ಕೌಶಲ್ಯ ಅಭಿವೃದ್ಧಿ, ಸ್ವಚ್ಛ, ಸುಂದರ, ಸುರಕ್ಷಿತ ಪಾದಚಾರಿ ಮಾರ್ಗ ಎಂಬ ಆಶಯದಡಿ ನಡೆದ ಈ ಅಭಿಯಾನದಲ್ಲಿ ವಿದ್ಯಾರ್ಥಿಗಳು ಅಂಗಡಿಕಾರರು, ಪಾದಚಾರಿಗಳು ಹಾಗೂ ಸ್ಥಳೀಯ ನಿವಾಸಿಗಳೊಂದಿಗೆ ಸಂವಾದ ನಡೆಸಿ, ಫುಟ್‌ಪಾತ್‌ಗಳಲ್ಲಿ ಕಂಡುಬಂದ ಅಡೆತಡೆ ಗುರುತಿಸಿ ಛಾಯಾಚಿತ್ರಗಳ ಮೂಲಕ ದಾಖಲಿಸಿದರು.
ಹುಬ್ಬಳ್ಳಿ:
ಪಾದಚಾರಿಗಳ ಸುರಕ್ಷತೆ ಹಾಗೂ ಫುಟ್‌ಪಾತ್‌ಗಳ ಜವಾಬ್ದಾರಿಯುತ ಬಳಕೆಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಇಲ್ಲಿಯ ಸಿದ್ದೇಶ್ವರ ಪಾರ್ಕ್‌ನಲ್ಲಿರುವ ಸೆಂಟ್ ಅಂಥೋನಿ ಪಬ್ಲಿಕ್ ಶಾಲೆಯ 9ನೇ ತರಗತಿ ವಿದ್ಯಾರ್ಥಿಗಳು ಮಂಗಳವಾರ ''''''''ವಾಕ್ ಸೇಫ್ ಶಿರೂರಪಾರ್ಕ್, ನನ್ನ ಫುಟ್‌ಪಾತ್ ನನ್ನ ಜವಾಬ್ದಾರಿ ಎಂಬ ವಿಶಿಷ್ಟ ಅಭಿಯಾನ ನಡೆಸಿದರು.ಕೌಶಲ್ಯ ಅಭಿವೃದ್ಧಿ, ಸ್ವಚ್ಛ, ಸುಂದರ, ಸುರಕ್ಷಿತ ಪಾದಚಾರಿ ಮಾರ್ಗ ಎಂಬ ಆಶಯದಡಿ ನಡೆದ ಈ ಅಭಿಯಾನದಲ್ಲಿ ವಿದ್ಯಾರ್ಥಿಗಳು ಅಂಗಡಿಕಾರರು, ಪಾದಚಾರಿಗಳು ಹಾಗೂ ಸ್ಥಳೀಯ ನಿವಾಸಿಗಳೊಂದಿಗೆ ಸಂವಾದ ನಡೆಸಿ, ಫುಟ್‌ಪಾತ್‌ಗಳಲ್ಲಿ ಕಂಡುಬಂದ ಅಡೆತಡೆ ಗುರುತಿಸಿ ಛಾಯಾಚಿತ್ರಗಳ ಮೂಲಕ ದಾಖಲಿಸಿದರು. ಸಾರ್ವಜನಿಕರ ಅಭಿಪ್ರಾಯ ಹಾಗೂ ಸಲಹೆಗಳನ್ನು ಪಡೆಯಲು ಕ್ಯೂ ಆರ್ ಕೋಡ್ (ಪ್ರತಿಕ್ರಿಯೆ ಸ್ಕ್ಯಾನರ್) ಅಳವಡಿಸಲಾತು.
ವಿದ್ಯಾನಗರ ಪೊಲೀಸ್ ಠಾಣೆಯ ಪಿಎಸ್‌ಐ ಸುನಿಲ್ ಎಂ. ಹಾಗೂ ಹಿರಿಯ ವೈದ್ಯರಾದ ಡಾ. ಮಹಾಂತೇಶ ಸಜ್ಜನರ, ಟ್ರಾಫಿಕ್ ಪೊಲೀಸ್ ಠಾಣೆಯ ಪಿಎಸ್‌ಐ ಮೋಹನ್ ಜೆ. ಅವರು ಅಭಿಯಾನಕ್ಕೆ ಚಾಲನೆ ನೀಡಿದರು.ವಿದ್ಯಾರ್ಥಿಗಳೊಂದಿಗೆ ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿ ಸ್ಥಳದಲ್ಲೇ ಉಪಸ್ಥಿತರಿದ್ದು ಅಗತ್ಯ ಮಾರ್ಗದರ್ಶನ ಮತ್ತು ಮೇಲ್ವಿಚಾರಣೆ ನೀಡಿದರು. ಈ ಸಂದರ್ಭದಲ್ಲಿ ಕಾಟನ್ ಮಾರ್ಕೆಟ್ ಟ್ರಾಫಿಕ್ ಪೊಲೀಸ್ ಠಾಣೆಯ ಪಿಎಸ್‌ಐ ಮೋಹನ್ ಜೆ. ನೇತೃತ್ವದ ಟ್ರಾಫಿಕ್ ಪೊಲೀಸ್ ತಂಡವೂ ವಿದ್ಯಾರ್ಥಿಗಳೊಂದಿಗೆ ಕೈಜೋಡಿಸಿ ಪಾದಚಾರಿ ಸುರಕ್ಷತೆ ಕುರಿತು ಮಾರ್ಗದರ್ಶನ ನೀಡಿತು.
ಈ ಅಭಿಯಾನದ ಮೂಲಕ ವಿದ್ಯಾರ್ಥಿಗಳು ಸಂವಹನ, ಅವಲೋಕನ, ಸಮಸ್ಯೆ ಪರಿಹಾರ, ತಂಡದ ಕಾರ್ಯ, ನಾಯಕತ್ವ ಹಾಗೂ ಸಾಮಾಜಿಕ ಜವಾಬ್ದಾರಿ ಮುಂತಾದ ಜವಾಬ್ದಾರಿ, ಕರ್ತವ್ಯಗಳನ್ನು ನೈಜ ಅನುಭವದ ಮೂಲಕ ಬೆಳೆಸಿಕೊಂಡರು.ಈ ಯೋಜನೆಗೆ ಶಾಲೆಯ ಅಧ್ಯಕ್ಷ ಡಾ. ಕೆ.ಎ. ಪ್ರಸಾದ ಹಾಗೂ ಅಕಾಡೆಮಿಕ್ ಹೆಡ್ ಶ್ರೇಯಾ ಕಿರಣ್ ಅವರ ಮಾರ್ಗದರ್ಶನ ಮತ್ತು ಪ್ರೋತ್ಸಾಹ ದೊರೆಯಿತು.