ಶಿವಾನಂದ ಗೊಂಬಿ
ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದಿಂದ ಹಂಚಿಕೆಯಾದ ನಿವೇಶನಗಳಿಗೆ ಮಾಲೀಕರು ಇಲ್ಲದೆ ಇರುವುದನ್ನು ಪತ್ತೆ ಹಚ್ಚಿ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುವುದನ್ನು ತಡೆಯಲು ಸಮೀಕ್ಷೆ ನಡೆಸಲು ಹುಡಾ ಮುಂದಾಗಿದೆ.
ಹುಡಾದಿಂದ 20-30 ವರ್ಷಗಳ ಹಿಂದೆ ಮಹಾನಗರದಲ್ಲಿ ನಿರ್ಮಿಸಿರುವ ಲೇಔಟ್‌ಗಳ ನಿವೇಶನಗಳ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದ್ದುಂಟು. ಈ ನಿಟ್ಟಿನಲ್ಲಿ ಅಧಿಕಾರಿಯೊಬ್ಬರ ವಿರುದ್ಧ ಕ್ರಮವೂ ಆಗಿದೆ. ಆದರೆ ಅಷ್ಟಕ್ಕೆ ಅದು ಸ್ಥಗಿತಗೊಂಡಿದೆ.ಏನಾಗುತ್ತಿದೆ?
ಇಂತಹ ವಾರಸುದಾರರಿಗೆ ತಿಳಿಯದೇ ಇರುವ ನಿವೇಶನ ಪತ್ತೆ ಹಚ್ಚಿ ತಾವೇ ವಾರಸುದಾರರು ಎಂಬಂತೆ ನಕಲಿ ದಾಖಲೆ ಸೃಷ್ಟಿಸಲಾಗುತ್ತಿದೆ. ಬಳಿಕ ಆ ನಿವೇಶನವನ್ನು ತಮ್ಮಲ್ಲಿಯೇ ಒಬ್ಬರ ಹೆಸರಿನಲ್ಲಿ ಖರೀದಿಸಿ ನೋಂದಣಿ ಮಾಡಿಸಿ, ಮತ್ತೊಬ್ಬರಿಗೆ ಮಾರಾಟ ಮಾಡಲಾಗುತ್ತಿದೆ. ಇಂತಹ ವ್ಯವಸ್ಥಿತ ಜಾಲಕ್ಕೆ ಹುಡಾ ಸಿಬ್ಬಂದಿಯೇ ಸಾಥ್ ನೀಡಿದ್ದು ಬಹಿರಂಗಗೊಂಡಿದೆ. ಆ ಸಿಬ್ಬಂದಿ ವಿರುದ್ಧ ಕ್ರಮವೂ ಆಗಿದೆ.
ನಕಲಿ ದಾಖಲೆ ಸೃಷ್ಟಿಸಿ ನಿವೇಶನ ಮಾರಾಟ ಮಾಡುತ್ತಿರುವ ಕುರಿತು ಇತ್ತೀಚಿಗೆ ಮಾಜಿ ಸೈನಿಕರೊಬ್ಬರು ಬಯಲಿಗೆ ತಂದಿದ್ದರು. ಈ ಬಗ್ಗೆ ತನಿಖೆ ನಡೆಸಿದಾಗ ಸರಿಸುಮಾರು 150-200ಕ್ಕೂ ಅಧಿಕ ಸೈಟುಗಳು ಈ ರೀತಿ ಮಾಡಿರುವುದು ಬೆಳಕಿಗೆ ಬಂದಿತು. ಬಳಿಕ ಆ ಸಿಬ್ಬಂದಿಯನ್ನು ಅಮಾನತು ಮಾಡಲಾಗಿತ್ತು. ಆದರೆ ಆ ಸಿಬ್ಬಂದಿಯೊಬ್ಬರದೇ ತಪ್ಪಲ್ಲ. ಅದಕ್ಕೆ ಹೊರಗಿನ ಕೆಲ ಕಾಣದ ಕೈಗಳು ಕೆಲಸ ಮಾಡಿದ್ದುಂಟು. ಆದರೆ ಅವರ ಮೇಲೆ ಯಾವುದೇ ಕ್ರಮವಾಗಿಲ್ಲ. ಜತೆಗೆ ಇನ್ನಷ್ಟು ಸಿಬ್ಬಂದಿಯೂ ಇದೆ ಎಂಬ ಆರೋಪವೂ ಕೇಳಿ ಬಂದಿದ್ದುಂಟು. ಆ ಬಗ್ಗೆ ಯಾವುದೇ ಕ್ರಮಗಳಾಗುತ್ತಿಲ್ಲ ಎಂಬ
ಆಗ ವಾರಸುದಾರರು ಇಲ್ಲದ ಸುಮಾರು 150ರಿಂದ 200ಕ್ಕೂ ಅಧಿಕ ನಿವೇಶನಗಳನ್ನೂ ನಕಲಿ ದಾಖಲೆ ಸೃಷ್ಟಿಸಿ ಮರು ಮಾರಾಟ ಮಾಡಲಾಗಿತ್ತು ಎಂದು ಹೇಳಲಾಗಿತ್ತು. ಹಾಗಾದರೆ ವಾರಸುದಾರರು ಇಲ್ಲದ ಎಷ್ಟು ನಿವೇಶನಗಳು ಇನ್ನು ಹುಡಾ ಬಳಿ ಇವೆ ಎಂಬ ಬಗ್ಗೆ ಸಮೀಕ್ಷೆ ನಡೆಸಬೇಕು. ಜತೆಗೆ ಮೂಲಮಾಲೀಕರ ವಾರಸುದಾರರು ಇದ್ದಲ್ಲಿ ಅವರಿಗೆ ಈ ಸೈಟು ನೀಡುವ ಪ್ರಕ್ರಿಯೆ ಆಗಬೇಕು. ಶುದ್ಧ ಕ್ರಿಯಾಪತ್ರ ನೀಡುವ ಬಗ್ಗೆ ಹುಡಾ ಯೋಚನೆ ಮಾಡಬೇಕು ಎಂಬುದು ಪ್ರಜ್ಞಾವಂತರ ಆಗ್ರಹ.
ರಾಬರ್ಟ್ ದದ್ದಾಪುರಿ, ಅಧ್ಯಕ್ಷ, ಹುಡಾವಾರಸುದಾರರು ಇಲ್ಲದ ಸೈಟ್‌ಗಳ ನಕಲಿ ದಾಖಲೆ ಸೃಷ್ಟಿಸಿ ಮರುಮಾರಾಟ ಮಾಡಿದ ಪ್ರಕರಣ ಬೆಳಕಿಗೆ ಬಂದಿತು. ಈ ಸಂಬಂಧ ದೂರು ಕೂಡ ದಾಖಲಿಸಲಾಗಿತ್ತು. ಕ್ರಮಕೈಗೊಳ್ಳಬೇಕು ಎನ್ನುವಷ್ಟರಲ್ಲೇ ನಮ್ಮ ಅಧಿಕಾರವಧಿ ಮುಕ್ತಾಯಗೊಂಡಿತು. ಹಿಂದಿನ ಲೇಔಟ್‌ಗಳ ಶುದ್ಧ ಕ್ರಯಪತ್ರ ಮಾಡಿ ಕೊಡುವುದು ಉತ್ತಮ.