ತೋಟಗಾರಿಕೆ ಇಲಾಖೆ ವಿವಿಧ ಯೋಜನೆಗಳಿಗೆ ರೈತರಿಂದ ಅರ್ಜಿ ಆಹ್ವಾನ

KannadaprabhaNewsNetwork |  
Published : Jun 03, 2025, 01:42 AM IST

ಸಾರಾಂಶ

ತರೀಕೆರೆ, ತೋಟಗಾರಿಕೆ ಇಲಾಖೆಯಿಂದ 2025-26ನೇ ಸಾಲಿನಲ್ಲಿ ಅನುಷ್ಠಾನಗೊಳ್ಳಲಿರುವ ಪ್ರಧಾನ ಮಂತ್ರಿ-ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಅಳವಡಿಸಿಕೊಳ್ಳಲು ಪರಿಶಿಷ್ಟ ಜಾತಿ, ಪಂಗಡ, ಮಹಿಳಾ ಹಾಗೂ ಎಲ್ಲಾ ವರ್ಗದ ಫಲಾನುಭವಿಗಳ ರೈತರಿಗೆ ಶೇ.90 ಸಹಾಯಧನ ನೀಡಲು ಅವಕಾಶವಿದ್ದು ಈ ಸಂಬಂಧ ರೈತಬಾಂಧವರು ಅನುಮೋದನೆಗೊಂಡಿರುವ ಕಂಪನಿಗಳ ಮಾಹಿತಿ ಪಡೆದು ನೋಂದಣಿ ಮಾಡಿಕೊಂಡು, ನೇರವಾಗಿ ನೋಂದಾಯಿತ ಕಂಪನಿ ಮೂಲಕ ಅಳವಡಿಸಿ ಕೊಳ್ಳಬೇಕೆಂದು ತರೀಕೆರೆ ತೋಟಗಾರಿಗೆ ಹಿರಿಯ ಸಹಾಯಕ ನಿರ್ದೇಶಕ ಕೆ.ಯತಿರಾಜ್ ಮಾಹಿತಿ ನೀಡಿದ್ದಾರೆ.

- ತರೀಕೆರೆ ತೋಟಗಾರಿಗೆ ಹಿರಿಯ ಸಹಾಯಕ ನಿರ್ದೇಶಕ ಕೆ.ಯತಿರಾಜ್ ಮಾಹಿತಿ

--

- ರೈತರಿಗೆ ಶೇ.90 ಸಹಾಯಧನ ನೀಡಲು ಅವಕಾಶ

- ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಪ್ರದೇಶಾಭಿವೃದ್ಧಿಗೆ ಒತ್ತು

- ಪಾಲಿಹೌಸ್ ನಿರ್ಮಾಣ, ಪ್ಲಾಸ್ಟಿಕ್ ಕ್ರೇಟ್ಸ್, ಹಣ್ಣು-ಹೂವು ಹೊದಿಕೆ ನಿರ್ಮಾಣ ಇತರೆ ಕಾರ್ಯ ಕ್ರಮಗಳಿಗೆ ಅರ್ಜಿ

- ಜೂ. 6ರ ರೊಳಗೆ ಅರ್ಜಿ ಸಮೇತ ಅಗತ್ಯ ದಾಖಲಾತಿ ಸಲ್ಲಿಸ

ಕನ್ನಡಪ್ರಭ ವಾರ್ತೆ, ತರೀಕೆರೆ

ತೋಟಗಾರಿಕೆ ಇಲಾಖೆಯಿಂದ 2025-26ನೇ ಸಾಲಿನಲ್ಲಿ ಅನುಷ್ಠಾನಗೊಳ್ಳಲಿರುವ ಪ್ರಧಾನ ಮಂತ್ರಿ-ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಅಳವಡಿಸಿಕೊಳ್ಳಲು ಪರಿಶಿಷ್ಟ ಜಾತಿ, ಪಂಗಡ, ಮಹಿಳಾ ಹಾಗೂ ಎಲ್ಲಾ ವರ್ಗದ ಫಲಾನುಭವಿಗಳ ರೈತರಿಗೆ ಶೇ.90 ಸಹಾಯಧನ ನೀಡಲು ಅವಕಾಶವಿದ್ದು ಈ ಸಂಬಂಧ ರೈತಬಾಂಧವರು ಅನುಮೋದನೆಗೊಂಡಿರುವ ಕಂಪನಿಗಳ ಮಾಹಿತಿ ಪಡೆದು ನೋಂದಣಿ ಮಾಡಿಕೊಂಡು, ನೇರವಾಗಿ ನೋಂದಾಯಿತ ಕಂಪನಿ ಮೂಲಕ ಅಳವಡಿಸಿ ಕೊಳ್ಳಬೇಕೆಂದು ತರೀಕೆರೆ ತೋಟಗಾರಿಗೆ ಹಿರಿಯ ಸಹಾಯಕ ನಿರ್ದೇಶಕ ಕೆ.ಯತಿರಾಜ್ ಮಾಹಿತಿ ನೀಡಿದ್ದಾರೆ. 07 ವರ್ಷದ ಹಿಂದೆ ಸಹಾಯಧನ ಪಡೆದಂತಹ ರೈತರು ಸಹ ಮತ್ತೊಮ್ಮೆ ಹನಿ ನೀರಾವರಿ ಹೊಸದಾಗಿ ಅಳವಡಿಸಿ ಕೊಳ್ಳಲು ಅವಕಾಶವಿದೆ. ರಾಜ್ಯದಲ್ಲಿ ತೋಟಗಾರಿಕೆಯಲ್ಲಿ ಉಪಯೋಗಿಸುವ ಯಂತ್ರೋಪಕರಣಗಳಿಗೆ ಸಹಾಯಧನ, ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಪ್ರದೇಶಾಭಿವೃದ್ಧಿ (ಅಂಗಾಂಶ ಕೃಷಿ ಬಾಳೆ, ತರಕಾರಿ, ಗೆಡ್ಡೆ ಹಾಗೂ ಬಿಡಿ ಹೂವು, ಕಾಳು ಮೆಣಸು, ಹಲಸು, ಬೆಣ್ಣೆ ಹಣ್ಣು ), ವೈಯಕ್ತಿಕ ಕೃಷಿಹೊಂಡ ನಿರ್ಮಾಣ, ಮಲ್ಚಿಂಗ್, ಸಮಗ್ರ ರೋಗ ಕೀಟ ನಿರ್ವಹಣೆ, ತೋಟಗಾರಿಕೆ ಉತ್ಪನ್ನಗಳನ್ನು ಒಣಗಿಸಲು ಸೋಲಾರ್ ಟನಲ್ ಡ್ರೈಯರ್, ಈರುಳ್ಳಿ ಶೇಖರಣಾ ಘಟಕ, ತರಕಾರಿ ಮಾರುವ ತಳ್ಳುವ ಗಾಡಿ, ಜೇನು ಕೃಷಿ, ಯಾಂತ್ರೀಕರಣ ಹಾಗೂ ರಾಷ್ಟ್ರೀಯ ಎಣ್ಣೆ ಕಾಳು ಮತ್ತು ಎಣ್ಣೆ ತಾಳೆ ಅಭಿಯಾನ ಯೋಜನೆಯಡಿ ತಾಳೆಬೆಳೆ ಬೆಳೆಯಲು ಉಚಿತವಾಗಿ ತಾಳೆ ಸಸಿ, ನಿರ್ವಹಣೆ ಸೇರಿರುತ್ತದೆ ಎಂದು ತಿಳಿಸಿದ್ದಾರೆ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಸುರಂಗ ಮಾದರಿ ಪಾಲಿಹೌಸ್ ನಿರ್ಮಾಣ, ಪುನೇಟ್ ಬಾಕ್ಸ್, ಪ್ಲಾಸ್ಟಿಕ್ ಕ್ರೇಟ್ಸ್, ಹಣ್ಣು-ಹೂವು ಹೊದಿಕೆ ಹಾಗೂ ಇತರೆ ಪರಿಕರಗಳಿಗೆ, ಮೋಹಕ ಕೀಟ ಬಲೆಗಳು, ಜಿಗುಟಾದ ಬಲೆಗಳು, ತೆಂಗು ಶೇಖರಣಾ ಘಟಕ, ಸೌರ ಶಕ್ತಿ ಆಧಾರಿತ ಕೃತಕ ಬುದ್ದಿಯ ಕೀಟ ನಿಯಂತ್ರಕ ಬಲೆಗಳು, ಸ್ಟ್ಯಾಂಡ್ ಅಲೋನ್ ಪಂಪುಗಳ ಸ್ಥಾಪನೆ, ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಹಾಗೂ ಇತರೆ ಸಹಾಯಧನ ನೀಡಲಾಗುವುದು. ಇತರೆ ಕಾರ್ಯ ಕ್ರಮಗಳಿಗೆ ಅರ್ಜಿ ಆಹ್ವಾನಿಸಿದೆ ಎಂದು ತಿಳಿಸಿದ್ದಾರೆ.ಆಸಕ್ತ ರೈತರು ಜೂನ್ 6ರ ರೊಳಗೆ ಅರ್ಜಿ ಸಮೇತ ಅಗತ್ಯ ದಾಖಲಾತಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಲ್ಲಾ ಪಂಚಾಯತ್) ತರೀಕೆರೆ ಕಛೇರಿ ಅಥವಾ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಿ ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕೆಂದು ಕೋರಿದ್ದಾರೆ.ಒದಗಿಸಬೇಕಾದ ದಾಖಲಾತಿಗಳು: ಕಚೇರಿಯಿಂದ ಪಡೆದ ಅರ್ಜಿ ನಮೂನೆ, ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಪ್ರತಿ, ಆರ್.ಡಿ. ಸಂಖ್ಯೆ ಜಾತಿ ಪ್ರಮಾಣ ಪತ್ರದ ಪ್ರತಿ (ಎಸ್.ಸಿ.-ಎಸ್.ಟಿ. ಫಲಾನುಭವಿಗಳಿಗೆ ಮಾತ್ರ) ಹಾಗೂ ಇತರೆ ದಾಖಲೆಗಳನ್ನು ಸಲ್ಲಿಸುವುದು.

ಎಫ್.ಐ.ಡಿ. ಹೊಂದಿರುವ ರೈತರು ಮೇಲೆ ತಿಳಿಸಿರುವ ದಾಖಲೆಗಳನ್ನು ಸಲ್ಲಿಸದೆ ಅರ್ಜಿಯಲ್ಲಿ ಎಲ್ಲಾ ವಿವರಗಳನ್ನು ನಮೂದಿಸಿ ಸಲ್ಲಿಸಬಹುದಾಗಿರುತ್ತದೆ ಎಂದು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಧಾರಸಹಿತ ಇತಿಹಾಸಕಾರರನ್ನು ಪರಿಚಯಿಸಿ
ಬಿಜೆಪಿಯವರಿಗೆ ದ್ವೇಷ ಭಾಷಣ ಬೇಕಾ?: ಪದ್ಮರಾಜ್‌ ಪ್ರಶ್ನೆ