ಹಾಕಿ ಕೂರ್ಗ್ ಲೀಗ್ ಚಾಂಪಿಯನ್: ಬೊಟ್ಟಿಯತ್ನಾಡ್ ಕುಂದ ಜಯಬೇರಿ

KannadaprabhaNewsNetwork |  
Published : Nov 18, 2026, 02:45 AM IST
ಹಾಕಿ ಕೂರ್ಗ್ ಲೀಗ್ ಚಾಂಪಿಯನ್ ಬೊಟ್ಟಿಯತ್ನಾಡ್ ಕುಂದ ಜಯಬೇರಿ: ರನ್ನರ್ಸ್ ಸ್ಥಾನಕ್ಕೆ ಕೂರ್ಗ್ ಚಾಲೆಂಜರ್ಸ್ ತೃಪ್ತಿ | Kannada Prabha

ಸಾರಾಂಶ

ಹಾಕಿ ಕೂರ್ಗ್ ನೇತೃ್ತ್ವದಲ್ಲಿ, ಸ್ಥಳೀಯ ಡಾಲ್ಫಿನ್ಸ್ ಸ್ಫೋರ್ಟ್ಸ್ ಕ್ಲಬ್ ಸಹಕಾರದಲ್ಲಿ ಇಲ್ಲಿನ ಟರ್ಫ್ ಮೈದಾನದಲ್ಲಿ ಜರುಗಿದ ಹಾಕಿ ಲೀಗ್ ಫೈನಲ್ ಪಂದ್ಯಾವಳಿಯಲ್ಲಿ ಕುಂದ ಗ್ರಾಮದ ಬೊಟ್ಟಿಯತ್ ನಾಡ್ ತಂಡವು ಕೂರ್ಗ್ ಚಾಲೆಂಜರ್ಸ್ ಕುಂದ ತಂಡದ ವಿರುದ್ಧ ೫-೪ ಗೋಲುಗಳ ಅಂತರದಲ್ಲಿ ಜಯಭೇರಿ ಬಾರಿಸುವ ಮೂಲಕ ನೂತನ ಕೂರ್ಗ್ ಚಾಂಪಿಯನ್ ಆಗಿ ಹೊರಹೊಮ್ಮಿತು.

ಸೋಮವಾರಪೇಟೆ : ಹಾಕಿ ಕೂರ್ಗ್ ನೇತೃ್ತ್ವದಲ್ಲಿ, ಸ್ಥಳೀಯ ಡಾಲ್ಫಿನ್ಸ್ ಸ್ಫೋರ್ಟ್ಸ್ ಕ್ಲಬ್ ಸಹಕಾರದಲ್ಲಿ ಇಲ್ಲಿನ ಟರ್ಫ್ ಮೈದಾನದಲ್ಲಿ ಜರುಗಿದ ಹಾಕಿ ಲೀಗ್ ಫೈನಲ್ ಪಂದ್ಯಾವಳಿಯಲ್ಲಿ ಕುಂದ ಗ್ರಾಮದ ಬೊಟ್ಟಿಯತ್ ನಾಡ್ ತಂಡವು ಕೂರ್ಗ್ ಚಾಲೆಂಜರ್ಸ್ ಕುಂದ ತಂಡದ ವಿರುದ್ಧ ೫-೪ ಗೋಲುಗಳ ಅಂತರದಲ್ಲಿ ಜಯಭೇರಿ ಬಾರಿಸುವ ಮೂಲಕ ನೂತನ ಕೂರ್ಗ್ ಚಾಂಪಿಯನ್ ಆಗಿ ಹೊರಹೊಮ್ಮಿತು.

ತೀವ್ರ ಹಣಾಹಣಿಯಿಂದ ಕೂಡಿದ ಪಂದ್ಯಾವಳಿಯಲ್ಲಿ ಎರಡೂ ತಂಡಗಳು ಸಮಬಲವನ್ನು ಪ್ರದರ್ಶಿಸಿದವು. ಅಂತಿಮವಾಗಿ ಬೊಟ್ಟಿಯತ್ ನಾಡ್ ತಂಡ ಗೆಲುವಿನ ನಗೆ ಬೀರಿತು. ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಫೈನಲ್ ಪಂದ್ಯಾಟಕ್ಕೆ ಶುಭ ಹಾರೈಸಿದರು. ಈ ಸಂದರ್ಭ ಅಧ್ಯಕ್ಷ ಲವಕುಮಾರ್, ಡಾಲ್ಫಿನ್ಸ್ ಸ್ಪೋರ್ಟ್ಸ ಕ್ಲಬ್ ಅಧ್ಯಕ್ಷ ಬಿ.ಆರ್. ಮಹೇಶ್, ಕರವೇ ಜಿಲ್ಲಾಧ್ಯಕ್ಷ ಕೆ.ಎನ್.ದೀಪಕ್, ಜಯ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಸುರೇಶ್ ಶೆಟ್ಟಿ, ಡಾಲ್ಫಿನ್ಸ್ ಕ್ಲಬ್ ಮಾಜಿ ಅಧ್ಯಕ್ಷರಾದ ಅಶೋಕ್, ಮಹೇಶ್ ಮಾಟ್ನಳ್ಳಿ, ಗಿರೀಶ್, ಪದಾಧಿಕಾರಿಗಳಾದ ಅಂತಾರಾಷ್ಟ್ರೀಯ ಹಾಕಿ ಆಟಗಾರ ಕೆ.ಪಿ.ರಾಯ್, ಮಂಜು, ವಿನಾಯಕ, ಸಲಹೆಗಾರ ಕೆ.ಎಸ್. ಪ್ರಕಾಶ್, ಹಿರಿಯ ಹಾಕಿ ಆಟಗಾರ ಪಿ.ಎಲ್.ಮಂಜುನಾಥ್ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಳೆನೀರು ಕಾಲುವೆಗೆ ಸಿಎಂ ಶಂಕುಸ್ಥಾಪನೆ
ಪ್ರೇಯಸಿ ಬಿಟ್ಟು ಹೋಗಿದ್ದಕ್ಕೆಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ