ಕನ್ನಡಪ್ರಭ ವಾರ್ತೆ ಸರಗೂರು
ತಾಲೂಕು ಸಮೀಪದ ಹುಲಿಕುರ ಗ್ರಾಮದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ 135ನೇ ಜಯಂತಿ ಹಾಗೂ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಭವನ ಉದ್ಘಾಟಿಸಿ ಮಾತನಾಡಿದರು.
ಅಂಬೇಡ್ಕರ್ ಭವನವನ್ನು ಸುಂದರವಾಗಿ ನಿರ್ಮಿಸಲಾಗಿದೆ. ಅದರೆ ಭವನದ ಒಳಗಡೆ ಅಂಬೇಡ್ಕರ್ ಅವರ ಹೇಳಿದ ತತ್ವ ಪದಗಳು ಬರೆದಿರುವುದನ್ನು ನಾನು ಎಲ್ಲಿಯೂ ಕೂಡ ನೋಡಿಲ್ಲ. ಹುಲಿಕುರ ಯುವಕರು ಬರಸಿಕೊಂಡಿರುವುದನ್ನು ಕಂಡು ತುಂಬಾ ಖುಷಿಯಾಯಿತು ಎಂದರು.ನಾನು ನಿಮ್ಮ ಮುಂದೆ ನಿಂತು ಶಾಸಕರಾಗಿ ಬಂದಿರುವುದೇ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಕೊಟ್ಟ ಕೊಡುಗೆಯಿಂದ ಮುಖ್ಯ ಕಾರಣದಿಂದ ನಾನು ಶಾಸಕರಾಲು ಸಾಧ್ಯ. ಅಂಬೇಡ್ಕರ್ ಅವರು ಎಸ್ಸಿ ಎಸ್ಟಿಗೆ ಮೀಸಲಾತಿ ಕೊಡದಿದ್ದರೆ ನಾವು ಗ್ರಾಪಂನಿಂದ ವಿಧಾನಸಭೆವರೆಗೂ ಅತ್ತಲು ಸಾಧ್ಯವಾಗುತ್ತಿರಲಿಲ್ಲ. ಅವರ ಕೊಡುಗೆಯಿಂದ ಶಾಸಕನಾಗಿ ನಿಮ್ಮ ಮುಂದೆ ನಿಂತು ಮಾತನಾಡುತ್ತಿದ್ದೇನೆ ಎಂದು ಅವರು ಹೇಳಿದರು.
ಇಡೀ ಪ್ರಪಂಚದಾದ್ಯಂತ ಯಾರದದ್ದಾರೂ ಭಾವಚಿತ್ರ ಇದೆ ಎಂದರೆ ಅದು ಡಾ.ಬಿ.ಆರ್. ಅಂಬೇಡ್ಕರ್ ಅವರ ಚಿತ್ರ ಮಾತ್ರ. ಅಮೆರಿಕ, ಲಂಡನ್ ಹಾಗೂ ವಿಧಾನಸೌಧ, ಗ್ರಾಪಂ ಎಲ್ಲಾ ಕಡೆಯಲ್ಲೂ ಇರುವುದೇ ಬಾಬಾ ಸಾಹೇಬ್ ಅಂಬೇಡ್ಕರ್ ಫೋಟೋ ಮಾತ್ರ. ಸರ್ಕಾರಿ ಕಟ್ಟಡಗಳಲ್ಲದೆ ವಿದೇಶಗಳಲ್ಲಿ ಇವೆ ಎಂದರು.
ಅಂಬೇಡ್ಕರ್ ಭವನಕ್ಕೆ ಸುತ್ತ ಕಾಂಪೌಂಡ್ ಹಾಗೂ ಗ್ರಂಥಾಲಯ ನಾನು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಭವನ ಖಾಲಿಯಾಗುವುದು ಬೇಡ ಪುಸ್ತಕವನ್ನು ತೆಗೆದುಕೊಂಡು ಯುವಕರು ಓದಬೇಕು. ಮಕ್ಕಳನ್ನು ಎಲ್ಲಾರನ್ನು ಕುರಿಸಿಕೊಂಡು ಟ್ಯೂಷನ್ ಎಂದು ಅವರು ಕಿವಿಮಾತು ಹೇಳಿದರು.
ಮಾಜಿ ಶಾಸಕ ಎಸ್ ಚಿಕ್ಕಮಾದು ಸಚಿವರಾಗುತ್ತಿದ್ದರು. ಆರ್. ಧ್ರುವನಾರಾಯಣ್ ಸಚಿವರಾಗುತ್ತೇವೆ ಎಂದು ಹೇಳುತ್ತಿದ್ದರು. ಈಗ ಚಿಕ್ಕಮಾದು ಅವರ ಪುತ್ರ ಅನಿಲ ಚಿಕ್ಕಮಾದು ಅವರು ತಾಲೂಕಿಗೆ 250 ಕೋಟಿ ರೂ. ಕೊಟ್ಟು ರಸ್ತೆ ಅಭಿವೃದ್ಧಿ ಪಡಿಸಿದ್ದಾರೆ.
ಗ್ರಾಮದ ಮುಖಂಡ ಮೋಹನ್ ರಾಜ್ ಮಾತನಾಡಿ, ರಸ್ತೆ ಡಾಂಬರೀಕರಣ.
ಈ ವೇಳೆ ಗ್ರಾಪಂ ಉಪಾಧ್ಯಕ್ಷ ನಂಜುಂಡಸ್ವಾಮಿ, ರಮೇಶ್ ಕುಮಾರ್, ನಿವೃತ್ತ ಶಿಕ್ಷಕ ಮೋಹನ್ ರಾಜ್, ಗಂಗಾಧರ್, ಎಂಜಿನಿಯರ್ ಸುಪ್ರೀತ್, ಪಿಡಿಒ ಪ್ರಭಾಕರ್, ಮುಖಂಡರಾದ ನಂಜುಂಡೇಗೌಡ, ಚಿಕ್ಕ ಬಸವಪ್ಪ, ಪರಶಿವಮೂರ್ತಿ, ಅಂಕನಾಯಕ, ಚಾಮರಾಜು, ಮುದ್ದು ಮಲ್ಲಯ್ಯ, ಮಲ್ಲೇಶ್, ನಂದೀಶ್, ಕಾಮಿಸ್ವಾಮಿ, ಮಹದೇವ, ಕಂದೇಗಾಲ ಶಿವರಾಜು, ಯಜಮಾನರಾದ ಗೋಪಾಲಯ್ಯ, ಮಹಾದೇವ, ಶಟ್ಟಯ್ಯ, ಹುಚ್ಚಯ್ಯ, ಮಹೇಶ್, ಚನ್ನನಾಯಕ, ಭವನ ಜಾಗದ ದಾನಿಗಳಾದ ಚನ್ನನಾಯಕ ವೆಂಕಟನಾಯಕ, ಸಹಾಯಕ ನಿರ್ದೇಶಕ ರಮೇಶ್, ಮುನಿ ಕುಮಾರ್, ಗೋಪಾಲ್ ಇದ್ದರು.