ಹೊಸಪೇಟೆ ನಗರಸಭೆಯನ್ನು ಕಾರ್ಪೋರೇಷನ್ ಆಗಿ ಮೇಲ್ದರ್ಜೆಗೆ ಏರಿಸಲು ಪ್ರಸ್ತಾಪಿಸುವೆ

KannadaprabhaNewsNetwork |  
Published : Feb 20, 2026, 02:45 AM IST
ಹೊಸಪೇಟೆಯಲ್ಲಿ ಪೌರಾಡಳಿತ ಸಚಿವ ರಹೀಂ ಖಾನ್ ಅವರು ಇಂದಿರಾ ಕ್ಯಾಟೀನ್ ನಲ್ಲಿ ಅನ್ನ, ಸಾಂಬಾರ, ಮೊಸರು ಸೇವಿಸಿದರು. | Kannada Prabha

ಸಾರಾಂಶ

ಹೊಸಪೇಟೆ ನಗರಸಭೆಯನ್ನು ಕಾರ್ಪೊರೇಷನ್ ಮಾಡಿದರೆ ನಾಲ್ಕು ನೂರು ಕಾರ್ಮಿಕರನ್ನು ಬೇಕಾಗುತ್ತದೆ.

ಹೊಸಪೇಟೆ: ಇಲ್ಲಿನ ಹೊಸಪೇಟೆ ನಗರಸಭೆಯನ್ನು ಕಾರ್ಪೋರೇಷನ್ ಮಾಡಿ ಅಂತ ಸ್ಥಳೀಯ ಶಾಸಕ ಎಚ್.ಆರ್. ಗವಿಯಪ್ಪ ಸಾಕಷ್ಟು ಬಾರಿ ಮನವಿ ನೀಡಿದ್ದಾರೆ. ಮುಂದಿನ ಕ್ಯಾಬಿನೆಟ್ ನಲ್ಲಿ ಇದರ ಬಗ್ಗೆ ಪ್ರಸ್ತಾಪ ಮಾಡುತ್ತೇವೆ ಎಂದು ಪೌರಾಡಳಿತ ಸಚಿವ ರಹೀಂ ಖಾನ್ ಹೇಳಿದರು.

ನಗರದಲ್ಲಿ ಇಲಾಖೆ ಪ್ರಗತಿ ಪರಿಶೀಲನೆ ಸಭೆ ಬಳಿಕ ನಗರದ ಇಂದಿರಾ ಕ್ಯಾಂಟಿನ್ ಗೆ ಭೇಟಿ ನೀಡಿ ಅವರು ಮಾತನಾಡಿದರು.

ಹೊಸಪೇಟೆ ನಗರಸಭೆಯನ್ನು ಕಾರ್ಪೊರೇಷನ್ ಮಾಡಿದರೆ ನಾಲ್ಕು ನೂರು ಕಾರ್ಮಿಕರನ್ನು ಬೇಕಾಗುತ್ತದೆ. ನೂರು ಕೋಟಿ ಹಣ ಫಿಕ್ಸ್ ಮಾಡಬೇಕು. ಕಾರ್ಪೊರೇಷನ್ ಆದ ಮೇಲೆ ಎಲ್ಲವೂ ಸರಿ ಆಗುತ್ತೆ ಎಂದರು.

ಹಂಪಿ ಅಭಿವೃದ್ಧಿಗೆ ಬಜೆಟ್‌ನಲ್ಲಿ ಹಣ ಬಿಡುಗಡೆ ವಿಚಾರವಾಗಿ ಹಂಪಿ ಅಭಿವೃದ್ಧಿಗೆ ಅನುದಾನ ಬಗ್ಗೆ ಸಭೆ ಮಾಡುತ್ತೇನೆ. ಹಂಪಿ ಅಭಿವೃದ್ಧಿಗೆ ಏನು ಬೇಕು ಅನ್ನುವುದರ ಬಗ್ಗೆ ಮಾಹಿತಿ ಪಡೆದುಕೊಂಡು ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡುತ್ತೇನೆ ಎಂದರು.

ನಮ್ಮ ಇಲಾಖೆಯಿಂದ ಇಂದಿರಾ ಕ್ಯಾಂಟಿನ್ ಇಲ್ಲಿ ಆರಂಭವಾಗಿದೆ. ಇಂದಿರಾ ಕ್ಯಾಂಟಿನ್ ನಲ್ಲಿ ಕುಡಿಯುವ ನೀರು ಸೇರಿದಂತೆ ಯಾವುದೇ ಸಮಸ್ಯೆ ಆಗದಂತೆ ಇಲಾಖೆಯ ಸ್ಕೀಮ್ ಗಳು ಬಳಿಸಿಕೊಂಡು ಕೆಲಸ ಮಾಡುತ್ತೇವೆ ಎಂದರು.

ಇಂದಿರಾ ಕ್ಯಾಂಟನ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸಚಿವ ರಹೀಂ ಖಾನ್ ಅವರು ಇಂದಿರಾ ಕ್ಯಾಟೀನ್ ನಲ್ಲಿ ಅನ್ನ, ಸಾಂಬಾರ, ಮೊಸರು ಸೇವಿಸಿದರು. ಸ್ಥಳೀಯ ಶಾಸಕ ಎಚ್. ಆರ್. ಗವಿಯಪ್ಪ ಮತ್ತು ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.

ಹೊಸಪೇಟೆಯಲ್ಲಿ ಪೌರಾಡಳಿತ ಸಚಿವ ರಹೀಂ ಖಾನ್ ಅವರು ಇಂದಿರಾ ಕ್ಯಾಟೀನ್ ನಲ್ಲಿ ಅನ್ನ, ಸಾಂಬಾರ, ಮೊಸರು ಸೇವಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ಬಸ್‌ ನಿಲ್ದಾಣ ನಡುವೆ ಸಂಪರ್ಕ ಸಮಸ್ಯೆ
ಖಾಸಗಿ ಶಾಲಾ- ಕಾಲೇಜುಗಳಲ್ಲಿ ಡೊನೇಷನ್‌ ಹಾವಳಿ ತಡೆಗೆ ಒತ್ತಾಯ