ಧಾರವಾಡ:
ಘಟಕಕ್ಕೆ ಚಾಲನೆ ನೀಡಿದ ನಬಾರ್ಡ್ ಧಾರವಾಡ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಮಯೂರ ಕಾಂಬಳೆ, ನಬಾರ್ಡ್ ಪ್ರವರ್ತಿತ ಕೃಷಿ ಜ್ಯೋತಿ ರೈತ ಉತ್ಪಾದಕರ ಕಂಪನಿಯು ಈ ಕಾರ್ಯ ಮಾಡಿದ್ದು ಶ್ಲಾಘನೀಯ. ಘಟಕ ಸ್ಥಾಪನೆಗೆ ಬೆಂಗಳೂರಿನ ಸೋಲ್ಕೋ ಪ್ರತಿಷ್ಠಾನ ಸಹಾಯ ಒದಗಿಸಿದ್ದು ಸಂಸ್ಕರಣ ಘಟಕದ ನಿರ್ವಹಣೆಯನ್ನು ದುರ್ಗಾದೇವಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ವಹಿಸಲಾಗಿದೆ. ಘಟಕ ಸ್ಥಾಪನೆಗೆ ₹ 10 ಲಕ್ಷ ವೆಚ್ಚವಾಗಿದ್ದು, ಘಟಕ ನಿರ್ವಹಿಸಲು ತರಬೇತಿಯನ್ನು ಸಹಜ ಸಮೃದ್ಧ ಸಂಸ್ಥೆ ನೀಡಿದೆ. ಘಟಕವು ಪ್ರತಿ ದಿನ 5ರಿಂದ 6 ಕ್ವಿಂಟಲ್ ದಷ್ಟು ಸಿರಿಧಾನ್ಯ ಸಂಸ್ಕರಿಸುವ ಸಾಮರ್ಥ್ಯ ಹೊಂದಿದೆ ಎಂದರು.
ರೈತರು ಈ ಸಂಸ್ಕರಣ ಘಟಕದ ಉಪಯೋಗ ಮಾಡಿಕೊಂಡು ವಹಿವಾಟು ಹೆಚ್ಚಿಸಲು ಶ್ರಮಿಸಿ ಮುಂದಿನ ದಿನಗಳಲ್ಲಿ ಸಿರಿಧಾನ್ಯದಿಂದ ಸೆಕೆಂಡರಿ ಉತ್ಪನ್ನಗಳನ್ನು ತಯಾರಿಸಲು ಸಲಹೆ ನೀಡಿದರು.ಸೋಲ್ಕೋ ಪ್ರತಿಷ್ಠಾನದ ವೀರೇಶ ತಡಹಾಳ ಮಾತನಾಡಿ, ಸೋಲ್ಕೋ ಪ್ರತಿಷ್ಠಾನದಿಂದ ಮುಂದಿನ ದಿನಗಳಲ್ಲಿ ಮಹಿಳೆಯರ ಆರ್ಥಿಕ ಅಭಿವೃದ್ಧಿಗೋಸ್ಕರ ಸೌರಶಕ್ತಿ ಆಧಾರಿತ ಯೋಜನೆಗಳನ್ನು ಅನುಷ್ಠಾನ ಮಾಡಲಾಗುವುದು ಎಂದು ತಿಳಿಸಿದರು.