ಮಧುಗಿರಿಯಲ್ಲಿ ಗೃಹ ಸಚಿವರಿಂದ ಪೂಜೆ

KannadaprabhaNewsNetwork |  
Published : Dec 31, 2025, 01:15 AM IST
ಮಧುಗಿರಿಯ ಶ್ರೀಲಕ್ಷ್ಮೀವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ನಡೆದ ವೈಕುಂಠ ಏಕಾದಶಿ ಪೂಜಾ ಕಂರ್ಯಗಳಲ್ಲಿ ರಾಜ್ಯದ  ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಮತ್ತು ಪತ್ನಿ ಕನ್ನಿಕಾ ಪರಮೇಶ್ವರ್ ಭಾಗವಹಿಸಿ ದೇವರ ಕೃಫೆಗೆ ಪಾತ್ರರಾದರು.  | Kannada Prabha

ಸಾರಾಂಶ

ಮಧುಗಿರಿಯ ಪುರಾಣ ಪ್ರಸಿದ್ಧ ಶ್ರೀಲಕ್ಷ್ಮೀವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ 28ನೇ ವರ್ಷದ ಅದ್ಧೂರಿ ವೈಕುಂಠ ಏಕಾದಶಿ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಸಡಗರ -ಸಂಭ್ರದಿಂದ ಮಂಗಳವಾರ ನೆರವೇರಿತು.

ಮಧುಗಿರಿ: ಇಲ್ಲಿನ ಪುರಾಣ ಪ್ರಸಿದ್ಧ ಶ್ರೀಲಕ್ಷ್ಮೀವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ 28ನೇ ವರ್ಷದ ಅದ್ಧೂರಿ ವೈಕುಂಠ ಏಕಾದಶಿ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಸಡಗರ -ಸಂಭ್ರದಿಂದ ಮಂಗಳವಾರ ನೆರವೇರಿತು. ಶ್ರೀಲಕ್ಷ್ಮೀವೆಂಕಟರಣಸ್ವಾಮಿ ದೇವರು, ಅಲುವೇಲು ಮಂಗಮ್ಮ ಹಾಗೂ ಪದ್ಮಾವತಿ ದೇವರುಗಳಿಗೆ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷವಾಗಿ ವಸ್ತ್ರಾಭರಣಗಳನ್ನು ತೊಡಿಸಿ ಹೂವಿನ ಅಲಂಕಾರ ಮಾಡಿದ್ದು ಭಕ್ತರನ್ನು ಸೆಳೆಯಿತು. ಈ ವೇಳೆ ಗೃಹ ಸಚಿವ ಡಾ.ಜಿ.ಪರಮೇಶ್ವರ್‌,ಎಂಎಲ್‌ಸಿ ಆರ್‌.ರಾಜೇಂದ್ರ, ಮಾಜಿ ಶಾಸಕ ಎಂ.ವಿ.ವೀರಭದ್ರಯ್ಯ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಎಸ್‌ಪಿ ಅಶೋಕ್‌, ಜಿಪಂ ಸಿಇಒ ಜಿ.ಪ್ರಭು, ಎಸಿ ಗೋಟೂರು ಶಿವಪ್ಪ, ತಹಸೀಲ್ದಾರ್ ಶ್ರೀನಿವಾಸ್, ಡಿವೈಎಸ್‌ಪಿ ಮಂಜುನಾಥ್‌, ಸಿಪಿಐ ಹನುಮಂತರಾಯಪ್ಪ, ನಿವೃತ್ತ ಐಎಎಸ್ ಅಧಿಕಾರಿ ಉಮಾಶಂಕರ್‌ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ
ಶೆಡ್‌ ತೆರವಿನ ಪ್ರಕರಣದಲ್ಲಿ ಪಾಕ್‌ ಹಸ್ತಕ್ಷೇಪಕ್ಕೆ ಕೈ ಕಿಡಿ