಶದ ವಾರಣಾಸಿ, ಬಿಹಾರ, ಗುಜರಾತ, ಚೆನ್ನೈ, ಗೋವಾದಲ್ಲಿ ಈಗಾಗಲೇ ಅಂಪೈರ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ವಿಜಯಪುರದ ಖ್ಯಾತ ಕ್ರಿಕೇಟ್‌ ಪಟು ಡಾ.ಅಶೋಕಕುಮಾರ ಜಾಧವ ಅವರ ಮಾರ್ಗದರ್ಶನದಲ್ಲಿ ಈ ಮಹೋನ್ನತ ಸಾಧನೆಗೈದ ಇವರಿಗೆ ಕರ್ನಾಟಕ ರಾಜ್ಯ ಕ್ರಿಕೇಟ್‌ ಸಂಸ್ಥೆಯ ವಿಜಯಪುರದ ಸಂಯೋಜಕ ಎನ್‌.ಎಂ. ಹುಟಗಿ, ದೇವರಹಿಪ್ಪರಗಿಯ ಮಾಜಿ ಆಟಗಾರರಾದ ಶ್ರೀಧರನಾಡಗೌಡ, ರಮೇಶ ಮಸಬಿನಾಳ, ಪ್ರಕಾಶ ಮಲ್ಲಾರಿ.ಮುನ್ನಾ ಮಳಖೇಡ,ಜಬ್ಬಾರ್ ಪಾನಪುರೋಷ್, ರಾಘು ಗುಡಿಮನಿ,

ರಮೇಶ ಮ್ಯಾಕೆರಿ, ಪಿ.ಸಿ. ತಲಕೇರಿ, ನಜೀರ್ ಕಲಕೇರಿ, ಹುಚ್ಚಪ್ಪ ಶಿರಸ್ಯಾಡ, ರಾಜು ಕಾಖಂಡಕಿ, ಕೆ.ಎರ್ಶರ್, ಸಿ.ಎ. ಸಂಯೋಜಿತ ಕ್ರಿಕೇಟ್‌ ಕ್ಲಬ್‌ಗಳ ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳು, ಆಟಗಾರರು ಅಭಿನಂದಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೊದಲ ಆಷಾಢ ಶುಕ್ರವಾರಕ್ಕೆ ಭಕ್ತರ ದಂಡು
ವೃಷಭಲಿಂಗೇಶ್ವರ ಮಠಕ್ಕೆ ಉತ್ತರಾಧಿಕಾರಿಯಾಗಿ ಸಂಗಬಸವ ಶ್ರೀ ಆಯ್ಕೆ