ಭಾಲ್ಕಿ: ಹಿರೇಮಠ ಸಂಸ್ಥಾನಕ್ಕೆ ಆಗಮಿಸಿದ ಬೆಂಗಳೂರು ಬಸವ ಸಮಿತಿ ಅಧ್ಯಕ್ಷರಾದ ಡಾ.ಅರವಿಂದ ಜತ್ತಿ ಹಾಗೂ ಶಾರದಾಬಾಯಿ ಜತ್ತಿ ದಂಪತಿಗಳಿಗೆ ಪೂಜ್ಯ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಸನ್ಮಾನಿಸಿ ಆಶೀರ್ವದಿಸಿದರು.
ಶರಣ ಸಾಹಿತ್ಯ ಕುರಿತು ಅನೇಕ ಭಾಷೆಗಳಲ್ಲಿ ನಿಯತಕಾಲಿಕೆ ಪ್ರಕಟಿಸುವ ಮೂಲಕ ಬಸವಪ್ರಜ್ಞೆ ಬೆಳೆಸುತ್ತಿದ್ದಾರೆ.
ಇವರ ಈ ಕಾರ್ಯ ಗುರುತಿಸಿ, ಧಾರವಾಡ ವಿಶ್ವವಿದ್ಯಾಲಯದಿಂದ ಹಾಗೂ ಶರಣಬಸವೇಶ್ವರ ವಿಶ್ವವಿದ್ಯಾಲಯದ ಕಲಬುರಗಿಯಿಂದ ಗೌರವ ಡಾಕ್ಟರೇಟ್ ಪದವಿ ನೀಡಿರುವುದು ನಮಗೆ ಅತ್ಯಂತ ಸಂತೋಷವನ್ನುಂಟು ಮಾಡಿದೆ ಎಂದು ಪೂಜ್ಯರು ನುಡಿದರು. ಪೂಜ್ಯ ಗುರುಬಸವ ಪಟ್ಟದ್ದೇವರು, ಡಾ.ಕಲ್ಯಾಣರಾವ ಪಾಟೀಲ, ಡಾ.ಶಿವರಾಜ ಶಾಸ್ತ್ರಿ ಹೆರೂರು, ಡಾ. ಲಕ್ಷ್ಮಿಕಾಂತ ಪಾಂಚಾಳ ಬಾಗಲಕೋಟ, ಸಿದ್ಧಯ್ಯ ಕಾವಡಿಮಠ ಬೀದರ ಉಪಸ್ಥಿತರಿದ್ದರು.