ಕನ್ನಡಪ್ರಭ ವಾರ್ತೆ ಮಂಗಳೂರು
ಯುವ ಕಲಾವಿದರಾದ ಅಂಕುಶ ನಾಯಕ್ ಅವರ ಸಿತಾರ್ ಹಾಗೂ ಕಾರ್ತಿಕ ಭಟ್ಟ ಅವರ ಕೊಳಲು ವಾದನ ಜುಗಲ್‌ಬಂದಿಗೆ ಹೇಮಂತ ಜೋಶಿ ಅವರ ತಬಲಾ ವಾದನ ಮನಸೂರೆಗೊಂಡಿತು. ನಂತರ ಪಂಡಿತ ವೆಂಕಟೇಶ ಕುಮಾರ ಧಾರವಾಡ ಅಧ್ಯಕ್ಷತೆಯಲ್ಲಿ ಓಂಕಾರ ಗುಲ್ವಾಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಗುಲ್ವಾಡಿ, ಇದೆಲ್ಲವೂ ಸಾಧನೆ ನನ್ನಿಂದ ಸಾಧ್ಯವಾಗಿದ್ದು ವಿದ್ಯಾ ಗುರು ಪಂಡಿತ್ ತಾರಾನಾಥ ಹಾಗೂ ಆಧ್ಯಾತ್ಮ ಗುರು ಪಂಡಿತ್ ಚಿದಾನಂದ ನಗರಕರ ಅವರಿಂದಾಗಿ ಎಂದರು.ಸಪ್ತಕದ ಜಿ.ಎಸ್. ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ವೆಂಕಟೇಶ ಕುಮಾರ್ ಅವರು ಓಂಕಾರ ಗುಲ್ವಾಡಿ ಅವರ ತಬಲಾ ನುಡಿಸಾಣಿಕೆಯ ವಿಶೇಷತೆಯನ್ನು ವಿಶ್ಲೇಷಿಸಿದರು. ಸ್ವತಂತ್ರ ತಬಲಾ ವಾದನದಲ್ಲಿಯೂ, ನೂರಾರು ವಿದ್ಯಾರ್ಥಿಗಳಿಗೆ ವಿದ್ಯಾ ದಾನ ಮಾಡುತ್ತಿರುವ ಗುರುವಾಗಿಯೂ ಗುಲ್ವಾಡಿ ಅವರು ಅಭಿನಂದನಾರ್ಹರು, ಅನುಕರಣೀಯರು ಎಂದು ಶ್ಲಾಘಿಸಿದರು.
ಪಂ. ವೆಂಕಟೇಶ ಕುಮಾರ್ ಅವರ ಗಾಯನಕ್ಕೆ ಪಂ. ಓಂಕಾರ ಗುಲ್ವಾಡಿ ಅವರ ತಬಲಾ ಹಾಗೂ
ಪಂ. ಸುಧೀರ ನಾಯಕ್ ಅವರ ಹಾರ್ಮೋನಿಯಂ ವಾದನ ಮನಸೂರೆಗೊಂಡಿತು. ಜೂನಿಯರ್ ಶಂಕರ್ ಇಂದ್ರಜಾಲ ಪ್ರವೀಣ ತೇಜಸ್ವಿ ಶಂಕರ್ ಕಾರ್ಯಕ್ರಮ ನಿರ್ವಹಿಸಿದರು.