ಹರಪನಹಳ್ಳಿ: ಪಟ್ಟಣದ ಎಡಿಬಿ ಕಾಲೇಜಿನ ಆವರಣದಲ್ಲಿ ಮಾಜಿ ಶಾಸಕ ಎಂ.ಪಿ. ರವೀಂದ್ರ ಅವರ ಜನ್ಮದಿನದ ಅಂಗವಾಗಿ ಸಂತೋಷ ಲಾಡ್ ಫೌಂಡೇಷನ್ ಹಾಗೂ ಎಂ.ಪಿ. ರವೀಂದ್ರ ಪ್ರತಿಷ್ಠಾನ ವತಿಯಿಂದ ಶನಿವಾರ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿತ್ತು.
ಮೇಳ ಉದ್ಘಾಟಿಸಿ ಮಾತನಾಡಿದ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ, ನಿರುದ್ಯೋಗ ಯುವಕ-ಯುವತಿಯರು ಸ್ಥಳೀಯವಾಗಿ ಅಯೋಜಿಸಿರುವ ಬೃಹತ್ ಉದ್ಯೋಗ ಮೇಳದ ಸದುಪಯೋಗ ಪಡೆದುಕೊಳ್ಳಿ ಎಂದು ಕೋರಿದರು.ಸಹೋದರ ಎಂ.ಪಿ. ರವೀಂದ್ರ ಅವರು ಹಲವು ಸಮಾಜಮುಖಿ ಕಾರ್ಯಗಳ ಜತೆಗೆ ಶಿಕ್ಷಣ, ಉದ್ಯೋಗಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದರು. ಅನೇಕ ಬಡ ಮಕ್ಕಳಿಗೆ ಶಿಕ್ಷಣ ಉದ್ಯೋಗ ಕೊಡಿಸಿದ್ದಾರೆ. ಅವರ ಸವಿನೆನಪಿಗಾಗಿ ಈ ಬೃಹತ್ ಉದ್ಯೋಗ ಮೇಳ ಹಮ್ಮಿಕೊಂಡಿದ್ದೇವೆ ಎಂದರು.
ಸಂತೋಷ ಲಾಡ್ ಫೌಂಡೇಷನ್‌ನ ಎಚ್.ಆರ್. ಸಾದಿಕ್ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಫೌಂಡೇಷನ್ ರಾಜ್ಯದ ವಿವಿಧ ಭಾಗದಲ್ಲಿ ಉದ್ಯೋಗ ಮೇಳ ನಡೆಸಿದ್ದು, ಅನೇಕ ಯುವಕ-ಯುವತಿಯರು ಭಾಗವಹಿಸಿ ಉದ್ಯೋಗ ಕಲ್ಪಿಸಿಕೊಂಡಿದ್ದಾರೆ ಎಂದರು.40ಕ್ಕೂ ಹೆಚ್ಚು ಕಂಪನಿಗಳು ಆಗಮಿಸಿದ್ದು, 400ಕ್ಕೂ ಹೆಚ್ಚು ನಿರುದ್ಯೋಗಿಗಳು ನೋಂದಣಿ ಮಾಡಿಸಿದ್ದರು.
ಎಂ.ಪಿ. ರವೀಂದ್ರ ಪ್ರತಿಷ್ಠಾನದ ಅಧ್ಯಕ್ಷ ಗೌತಮಪ್ರಭು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ಚಿಗಟೇರಿ ಬ್ಲಾಕ್ ಅಧ್ಯಕ್ಷ ಕುಬೇರಗೌಡ, ಪುರಸಭೆ ಅಧ್ಯಕ್ಷೆ ಫಾತೀಮಾಬಿ, ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ತಹಸೀಲ್ದಾರ್ ಬಿ.ವಿ. ಗಿರೀಶಬಾಬು, ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಅಶೋಕ ಬಿ. ನಾಯ್ಕ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಟಿ. ವೆಂಕಟೇಶ್, ಸದಸ್ಯರಾದ ಲಾಟಿ ದಾದಪೀರ, ಉದ್ಧಾರ ಗಣೇಶ, ಜಾಕೀರ್, ಕಂಚಿಕೇರಿ ಜಯಲಕ್ಷ್ಮಿ, ಭಾಗ್ಯಮ್ಮ, ಮುಖಂಡರಾದ ಮುತ್ತಿಗಿ ಜಂಬಣ್ಣ, ಹುಲಿಕಟ್ಟಿ ಚಂದ್ರಪ್ಪ , ರಾಮಣ್ಣ, ಗುಂಡಗತ್ತಿ ಕೊಟ್ರಪ್ಪ, ಟಿಎಚ್ ಎಂ ಮಂಜುನಾಥ, ದಂಡಿನ ಹರೀಶ್, ಚಿಕ್ಕೇರಿ ಬಸಪ್ಪ, ಎಚ್.ಟಿ.ಹನುಮಂತ, ಉದಯಶಂಕರ್, ಮತ್ತೂರು ಬಸವರಾಜ ಇದ್ದರು.