ನ್ಯಾಮತಿ: ತಾಲೂಕಿನ ವಿವಿಧೆಡೆಗಳಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ವಿವಿಧೆಡೆ ಮನೆಗಳ ಗೋಡೆಗಳು ಕುಸಿತಗೊಂಡಿವೆ. ಕೆಲವೆಡೆ ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ಅದೃಷ್ಟವಶಾತ್, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಸುರಹೊನ್ನೆ ಗ್ರಾಮದಲ್ಲಿ 2, ಬಿದರಹಳ್ಳಿ ಗ್ರಾಮದಲ್ಲಿ 1 ಮನೆ, ಒಡೆಯರ ಹತ್ತೂರು ಗ್ರಾಮದಲ್ಲಿ 1 ಮನೆ, ಯರಗನಾಳ್ ಗ್ರಾಮದಲ್ಲಿ 1 ಮನೆ, ದೊಡ್ಡೇರಿ ಗ್ರಾಮದಲ್ಲಿ 2 ಮನೆಗಳಿಗೆ ಹಾನಿಯಾಗಿದೆ. ನಿರಂತರ ಮಳೆ-ಗಾಳಿಗೆ ಮರಗಳು ಸೇರಿದಂತೆ ವಿದ್ಯುತ್ ಕಂಬಗಳು ಧರೆಶಾಯಿಯಾಗಿವೆ. ಕೋಡಿಕೊಪ್ಪ ಬಳಿಯ ಎಚ್‌ಟಿ ಪೋಲ್ 2, ಕಂಚುಗಾರನಹಳ್ಳಿ 2, ಕೊಗನಹಳ್ಳಿ 4, ಸಾಲಬಾಳ ಹಳ್ಳದ ಬಳಿ ವಿದ್ಯುತ್ ಪರಿವರ್ತಕಗಳು ಕುಸಿದು, ಹಾನಿಗೀಡಾಗಿವೆ.
ಧಾರಾಕಾರ ಮಳೆಯಿಂದ ಹಾನಿ ಸಂಭವಿಸಿದ ಸ್ಥಳಕ್ಕೆ ಕಂದಾಯ ಅಧಿಕಾರಿಗಳು, ಬೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.- - - (-ಫೋಟೋ):