ರನ್ಯಾರಾವ್‌ ಗೆ ಗೃಹ ಸಚಿವರ ಉಡುಗೊರೆ ಕುರಿತು ಸ್ಪಷ್ಟಪಡಿಸಿ

KannadaprabhaNewsNetwork |  
Published : May 24, 2025, 01:33 AM ISTUpdated : May 24, 2025, 12:51 PM IST
KS Eshwarappa

ಸಾರಾಂಶ

  ನಟಿ ರನ್ಯಾರಾವ್ ಗೆ ಗೃಹ ಸಚಿವ ಜಿ.ಪರಮೇಶ್ವರ್ ಅವರು ಲಕ್ಷಾಂತರ ರು. ಬೆಲೆ ಬಾಳುವ ಉಡುಗೊರೆ ಕುರಿತು ಎದ್ದಿರುವ ಗೊಂದಲವನ್ನು ಡಿಕೆಶಿ ಮತ್ತು ಪರಮೇಶ್ವರ್‌ ಅವರುಗಳು ರಾಜ್ಯದ ಜನತೆಗೆ ಸ್ಪಷ್ಟಪಡಿಸಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದ್ದಾರೆ.

ಶಿವಮೊಗ್ಗ: ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಬಂಧಿತಳಾಗಿರುವ ನಟಿ ರನ್ಯಾರಾವ್ ಗೆ ಗೃಹ ಸಚಿವ ಜಿ.ಪರಮೇಶ್ವರ್ ಅವರು ಲಕ್ಷಾಂತರ ರು. ಬೆಲೆ ಬಾಳುವ ಉಡುಗೊರೆ ನೀಡಿದ್ದಾರೋ, ಇಲ್ಲವೋ ಎಂಬುದು ಗೊತ್ತಿಲ್ಲ. ಆದರೆ ಈ ಕುರಿತು ಎದ್ದಿರುವ ಗೊಂದಲವನ್ನು ಡಿಕೆಶಿ ಮತ್ತು ಪರಮೇಶ್ವರ್‌ ಅವರುಗಳು ರಾಜ್ಯದ ಜನತೆಗೆ ಸ್ಪಷ್ಟಪಡಿಸಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ರಾಜ್ಯ ಗೃಹ ಇಲಾಖೆಯನ್ನು ತಪ್ಪಿತಸ್ಥ ಸ್ಥಾನಕ್ಕೆ ತಂದು ನಿಲ್ಲಿಸಲಾಗಿದೆ. 40 ಲಕ್ಷ ರು. ನಷ್ಟು ಉಡುಗೊರೆಯನ್ನು ಜಿ.ಪರಮೇಶ್ವರ್ ಕೊಟ್ಟಿದ್ದಾರೆಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. 

ಇದು ಪರಮೇಶ್ವರ್ ಮತ್ತು ಡಿ.ಕೆ.ಶಿವಕುಮಾರ್ ಅವರುಗಳ ವೈಯುಕ್ತಿಕ ವಿಚಾರ ಅಲ್ಲ. ಗೃಹ ಸಚಿವರ ಮೇಲೆ ಬಂದಿರುವ ಆರೋಪ ಇದು. ಪರಮೇಶ್ವರ್ ಅವರು ಉಡುಗೊರೆ ಕೊಟ್ಟಿದ್ದಾರೋ, ಇಲ್ಲವೋ ರಾಜ್ಯದ ಜನತೆಗೆ ಗೊತ್ತಾಗಬೇಕು ಎಂದರು.ಗೃಹಸಚಿವರ ಮನೆಗೆ ಕಾಂಗ್ರೆಸ್ಸಿನ ಎಲ್ಲಾ ನಾಯಕರು ಹೋಗಿ ಬರುತ್ತಿದ್ದಾರೆ. ಗೃಹ ಇಲಾಖೆಯನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಿರುವುದು ರಾಜ್ಯದ ಜನತೆಗೂ ಬೇಜಾರಾಗಿದೆ. 

ಗೃಹ ಇಲಾಖೆಯ ಮೇಲೆಯೇ ರಾಜ್ಯದ ಜನರಿಗೆ ಅನುಮಾನ ಮೂಡುವಂತಾಗಿದೆ. ಇದಕ್ಕೆ ಅವಕಾಶ ಮಾಡಿಕೊಡದೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.ಗೃಹ ಸಚಿವರ ಮೇಲೆ ನಾನು ಯಾವುದೇ ನೇರ ಆರೋಪ ಮಾಡುತ್ತಿಲ್ಲ. ಪರಮೇಶ್ವರ್ ಹಾಗೂ ಡಿ.ಕೆ. ಶಿವಕುಮಾರ್ ನನ್ನ ಜೊತೆ ಸಹ ಕೆಲಸ ಮಾಡಿದ್ದಾರೆ. ಗೃಹ ಸಚಿವ ಜಿ.ಪರಮೇಶ್ವರ್ ಸಜ್ಜನ ರಾಜಕಾರಣಿ. ಅವರು ಗೃಹಮಂತ್ರಿ ಸ್ಥಾನವನ್ನು ಅತಂತ್ರ ಸ್ಥಾನಕ್ಕೆ ತರಬಾರದು. ತುಂಬಾ ಪವಿತ್ರವಾದ ಇಲಾಖೆ ಗೃಹ ಇಲಾಖೆ. 

ಡಿ.ಕೆ. ಶಿವಕುಮಾರ್, ಪರಮೇಶ್ವರ್ ಇಬ್ಬರು ನಾಯಕರು ವಾಸ್ತವ ಏನು ಎನ್ನುವುದನ್ನು ಇನ್ನಾದರೂ ರಾಜ್ಯದ ಜನತೆಗೆ ಸ್ಪಷ್ಟಪಡಿಸಬೇಕಿದೆ ಎಂದರು.ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಬಡ ಜನರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಔಷಧಿಗಳು ದೊರಕಬೇಕು ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಜನೌಷಧಿ ಕೇಂದ್ರವನ್ನು ಆರಂಭಿಸಿದೆ. ಒಂದು ವೇಳೆ ಜನೌಷಧಿ ಕೇಂದ್ರವನ್ನು ಮುಚ್ಚುವುದಕ್ಕೆ ಮುಂದಾದರೆ ಜನಾಂದೋಲನ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮುಖ್ಯಮಂತ್ರಿಗಳು ಈ ಬಗ್ಗೆ ಗಮನ ಹರಿಸಿ ಜನೌಷಧಿ ಕೇಂದ್ರಗಳನ್ನು ಮುಂದುವರಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕು. ಯಾವುದೇ ಕಾರಣಕ್ಕೂ ಜನೌಷಧಿ ಕೇಂದ್ರಗಳನ್ನು ಸ್ಥಗಿತಗೊಳಿಸಬಾರದು ಎಂದು ಒತ್ತಾಯಿಸಿದರು.

PREV
Read more Articles on

Recommended Stories

ಬೆಂಗಳೂರಿನ ಬಾರ್‌ಗಳಲ್ಲಿ ವೋಟ್‌ ಖರೀದಿ ಲೆಕ್ಕಾಚಾರ!!!
ಸಿಎಂಗೆ ಕಣ್ಣು ಪರೀಕ್ಷೆ ನಡೆಸಿ ಎರಡು ಕನ್ನಡಕ ಕೊಟ್ಟ ಶಾಸಕ ಶ್ರೀನಿವಾಸ್‌