ಕನಕಪುರ: ಜಗತ್ತಿನಲ್ಲಿ ಯಾವುದಾದರೂ ಒಂದು ದೇಶ ಪುಣ್ಯಭೂಮಿಯೆಂದು ಕರೆಯಿಸಿಕೊಳ್ಳಲು ಅರ್ಹವಾಗಿದ್ದರೆ ಅದು ನಮ್ಮ ಭಾರತ ದೇಶ ಮಾತ್ರ ಎಂದು ಯುವ ಬ್ರಿಗೇಡ್ ಕಾರ್ಯಕರ್ತ ಸುಮಂತ್ ಭಾರ್ಗವ್ ತಿಳಿಸಿದರು.
ಕನಕಪುರ: ಜಗತ್ತಿನಲ್ಲಿ ಯಾವುದಾದರೂ ಒಂದು ದೇಶ ಪುಣ್ಯಭೂಮಿಯೆಂದು ಕರೆಯಿಸಿಕೊಳ್ಳಲು ಅರ್ಹವಾಗಿದ್ದರೆ ಅದು ನಮ್ಮ ಭಾರತ ದೇಶ ಮಾತ್ರ ಎಂದು ಯುವ ಬ್ರಿಗೇಡ್ ಕಾರ್ಯಕರ್ತ ಸುಮಂತ್ ಭಾರ್ಗವ್ ತಿಳಿಸಿದರು.
ನಗರದ ವಿವೇಕಾನಂದ ನಗರದಲ್ಲಿ ಯುವ ಬ್ರಿಗೇಡ್ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದರ 161ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರ ಬಗ್ಗೆ ನಮ್ಮ ದೇಶದ ಹಲವು ಮಹನೀಯರು ಆಡಿದ ಮಾತುಗಳು ಅವರ ಜೀವನದ ಮಹತ್ವವನ್ನ ತೆರೆದಿಡುತ್ತವೆ. ರವೀಂದ್ರನಾಥ ಠಾಕೂರ್ ಅವರು ನೀವು ಭಾರತವನ್ನು ಅರಿಯಬೇಕೆಂದಿದ್ದರೆ ಸ್ವಾಮಿ ವಿವೇಕಾನಂದರನ್ನ ಅಧ್ಯಯನ ಮಾಡಿ ಹಾಗೂ ಮಹಾತ್ಮ ಗಾಂಧೀಜಿಯವರು ನಾನು ಸ್ವಾಮೀಜಿಯವರ ಕೃತಿಗಳನ್ನು ಅಮೂಲಾಗ್ರವಾಗಿ ಓದಿದ್ದು ಅವುಗಳ ಅಧ್ಯಯನದ ನಂತರ ಭಾರತದ ಬಗೆಗಿದ್ದ ನನ್ನ ಪ್ರೀತಿ ಸಾವಿರ ಪಾಲು ಹೆಚ್ಚಾಯಿತು ಎಂಬ ಅವರ ಅಭಿಪ್ರಾಯ, ನೇತಾಜಿ ಸುಭಾಷ್ ಚಂದ್ರಬೋಸ್ ಹೇಳಿದಂತೆ ವಿದೇಶದಲ್ಲಿ ನಿಂತು ಸ್ವಾಮೀಜಿ ಆಡಿದ ನುಡಿಗಳಿಂದ ನಮ್ಮ ದೇಶದ ಜನರ ಆತ್ಮಗೌರವ, ಆತ್ಮವಿಶ್ವಾಸ ಹಾಗೂ ಆತ್ಮಬಲ ಹೆಚ್ಚಾಯಿತು ಎಂಬ ಅವರ ನುಡಿಯು ಸ್ವಾಮಿ ವಿವೇಕಾನಂದರ ವ್ಯಕ್ತಿತ್ವವನ್ನು ತೋರಿಸುವ ಮೂಲಕ ಇಡೀ ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠ ಹಾಗೂ ಪುಣ್ಯದ ದೇಶ ಭಾರತ ಎಂಬುದು ಸಾಬೀತಾಗಿದೆ ಎಂದರು.
ಜನತೆ ದ್ವೇಷ ಮತ್ತು ಅಸೂಯೆಗಳನ್ನು ಹೊರಸೂಸಿದರೆ ಅವುಗಳು ಚಕ್ರಬಡ್ಡಿ ಸಮೇತ ಅವರಿಗೇ ಹಿಂತಿರುಗಲಿದ್ದು ಯಾವುದೇ ಶಕ್ತಿಯೂ ಅದನ್ನು ತಡೆಯಲಾರದು. ಜನತೆ ಅಧ್ಯಾತ್ಮಿಕರಾಗದೆ ಭಾರತದ ಪುನರುದ್ಧಾರ ಅಸಾಧ್ಯ. ಅದನ್ನು ಗಮನದಲ್ಲಿಟ್ಟುಕೊಂಡು ಭೋಗ ಪ್ರಧಾನವಾದ ಪಾಶ್ಚಾತ್ಯ ನಾಗರಿಕತೆಯನ್ನು ಬೆಂಬೆತ್ತಿದರೆ, ಅದರ ಪರಿಣಾಮ ಇನ್ನು ಮೂರೇ ಮೂರು ತಲೆಮಾರುಗಳಲ್ಲಿ ಜನಾಂಗ ನಾಶವಾಗುವುದರಲ್ಲಿ ಸಂಶಯವಿಲ್ಲ ಎಂದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಗರ ಪ್ರಮುಖ್ ಗುರುದತ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಕೆ ಕೆ ಪಿ ಸುದ್ದಿ 01:
ನಗರದ ವಿವೇಕಾನಂದ ನಗರ ಬಡಾವಣೆಯಲ್ಲಿ ಸ್ವಾಮಿ ವಿವೇಕಾನಂದರ 161 ನೇ ಜಯಂತಿ ಆಚರಣೆ ನಡೆಯಿತು
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.