ಗಂಗಾವತಿ: ರಾಜ್ಯದಲ್ಲಿ ನಡೆದಿರುವ ಹನಿಟ್ರ್ಯಾಪ್ ಪ್ರಕರಣ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯಲಿ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ಸ್ವತ ಗೃಹ ಸಚಿವರೆ ಸಂಖ್ಯೆ ಹೆಚ್ಚಾಗುವ ಬಗ್ಗೆ ಹೇಳಿಕೆ ನೀಡಿದ್ದಾರೆ ಎಂದ ಅವರು, ಈ ಪ್ರಕರಣದಲ್ಲಿ ಯಾರಿದ್ದಾರೆ ಎನ್ನುವುದು ರಾಜ್ಯದ ಜನರಿಗೆ ತಿಳಿದ ವಿಷಯವಾಗಿದೆ. ಕೂಡಲೇ ತನಿಖೆ ನಡೆಸಿ, ಈ ಪ್ರಕರಣದ ಹಿಂದೆ ಇರುವ ಸಚಿವರ ಹೆಸರು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ಶಾಸಕರನ್ನು ಅಮಾನತುಗೊಳಿಸಿರುವುದು ರಾಜಕೀಯ ಪ್ರೇರಿತವಾಗಿದೆ ಎಂದರು.ಸರ್ಕಾರ ಅನುದಾನ ನೀಡಿದರೆ ಆನೆಗೊಂದಿ ಉತ್ಸವ:
ಸರ್ಕಾರ ಅನುದಾನ ನೀಡಿದರೆ ಮಾತ್ರ ಆನೆಗೊಂದಿ ಉತ್ಸವ ಆಚರಿಸಲು ಸಾಧ್ಯವಾಗುತ್ತದೆ ಎಂದ ಅವರು, ಈಗಾಗಲೇ ಕಳೆದ ಬಾರಿಯ ಬಾಕಿ ಹಣ ₹5 ಕೋಟಿ ನೀಡುವಂತೆ ಸರ್ಕಾರಕ್ಕೆ ಕೋರಲಾಗಿದೆ. ಅಲ್ಲದೆ ಈ ಬಾರಿಯ ಉತ್ಸವಕ್ಕೂ ಅನುದಾನ ನೀಡುವಂತೆ ಕೋರಿದೆ. ಅನುದಾನ ನೀಡಿದರೆ ಮಾತ್ರ ಏಪ್ರಿಲ್ ಎರಡನೇ ವಾರದಲ್ಲಿ ಅದ್ಧೂರಿ ಉತ್ಸವ ನಡೆಸಲಾಗುತ್ತದೆ ಎಂದರು.ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಮೌಲಾಸಾಬ್ ಇದ್ದರು.