ಕನ್ನಡಪ್ರಭ ವಾರ್ತೆ ರಾಮನಗರ
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾ ವಕೀಲರ ಸಂಘ, ಬಸವನಪುರದ ಸರ್ಕಾರಿ ಕಾನೂನು ಕಾಲೇಜು, ಎಂ.ಎಚ್. ಕಾನೂನು ಕಾಲೇಜು ಹಾಗೂ ಜಿಲ್ಲೆಯ ಎಲ್ಲಾ ಸ್ವಯಂಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಮಾನವ ಹಕ್ಕುಗಳ ದಿನಾಚರಣೆ-2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬದುಕುವ, ಸಮಾನತೆ ಹಕ್ಕಿಗೆ ಧಕ್ಕೆಯುಂಟಾದಾಗ ಮಾನವ ಹಕ್ಕುಗಳ ಮೂಲಕ ಸಮಾನತೆ ಸಾಧಿಸಬಹುದಾಗಿದೆ. ಬಡವ ಮತ್ತು ಶ್ರೀಮಂತರ ಮಧ್ಯ ಘರ್ಷಣೆಯಾಗಿ ಬಡವನು ತನ್ನ ಹಕ್ಕು, ಬಾಧ್ಯತೆಗಳಿಗೋಸ್ಕರ ಬದುಕುವುದಕ್ಕೆ ಮಾನವ ಹಕ್ಕುಗಳ ಕಾನೂನು ನೆರವಿಗೆ ಬರುತ್ತವೆ. ಒಬ್ಬರು ಇನ್ನೊಬ್ಬರ ಮನಸ್ಸಿಗೆ ನೋವಾಗುವಂತೆ ಮಾತನಾಡುವುದು ಮಾನವ ಹಕ್ಕು ಉಲ್ಲಂಘನೆ ಆಗುತ್ತದೆ. ಜೀವನದಲ್ಲಿ ತಪ್ಪು ಮಾಡುವುದು ಸಹಜ. ಆದರೆ ಆ ತಪ್ಪನ್ನು ತಿದ್ದಿಕೊಂಡು ನಡೆಯುವುದು ಮನುಷ್ಯನ ಧರ್ಮ. ಮಾನವನಲ್ಲಿ ನಾನು ಎಂಬ ಅಹಂ ಹೋದರೆ ಎವರೆಸ್ಟ್ ಶಿಖರ ಏರಿದಂತೆ, ಇದರಿಂದ ಉತ್ತಮ ಮಾನವ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.ಅಜ್ಞಾನ ಇಲ್ಲದಂತೆ ವರ್ತಿಸುವ ವ್ಯಕ್ತಿಯೇ ಮಾನವ. ಜಗತ್ತಿನಲ್ಲಿ ಎರಡು ಮಹಾ ಯುದ್ಧದಿಂದ ಬಡವ ಶ್ರೀಮಂತ ಎನ್ನದೆ ಲಕ್ಷಾಂತರ ಜನರು ಸಾವಿಗೀಡಾಗುತ್ತಾರೆ. ಆ ಸಮಯದಲ್ಲಿ ಮಾನವರ ರಕ್ಷಣೆಗೆಂದು 1948 ಡಿಸೆಂಬರ್ 10 ರಂದು ಮಾನವ ಹಕ್ಕುಗಳು ಜಾರಿಗೆ ಬಂದವು. ಮಗುವು ತಾಯಿಯ ಒಡಲಿನಿಂದ ಹೊರ ಬಂದ ನಂತರ ಮಗುವಿಗೆ ಮಾನವ ಹಕ್ಕುಗಳು ಲಭಿಸ್ಮತ್ತದೆ, ವಸತಿ-ಉಡುಪು ಮತ್ತು ಆಹಾರ ಈ ಮೂರು ಮೂಲಭೂತ ಹಕ್ಕುಗಳನ್ನು ಪಡೆಯುವುದಕ್ಕೆ ಅಡಚಣೆಗಳು ಉಂಟಾದರೆ ಮಾನವ ಹಕ್ಕು ಉಲ್ಲಂಘನೆ ಆದಂತೆ, ಆ ಸಂದರ್ಭದಲ್ಲಿ ಆಸರೆಯಾಗಿ ನಿಲ್ಲುವುದು ಮಾನವ ಹಕ್ಕುಗಳ ಕಾನೂನು ಎಂದು ತಿಳಿಸಿದರು.
ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಟಿ.ತಿಮ್ಮೇಗೌಡ ಮಾತನಾಡಿದರು. ಬಸವನಪುರ ಸರ್ಕಾರಿ ಕಾನೂನು ಕಾಲೇಜಿನ ಸಹ ಪ್ರಾಧ್ಯಾಪಕರಾದ ಎಚ್.ಎಂ. ಸುಮಂತ್ ಉಪನ್ಯಾಸ ನೀಡಿದರು.ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸವಿತಾ ಪಿ.ಆರ್. ಅವರು ಮಾನವ ಹಕ್ಕುಗಳ ದಿನಾಚರಣೆ-2025ರ ಪ್ರತಿಜ್ಞಾ ವಿಧಿ ಬೋಧಿಸಿದರು.
ಜಿಲ್ಲಾ ಪಂಚಾಯಿತಿನ ಲೆಕ್ಕಾಧಿಕಾರಿಗಳಾದ ಮಂಜುಳ, ಉಪ ಕಾರ್ಯದರ್ಶಿ ಧನರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಜೆ.ಆರ್.ದಿನೇಶ್ , ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಲಕ್ಷ್ಮೀದೇವಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಬಿ.ಎಂ. ಶ್ರೀವತ್ಸ ಉಪಸ್ಥಿತರಿದ್ದರು.11ಕೆಆರ್ ಎಂಎನ್ 1.ಜೆಪಿಜಿರಾಮನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಮಾನವ ಹಕ್ಕುಗಳ ದಿನಾಚರಣೆ-2025 ಕಾರ್ಯಕ್ರಮವನ್ನು ನ್ಯಾಯಾಧೀಶರಾದ ಅಣ್ಣಯ್ಯನವರ ಉದ್ಘಾಟಿಸಿದರು.