ತ.ನಾಡು ಮಾಜಿ ಸಿಎಂ ಸ್ಟಾಲಿನ್‌ ಪತ್ನಿ ವಿರುದ್ಧ ಕೋಪಕ್ಕೆ ಚಾಮರಾಜನಗರ ಕೋರ್ಟ್‌ಗೆ ಹುಸಿ ಬಾಂಬ್‌ ಬೆದರಿಕೆ

KannadaprabhaNewsNetwork |  
Published : Jun 28, 2026, 02:45 AM IST
ಚಾಮರಾಜನಗರ ಜಿಲ್ಲಾ ನ್ಯಾಯಾಲಯಕ್ಕೆ ಮತ್ತೊಮ್ಮೆ ಬಾಂಬ್ ಬೆದರಿಕೆ | Kannada Prabha

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಹುಸಿ ಬೆದರಿಕೆ ಬಾಂಬ್‌ ಸಂದೇಶಗಳ ಚಟುವಟಿಕೆ ಎಗ್ಗಿಲ್ಲದಂತೆ ನಡೆಯುತ್ತಿದ್ದು, ಚಾಮರಾಜನಗರ ಜಿಲ್ಲಾ ನ್ಯಾಯಾಲಯಕ್ಕೆ ವಾರದಲ್ಲಿಯೇ 2ನೇ ಬಾಂಬ್‌ ಬೆದರಿಕೆ ಸಂದೇಶ ಬಂದಿದೆ. ಅದರಲ್ಲಿಯೂ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಪತ್ನಿ ದುರ್ಗಾ ಸ್ಟಾಲಿನ್‌ ವಿರುದ್ಧ ಆಕ್ರೋಶಕ್ಕೆ ಕಿಡಿಗೇಡಿಗಳು ಚಾಮರಾಜನಗರ ಸತ್ರ ಮತ್ತು ಜಿಲ್ಲಾ ನ್ಯಾಯಾಲಯಕ್ಕೆ ಶನಿವಾರ ಬಾಂಬ್‌ ಸಂದೇಶ ಕಳುಹಿಸಿದ್ದಾರೆ. ಪರಿಶೀಲನೆ ಬಳಿಕ ಅಧಿಕಾರಿಗಳು ಬೆದರಿಕೆ ಸಂದೇಶ ಹುಸಿ ಎಂದು ಖಾತ್ರಿಪಡಿಸಿದ್ದಾರೆ.

ಚಾ.ನಗರ ಕೋರ್ಟ್‌ಗೆ ವಾರದಲ್ಲಿ 2ನೇ ಸಲ ಬಾಂಬ್‌ ಮೇಲ್‌

ಬುಧವಾರಷ್ಟೇ ಅಜ್ಮಲ್‌ ಕಸಬ್‌ ಹೆಸರಿನಲ್ಲಿ ಬಂದಿದ್ದ ಇ-ಮೇಲ್‌

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಇತ್ತೀಚಿನ ದಿನಗಳಲ್ಲಿ ಹುಸಿ ಬೆದರಿಕೆ ಬಾಂಬ್‌ ಸಂದೇಶಗಳ ಚಟುವಟಿಕೆ ಎಗ್ಗಿಲ್ಲದಂತೆ ನಡೆಯುತ್ತಿದ್ದು, ಚಾಮರಾಜನಗರ ಜಿಲ್ಲಾ ನ್ಯಾಯಾಲಯಕ್ಕೆ ವಾರದಲ್ಲಿಯೇ 2ನೇ ಬಾಂಬ್‌ ಬೆದರಿಕೆ ಸಂದೇಶ ಬಂದಿದೆ. ಅದರಲ್ಲಿಯೂ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಪತ್ನಿ ದುರ್ಗಾ ಸ್ಟಾಲಿನ್‌ ವಿರುದ್ಧ ಆಕ್ರೋಶಕ್ಕೆ ಕಿಡಿಗೇಡಿಗಳು ಚಾಮರಾಜನಗರ ಸತ್ರ ಮತ್ತು ಜಿಲ್ಲಾ ನ್ಯಾಯಾಲಯಕ್ಕೆ ಶನಿವಾರ ಬಾಂಬ್‌ ಸಂದೇಶ ಕಳುಹಿಸಿದ್ದಾರೆ. ಪರಿಶೀಲನೆ ಬಳಿಕ ಅಧಿಕಾರಿಗಳು ಬೆದರಿಕೆ ಸಂದೇಶ ಹುಸಿ ಎಂದು ಖಾತ್ರಿಪಡಿಸಿದ್ದಾರೆ.

ಮಧ್ಯಾಹ್ನ 2.25ಕ್ಕೆ ನ್ಯಾಯಾಲಯದ ಇ-ಮೇಲ್‌ ವಿಳಾಸಕ್ಕೆ ಬಾಂಬ್‌ ಬೆದರಿಕೆ ಸಂದೇಶ ಕಳುಹಿಸಲಾಗಿದ್ದು, ಅದರಲ್ಲಿ ‘ತಮಿಳುನಾಡಿನ ಮಾಜಿ ಸಿಎಂ ಸ್ಟಾಲಿನ್‌ ಅವರ ಪತ್ನಿ ದುರ್ಗಾ ಸ್ಟಾಲಿನ್‌ ಅವರು ಪ್ರವಾದಿ ಮಹಮ್ಮದ್‌ಗೆ ಅಪಮಾನ ಮಾಡಿದ್ದು, ಚಾಮರಾಜನಗರ ಕೋರ್ಟ್ ರಸ್ತೆಯಲ್ಲಿ 3 ಸಿಲಿಕಾನ್ ಬಾಂಬ್, ನ್ಯಾಯಲಯದ ರೆಕಾರ್ಡ್ ರೂಂನಲ್ಲಿ 3 ಹಾಗೂ ಇ-ಸೇವಾ ಕೇಂದ್ರದಲ್ಲಿ 2 ಬಾಂಬ್ ಇಡಲಾಗಿದೆ’ ಎಂದು ಕಿಡಿಗೇಡಿಗಳು ಬರೆದಿದ್ದಾರೆ.

ಸಂದೇಶ ಬರುತ್ತಿದ್ದಂತೆ ನ್ಯಾಯಾಲಯದಿಂದ ವಕೀಲರು, ನ್ಯಾಯಾಧೀಶರು, ಸಿಬ್ಬಂದಿ ಮತ್ತು ಜನರನ್ನು ಹೊರಗೆ ಕಳುಹಿಸಲಾಯಿತು. ಬಳಿಕ ಬಾಂಬ್‌ ನಿಷ್ಕ್ರಿಯ ದಳ, ಶ್ವಾನ ದಳ, ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಯಾವುದೇ ಬಾಂಬ್‌ ಸಿಗದಿದ್ದಾಗ, ಹುಸಿ ಎಂದು ಖಾತ್ರಿಪಡಿಸಿದ್ದಾರೆ.ಕೋರ್ಟ್ ಸಮಯ ವ್ಯರ್ಥ:

ಈ ಕುರಿತು ವಕೀಲ ಪ್ರಸನ್ನ ಕುಮಾರ್‌ ಮಾತನಾಡಿ, ಕೆಲ ಕಿಡಿಗೇಡಿಗಳು ನ್ಯಾಯಾಂಗ ವ್ಯವಸ್ಥೆಯನ್ನೇ ಗುರಿಯಾಗಿಸಿ ಬಾಂಬ್ ಬೆದರಿಕೆ ಕಳುಹಿಸುತ್ತಿದ್ದಾದೆ. 2 ದಿನದ ಅಂತರದಲ್ಲಿ 2ನೇ ಬಾರಿ ಮೇಲ್ ಬಂದಿದ್ದು, ನ್ಯಾಯಾಧೀಶರು, ವಕೀಲರು, ಕಕ್ಷಿದಾರರು ಆತಂಕದಲ್ಲಿದ್ದಾರೆ. ಕಲಾಪಗಳು ನಡೆಯದಿರುವುದರಿಂದ ಸಮಯ ವ್ಯರ್ಥವಾಗಿದೆ. ಕಕ್ಷಿದಾರರು ದೂರದ ಊರುಗಳಿಂದ ಬಂದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಗೃಹ ಸಚಿವರು ಈ ಬೆದರಿಕೆ ಸಂದೇಶವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಕಿಡಿಗೇಡಿಗಳನ್ನು ಬಂಧಿಸಿ, ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಬುಧವಾರವೂ ಬಾಂಬ್‌ ಸಂದೇಶ:

ಉಗ್ರ ಅಜ್ಮಲ್‌ ಕಸಬ್‌ ಹೆಸರಿನಲ್ಲಿ ಬುಧವಾರಷ್ಟೇ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್‌ ಬೆದರಿಕೆ ಸಂದೇಶ ಬಂದಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ಅಭಿವೃದ್ಧಿಗೆ ಕೆಂಪೇಗೌಡರ ದೂರದೃಷ್ಟಿಯೇ ಕಾರಣ
ಇಂದು ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ: ಡಾ.ಸಿ.ಎಂ.ಅರವಿಂದ್