ಸೆಪ್ಟೆಂಬರ್‌ 22ರಂದು ಹುಲಿಗೆಮ್ಮದೇವಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ

KannadaprabhaNewsNetwork |  
Published : Sep 22, 2025, 01:00 AM IST
21ಕೆಪಿಎಸ್ಎನ್ಡಿ2:  | Kannada Prabha

ಸಾರಾಂಶ

ನಗರದ ವಳಬಳ್ಳಾರಿ ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಹುಲಿಗೆಮ್ಮ ದೇವಿಯ ಶಿಲಾ ಮಂಟಪ ದೇವಸ್ಥಾನದ ಲೋಕಾರ್ಪಣೆ, ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಹಾಗೂ 18ನೇ ವರ್ಷದ ಶೀದೇವಿ ಮಹಾತ್ಮೆಯ ಪುರಾಣ ಪ್ರವಚನ ಕಾರ್ಯಕ್ರಮ ಸೆ.22ರಂದು ಹಮ್ಮಿಕೊಳ್ಳಲಾಗಿದೆ ಎಂದು ಶಾಂಭವಿ ಪುಣ್ಯಾಶ್ರಮದ ಪೀಠಾಧಿಪತಿ ವೀರೇಶ ಯಡಿಯೂರಮಠ ಹೇಳಿದರು.

ಕನ್ನಡಪ್ರಭ ವಾರ್ತೆ ಸಿಂಧನೂರು

ನಗರದ ವಳಬಳ್ಳಾರಿ ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಹುಲಿಗೆಮ್ಮ ದೇವಿಯ ಶಿಲಾ ಮಂಟಪ ದೇವಸ್ಥಾನದ ಲೋಕಾರ್ಪಣೆ, ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಹಾಗೂ 18ನೇ ವರ್ಷದ ಶೀದೇವಿ ಮಹಾತ್ಮೆಯ ಪುರಾಣ ಪ್ರವಚನ ಕಾರ್ಯಕ್ರಮ ಸೆ.22ರಂದು ಹಮ್ಮಿಕೊಳ್ಳಲಾಗಿದೆ ಎಂದು ಶಾಂಭವಿ ಪುಣ್ಯಾಶ್ರಮದ ಪೀಠಾಧಿಪತಿ ವೀರೇಶ ಯಡಿಯೂರಮಠ ಹೇಳಿದರು.

ಅವರು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸೆ.22ರಂದು ಬೆಳಿಗ್ಗೆ ಹುಲಿಗೆಮ್ಮ ದೇವಿಯ ಪಲ್ಲಕ್ಕಿ ಸೇವೆಯೊಂದಿಗೆ ಛತ್ರಚಾಮರ ಸೇವೆ, ಗಂಗಾ ಸ್ಥಳಕ್ಕೆ ಹೋಗಿ ಪೂಜೆ, ಶ್ರೀದೇವಿ ಮೂರ್ತಿಗೆ ಅಭಿಷೇಕ, ಘಟಸ್ಥಾಪನೆ, ಗೋಪೂಜೆ, ಗೋಪುರಕ್ಕೆ ಕಳಸಾರೋಹಣ, ಧ್ವಜಾರೋಹಣ ನಡೆಯಲಿವೆ. ವಳಬಳ್ಳಾರಿಯ ಸಿದ್ದಲಿಂಗ ಮಹಾಸ್ವಾಮಿ ಸಾನಿಧ್ಯ ವಹಿಸುವರು. ವೀರಭದ್ರ ಶಿವಾಚಾರ್ಯ ಮಹಾಸ್ವಾಮಿ, ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿ, ಸೋಮನಾಥ ಶಿವಾಚಾರ್ಯ ಮಹಾಸ್ವಾಮಿ, ಮಹಾಲಿಂಗ ಮಹಾಸ್ವಾಮಿ, ಅಮರಗುಂಡ ಶಿವಾಚಾರ್ಯ ಮಹಾಸ್ವಾಮಿ, ಶಿವಯೋಗಿ ಶಿವಾ ಚಾರ್ಯ ಮಹಾಸ್ವಾಮಿ ನೇತೃತ್ವದಲ್ಲಿ ಹುಲಿಗೆಮ್ಮದೇವಿ, ವಿಘ್ನೇಶ್ವರ ಹಾಗೂ ಸುಬ್ರಮಣ್ಯಸ್ವಾಮಿ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಜರುಗಲಿದೆ. ವಿವಿಧ ಮಠಗಳ ಶ್ರೀಗಳು, ರಾಜಕೀಯ ಪಕ್ಷಗಳ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸೆ.22 ರಿಂದ ಅ.1ರವರೆಗೆ ಪ್ರತಿನಿತ್ಯ ಸಂಜೆ 7 ರಿಂದ 9 ಗಂಟೆಯವರೆಗೆ ಶ್ರಿದೇವಿ ಮಹಾತ್ಮೆಯ ಪುರಾಣ ಪ್ರವಚನ ಕಾರ್ಯಕ್ರಮ ನಡೆಯಲಿವೆ. ಅ.2 ವಿಜಯದಶಮಿಯಂದು ಹುಲಿಗೆಮ್ಮ ದೇವಿಗೆ ಅಭಿಷೇಕ, ಕುಂಕುಮಾರ್ಚನೆ, ಸುಮಂಗಲೆಯರಿಂದ ಕಳಸ, ಕುಂಭ, ಭಾಜಾ ಭಜಂತ್ರಿ, ಡೊಳ್ಳು ವಾದ್ಯದೊಂದಿಗೆ ಗಂಗಾಸ್ಥಳದವರೆಗೆ ಮೆರವಣಿಗೆ ಹೋಗಿ ಪೂಜೆ ಸಲ್ಲಿಸಲಾಗುವುದು. ಸಂಜೆ ಬನ್ನಿ ಮುಡಿಯುವ ಕಾರ್ಯ ಕ್ರಮ ನಡೆಯಲಿದೆ ಎಂದು ಹೇಳಿದರು.

ಕಾರುಣ್ಯ ಆಶ್ರಮದ ಕಾರ್ಯಾಧ್ಯಕ್ಷ ಚನ್ನಬಸಯ್ಯಸ್ವಾಮಿ ಹಿರೇಮಠ ಮಾತನಾಡಿದರು. ಮುಖಂಡ ವೀರನಗೌಡ ಬಾದರ್ಲಿ, ದೇವಸ್ಥಾನ ಸಮಿತಿ ಅಧ್ಯಕ್ಷ ಹೊಸಗೇರಪ್ಪ ಗೊರೇಬಾಳ, ಖಜಾಂಚಿ ಸಣ್ಣಮಲ್ಲಪ್ಪ ಮಾಡಗಿರಿ, ಸದಸ್ಯರಾದ ಮಾಳಪ್ಪ ಮಾಡಗಿರಿ, ಶಿವಶರಣಯ್ಯಸ್ವಾಮಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ದ್ವೇಷ ಮಸೂದೆಯಿಂದ ಭಿನ್ನ ದನಿ ದಮನ ಆಗಲ್ಲ ''
3 ವರ್ಷ ಮೊಮ್ಮಗನಿಗೆ ಬಾರಲ್ಲಿ ಹೆಂಡ ಕುಡಿಸಿದ ಅಜ್ಜ: ಆಕ್ರೋಶ