- ವಿವಿಧ ಜಿಲ್ಲೆ ವಿದ್ಯಾರ್ಥಿಗಳ ನೋಂದಣಿ: ಡೀನ್- - - ದಾವಣಗೆರೆ: ನಗರದ ಜಿ.ಎಂ. ವಿಶ್ವವಿದ್ಯಾಲಯದ ಎಂಬಿಎ ವಿಭಾಗದಿಂದ 3 ದಿನಗಳ ಎಂಬಿಎ ಕ್ರ್ಯಾಶ್ ಕೋರ್ಸ್ ಉಚಿತ ತರಬೇತಿ ಕಾರ್ಯಕ್ರಮ ಜುಲೈ 23ರಿಂದ 25ರವರೆಗೆ ಹಮ್ಮಿಕೊಳ್ಳಲಾಗಿದೆ.
ಮೂರು ದಿನದ ತರಬೇತಿ ಕಾರ್ಯಕ್ರಮಕ್ಕೆ ಶೈಕ್ಷಣಿಕ ತಜ್ಞರು ಆಗಮಿಸಿ, ಪಿಜಿ-ಸಿಇಟಿ ಪ್ರವೇಶ ಪರೀಕ್ಷೆಗೆ ವಿದ್ಯಾರ್ಥಿಗಳಲ್ಲಿ ಬೇಕಾದ ನೈಪುಣ್ಯತೆ ತಿಳಿಸಿಕೊಡಲಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ತರಬೇತಿಗೆ ನೋಂದಣಿ ಮಾಡಿಕೊಂಡು ಲಾಭ ಪಡೆಯಬೇಕು. ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯ ಮತ್ತು ಜಿ.ಎಂ. ವಿಶ್ವವಿದ್ಯಾಲಯ ಎರಡರಲ್ಲೂ ಎಂಬಿಎ ವಿಭಾಗವಿದೆ. ಹೆಚ್ಚಿನ ಮಾಹಿತಿಗೆ ಮೊ:94487 15326, 85536 54836, 89712 71712 ಸಂಪರ್ಕಿಸುವಂತೆ ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಡಾ.ಶ್ರೀಶೈಲ ವಿಜಯಪುರ, ಟಿ.ಆರ್.ತೇಜಸ್ವಿ ಕಟ್ಟಿಮನಿ ಇದ್ದರು.- - - -20ಕೆಡಿವಿಜಿ35ಃ: