ಹೋಳಿ ಹಬ್ಬ: ಡಿಜಿ ಹಾಡುಗಳಿಗೆ ಕುಣಿದು ಕುಪ್ಪಳಿಸಿದ ಯುವ ಸಮೂಹ

KannadaprabhaNewsNetwork |  
Published : Mar 05, 2026, 02:30 AM IST
ಫೋಟೋವಿವರ-(4ಎಚ್‌ಪಿಟಿ 8,9)ಹೊಸಪೇಟೆ ನಗರದಲ್ಲಿ ಬುಧವಾರ ಶಾಸಕ ಎಚ್‌. ಆರ್‌. ಗವಿಯಪ್ಪ ಅವರ ಪುತ್ರರಾದ ಗುರುದತ್‌ ಮತ್ತು ವಿರುಪಾಕ್ಷಿ ಅವರು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕನ್ನಡ ರ್ಯಾಪರ್‌ ರಾಹುಲ್‌ ಡಿಟೋ ಅವರ ತಂಡದಿಂದ ಡಿಜಿ ಹಾಡುಗಳಿಗೆ ಯುವ ಸಮೂಹ ಹುಚ್ಚೆದು ಕುಣಿಯುತ್ತಿರುವುದು | Kannada Prabha

ಸಾರಾಂಶ

ಯುವಕರು ಕುಣಿಯುತ್ತಿದ್ದಂತೆ ಅಗ್ನಿಶಾಮಕದಳದ ವಾಹನಗಳಿಂದ ಮತ್ತು ನೀರಿನ ಟ್ಯಾಂಕರ್ ಗಳ ಮೂಲಕ ದೊಡ್ಡ ಪ್ರಮಾಣದಲ್ಲಿ ಯುವಕರ ಮೇಲೆ ನೀರು ಹರಿಸುತ್ತಿದ್ದರು.

ಹೊಸಪೇಟೆ: ಶಾಸಕ ಎಚ್‌.ಆರ್‌. ಗವಿಯಪ್ಪ ಪುತ್ರರಾದ ಎಚ್‌.ಜಿ. ಗುರುದತ್‌ ಹಾಗೂ ಎಚ್‌.ಜಿ. ವಿರುಪಾಕ್ಷಿ ನೇತೃತ್ವದಲ್ಲಿ ನಗರದ ಡಾ. ಪುನೀತ್‌ ರಾಜಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹೋಳಿ ಹಬ್ಬದಲ್ಲಿ ಸಾವಿರು ಜನರು ಭಾಗವಹಿಸಿ, ಅತ್ಯಂತ ಉತ್ಸುಕರಾಗಿ, ಸಡಗರ ಸಂಮ್ರದೊಂದಿಗೆ ಮತ್ತು ವರ್ಣರಂಜಿತವಾಗಿ ಹೋಳಿ ಹಬ್ಬ ಆಚರಿಸಿದರು.ಹೋಳಿಯ ಬಣ್ಣದಾಟದ ಜೊತೆಗೆ ಕನ್ನಡ ರ್‍ಯಾಪರ್‌ ರಾಹುಲ್‌ ಡಿಟೋ ಅವರ ತಂಡದಿಂದ ಡಿಜಿ ಹಾಡುಗಳನ್ನು ಹಾಡುಗಳಿಗೆ ನೆರೆದಿದ್ದ ಯುವ ಸಮೂಹದ ಯುವಕ-ಯುವತಿಯರು ಹುಚ್ಚೆದು ಕುಣಿಯುತ್ತಿದ್ದರು.

ಯುವಕರು ಕುಣಿಯುತ್ತಿದ್ದಂತೆ ಅಗ್ನಿಶಾಮಕದಳದ ವಾಹನಗಳಿಂದ ಮತ್ತು ನೀರಿನ ಟ್ಯಾಂಕರ್ ಗಳ ಮೂಲಕ ದೊಡ್ಡ ಪ್ರಮಾಣದಲ್ಲಿ ಯುವಕರ ಮೇಲೆ ನೀರು ಹರಿಸುತ್ತಿದ್ದರು. ನೀರಿನೊಂದಿಗೆ ಬಣ್ಣದ ರಾಕೆಟ್‌ ಪಟಾಕಿಗಳನ್ನು ಸಿಡಿಸುವ ಮೂಲಕ ನೆರೆದಿದ್ದ ಜನರ ಮೇಲೆ ವಿವಿಧ ರೀತಿಯ ಬಣ್ಣವನ್ನು ಸಿಂಪಡಿಸುತ್ತಿದ್ದರು.

ಒಂದು ಕಡೆ ಆಕಾಶದಿಂದ ವಿವಿಧ ರೀತಿಯ ಬಣ್ಣ ಸಿಂಪರಣೆ, ಬಣ್ಣದ ಜೊತೆಗೆ ನೀರು ನಾಲ್ಕು ದಿಕ್ಕುಗಳಿಂದಲೂ ಸಿಂಪಡಿಸುತ್ತಿರುವಾಗ ನೀರು ಮತ್ತು ಬಣ್ಣ ಏಕಕಾಲಕ್ಕೆ ಯುವಸಮೂಹದ ಮೈಮೇಲೆ ಹರಡಿಕೊಳ್ಳುತ್ತಿದ್ದಂತೆ ಮತ್ತು ಡಿಜಿ ಹಾಡುಗಳೊಂದಿಗೆ ಕೇಕೆ ಹಾಕುತ್ತಾ ಯುವಕರು ಕುಣಿದಾಡುತ್ತಿದ್ದರು.

ಬೆಳಿಗ್ಗೆನೇ ಆರಂಭಗೊಳ್ಳಬೇಕಾಗಿದ್ದ ಬಣ್ಣದ ರಂಗಿನಾಟವು ವಿದ್ಯಾರ್ಥಿಗಳ ಪರೀಕ್ಷೆಗಳು ನಡೆಯುತ್ತಿರುವುದರಿಂದ ಕಾಲೇಜು ಪಕ್ಕದಲ್ಲೇ ಜಿಲ್ಲಾ ಕ್ರೀಡಾಂಗಣ ಇರುವುದರಿಂದ ವಿದ್ಯಾರ್ಥಿಗಳ ಪರೀಕ್ಷೆ ಮುಗಿದ ಬಳಿಕ ಮಧ್ಯಾಹ್ನ 1ಗಂಟೆ ನಂತರ ಬಣ್ಣದಾಟ ಆರಂಭಗೊಂಡು, ಮಧ್ಯಾಹ್ನ 3 ಗಂಟೆಯವರೆಗೂ ಜಿಲ್ಲಾ ಕ್ರೀಡಾಂಗಣದಲ್ಲಿ ಬಣ್ಣದಾಟ ನಡೆಯಿತು. ಬಣ್ಣದಾಟದಲ್ಲಿ ಮಹಿಳೆಯರಿಗೆ ಯುವತಿಯರಿಗೆ ಮತ್ತು ಪುರುಷರಿಗೆ ಯುವಕರಿಗೆ ಪ್ರತ್ಯೇಕ ಗ್ಯಾಲರಿ ವ್ಯವಸ್ಥೆಗೊಳಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಲ್ಪೆ ಬಂದರಿನಲ್ಲಿ ಕಾರ್ಮಿಕರಿಗೆ ದೌರ್ಜನ್ಯ: ಪ್ರತಿಭಟನೆ
ಸವಣೂರು ಕ್ಷೇತ್ರದ ಅಭಿವೃದ್ಧಿಯೇ ಪ್ರಮುಖ ಗುರಿ: ಯಾಸೀರ ಅಹ್ಮದ ಖಾನ ಪಠಾಣ