ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಆಧುನಿಕ ಶೈಲಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಸಮುದಾಯ ಭವನಗಳ ಸದ್ಬಳಕೆಗೆ ಮುಂದಾಗಬೇಕು ಎಂದು ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಹೇಳಿದರು.ಪಟ್ಟಣದಲ್ಲಿ ನಗರಾಭಿವೃದ್ಧಿ ಮತ್ತು ವಿವಿಧ ಇಲಾಖೆಗಳ ಸುಮಾರು ₹ 2 ಕೋಟಿ ವೆಚ್ಚದ ಡಾ.ಬಿ.ಆರ್.ಅಂಬೇಡ್ಕರ್ ಭವನ, ₹ 50 ಲಕ್ಷ ವೆಚ್ಚದ ಸಿ.ಸಿ.ರಸ್ತೆ, ₹ 80 ಲಕ್ಷ ವೆಚ್ಚದ ಪೊಲೀಸ್ ಠಾಣೆ ನೂತನ ಕಟ್ಟಡ, ₹ 1 ಕೋಟಿ ವೆಚ್ಚದ ಪ್ರವಾಸಿ ಮಂದಿರದ ಕಟ್ಟಡ ಹಾಗೂ ಸುಮಾರು ₹ 67.63 ಲಕ್ಷ ವೆಚ್ಚದ ಜಿಡ್ಡಿ ಹಳ್ಳಕ್ಕೆ ಸೇತುವೆ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಎಲ್ಲರೂ ಸಹಕಾರದಿಂದ ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಬೇಕು. ಚುನಾವಣಾ ಪೂರ್ವದಲ್ಲಿ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ವಿರೋಧ ಪಕ್ಷದ ಶಾಸಕನಾಗಿ ಹಂತಹಂತವಾಗಿ ಅನುದಾನವನ್ನು ತಂದು ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನನ್ನದೇ ಆದ ಕನಸಿನ ಯೋಜನೆಗಳನ್ನು ಕಟ್ಟಿಕೊಂಡು ಶಾಸಕನಾಗಿದ್ದೇನೆ, ಪಟ್ಟಣದ ಅಭಿವೃದ್ಧಿಗೆ ಹೊಸ ಅಧ್ಯಾಯ ಪ್ರಾರಂಭವಾಗಿದೆ. ಸುಮಾರು ₹ 5 ಕೋಟಿಗೂ ಹೆಚ್ಚು ಅನುದಾನದ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಗಿದೆ.
ದಶಕಗಳ ಕಾಲ ಮತಕ್ಷೇತ್ರ ಸುತ್ತಿದ್ದೇನೆ, ಪ್ರತಿ ಗ್ರಾಮದ ಸಮಸ್ಯೆಗಳನ್ನು ಅರಿತಿದ್ದೇನೆ, ಕ್ಷೇತ್ರದ ಪ್ರತಿ ಗ್ರಾಮದಲ್ಲೂ ನನ್ನ ಕನಸಿನ ಯೋಜನೆಗಳನ್ನು ಕಾರ್ಯಗತಗೊಳಿಸುವ ಮೂಲಕ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಹೊಸ ಅಧ್ಯಾಯ ಪ್ರಾರಂಭವಾಗಿದೆ ಎಂದು ಹೇಳಿದರು.ಪಪಂ ಉಪಾಧ್ಯಕ್ಷ ರಮೇಶ ಮಸಿಬಿನಾಳ ಮಾತನಾಡಿ, ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಅಧ್ಯಕ್ಷರು ಸೇರಿದಂತೆ ಸರ್ವ ಸದಸ್ಯರು ಶಾಸಕರಿಗೆ ಸಹಕರಿಸುತ್ತೇವೆ. ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಬೇಡ, ಪಟ್ಟಣದ ಅಭಿವೃದ್ಧಿಗೆ ಪಕ್ಷಾತೀತವಾಗಿ ಎಲ್ಲರೂ ಕೈಜೋಡಿಸೋಣ. ರಾಜ್ಯ ಸರ್ಕಾರ ಅಭಿವೃದ್ಧಿ ವಿಷಯದಲ್ಲಿ ಮಲತಾಯಿ ಧೋರಣೆ ಮಾಡದೆ ನೂತನ ತಾಲೂಕುಗಳ ಅಭಿವೃದ್ಧಿಗೆ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ರಿಯಾಜ ಯಲಿಗಾರ, ತಾಲೂಕು ಅಧ್ಯಕ್ಷ ಸಾಯಿಬಣ್ಣ ಬಾಗೇವಾಡಿ ಮಾತನಾಡಿದರು. ಇದೇ ವೇಳೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಸಿದ್ದೇಶ್ವರ ಶಾಲೆಯ ವಿದ್ಯಾರ್ಥಿನಿ ನಂದಿತಾ ಸಿಂದಗಿ(615 ಅಂಕ)ರನ್ನು ಸನ್ಮಾನಿಸಲಾಯಿತು.ಪಪಂ ಅಧ್ಯಕ್ಷೆ ಜಯಶ್ರೀ ಬಸವರಾಜ ದೇವಣಗಾಂವ, ಮುಖ್ಯಾಧಿಕಾರಿ ಸುರೇಖಾ ಬಾಗಲಕೋಟ, ತಾಪಂ ಇಒ ಭಾರತಿ ಚಲುವಯ್ಯ, ಲ್ಯಾಂಡ್ ಆರ್ಮಿ ಎಇಇ ರಾಜಶೇಖರ, ಯೋಜನಾ ನಿರ್ದೇಶಕರು ಇಇ ವಿದ್ಯಾಧರ ನ್ಯಾಮಗೊಂಡ, ಪಿಡಬ್ಲ್ಯೂಡಿ ಅಧಿಕಾರಿ ಅರವಿಂದ್ ಬಿರಾದಾರ, ಮುಖಂಡರಾದ ಶೇಖರಗೌಡ ಪಾಟೀಲ, ಸಂಗನಗೌಡ ಪಾಟೀಲ, ಜಬ್ಬಾರ ಮೋಮಿನ್, ಭಾಸ್ಕರ್ ಗುಡಿಮನಿ, ಮುನ್ನಾ ಮಳಖೇಡ, ಗುರುರಾಜ ಆಕಳವಾಡಿ, ಚನ್ನವೀರಪ್ಪ ಕುದರಿ, ಎ.ಡಿ.ಮುಲ್ಲಾ, ಕಾಸು ವಡ್ಡೋಡಗಿ, ವೀರೇಶ್ ಕುದುರಿ, ಸುನಿಲ್ ಮಾಗಿ, ಮಡುಸೌಕಾರ ಬಿರಾದಾರ, ಶರಣು ಧರಿ, ಕಾಸುಗೌಡ ಬಿರಾದಾರ ಜಲಕತ್ತಿ, ಪ್ರಕಾಶ ಮಲ್ಹಾರಿ, ಗುತ್ತಿಗೆದಾರರಾದ ವ್ಹಿ.ಎಸ್.ನಾಡಗೌಡ, ರಮೇಶ ಬಿರಗೊಂಡ ಸೇರಿ ಹಲವರು ಇದ್ದರು.