ಕನ್ನಡಪ್ರಭ ವಾರ್ತೆ ಯಮಕನಮರಡಿ
ಉಳ್ಳಾಗಡ್ಡಿ ಖಾನಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೃಹತ್ ಉದ್ಯೋಗ ಮೇಳದಲ್ಲಿ ಸುಮಾರು 25 ರಿಂದ 30 ಕಂಪನಿಗಳು ಭಾಗವಹಿಸಲಿದ್ದು, ಇದರಿಂದ ಉದ್ಯೋಗಕ್ಕಾಗಿ ಅಲೆಯುವ ಗ್ರಾಮೀಣ ನಿರುದ್ಯೋಗಿಗಳಿಗೆ ಒಳ್ಳೆಯ ಅವಕಾಶ ಸಿಕ್ಕಂತಾಗುತ್ತದೆ. ಪ್ರಪ್ರಥಮ ಬಾರಿಗೆ ಈ ಭಾಗದಲ್ಲಿ ಇದೊಂದು ಐತಿಹಾಸಿಕ ಉದ್ಯೋಗಮೇಳವಾಗಿ ಹೊರ ಹೊಮ್ಮಲಿದೆ. ಉದ್ಯೋಗಮೇಳದಲ್ಲಿ ಉದ್ಯೋಗಕ್ಕಾಗಿ ಬಯಸಿ ಬರುವ ಪ್ರತಿ ಅಭ್ಯರ್ಥಿಗಳಿಗೆ ನೋಂದಣಿ ಸಂಪೂರ್ಣವಾಗಿ ಉಚಿತವಾಗಿದ್ದು, ಲಭ್ಯವಿರುವ ಸ್ಕ್ಯಾನರ್ ಬಳಸಿ ತಮ್ಮ ಹೆಸರುಗಳನ್ನು ನೋಂದಾಯಿಸಬಹುದು. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಉದ್ಯೋಗ ಮೇಳಕ್ಕೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಚಿಕ್ಕೋಡಿ ಲೋಕಸಭಾ ಸಂಸದೆ ಪ್ರಿಯಂಕಾ ಜಾರಕಿಹೊಳಿ, ಉಳ್ಳಾಗಡ್ಡಿ ಖಾನಾಪುರ ಗ್ರಾಪಂ ಅಧ್ಯಕ್ಷ ಚಂದ್ರಕಾಂತ ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಬೆಳಗಾವಿ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕ ಪಾಂಡುರಂಗ ಭಂಡಾರಿ, ಜಿಲ್ಲಾ ಸಂಯೋಜಕ ಸಂತೋಷ ನಾವಲಗಿ, ಹುಕ್ಕೇರಿ ತಹಸೀಲ್ದಾರ್ ಮಂಜಳಾ ನಾಯಕ, ಬಿಇಒ ಪ್ರಭಾವತಿ ಪಾಟೀಲ, ಪ್ರಾಚಾರ್ಯ ಎಂ.ಎಂ.ಮಗದುಮ್ಮ, ಉಪಪ್ರಾಂಶುಪಾಲ ಸುನಿತಾ ನಲವಡೆ, ಎಸ್‌ಡಿಎಂಸಿ ಉಪಾಧ್ಯಕ್ಷ ಮಹಾವೀರ ಸನಕಿ, ಚಿಕ್ಕೋಡಿ ವೃತ್ತಿಪರ ಸಂಯೋಜಕಿ ಫಾತಿಮಾ ಎಲ್.ಜಕಾತಿ ಆಗಮಿಸಲಿದ್ದಾರೆ ಎಂದರು.