ವನ್ಯಜೀವಿಗಳಿದ್ದರೆ ಮನುಕುಲ ಬಾಳು, ಇಲ್ಲದಿದ್ದರೆ ಗೋಳು

KannadaprabhaNewsNetwork |  
Published : Jun 19, 2025, 12:35 AM IST
ಪರಿಸರ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ವನ್ಯಜೀವಿಗಳಿದ್ದರೆ ಮನುಕುಲದ ಬಾಳು, ಇಲ್ಲದಿದ್ದರೆ ಮನುಕುಲದ ಗೋಳು ಎಂಬುದನ್ನು ನಾವು ಅರ್ಥೈಸಿಕೊಳ್ಳಬೇಕು. ಜತೆಗೆ ವನ್ಯ ಜೀವಿಗಳ ರಕ್ಷಣೆಗೆ ಮುಂದಾಗಬೇಕು ಎಂದು ಉಪನ್ಯಾಸಕ ಡಾ.ಅಬ್ದುಲ್ ಸಮದ್ ಕೊಟ್ಟೂರ್ ಹೇಳಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ವನ್ಯಜೀವಿಗಳಿದ್ದರೆ ಮನುಕುಲದ ಬಾಳು, ಇಲ್ಲದಿದ್ದರೆ ಮನುಕುಲದ ಗೋಳು ಎಂಬುದನ್ನು ನಾವು ಅರ್ಥೈಸಿಕೊಳ್ಳಬೇಕು. ಜತೆಗೆ ವನ್ಯ ಜೀವಿಗಳ ರಕ್ಷಣೆಗೆ ಮುಂದಾಗಬೇಕು ಎಂದು ಉಪನ್ಯಾಸಕ ಡಾ.ಅಬ್ದುಲ್ ಸಮದ್ ಕೊಟ್ಟೂರ್ ಹೇಳಿದರು.

ತಾಲೂಕಿನ ಬಿದರಕುಂದಿಯಲ್ಲಿ ವಿಜಯಪುರ ಪ್ರಾದೇಶಿಕ ಅರಣ್ಯ ವಿಭಾಗ, ಪ್ರಾದೇಶಿಕ ಅರಣ್ಯ ವಲಯ ಮುದ್ದೇಬಿಹಾಳ ಮತ್ತು ಸರ್ಕಾರಿ ಆದರ್ಶ ವಿದ್ಯಾಲಯದ ಸಂಯುಕ್ರಾಶ್ರಯದಲ್ಲಿ ನಡೆದ ವಿಶ್ವ ಮೊಸಳೆ ದಿನಾಚರಣೆಯ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. 17ನೇ ಜೂನ್ 1975ರಲ್ಲಿ ವಿಶ್ವಸಂಸ್ಥೆ, ವಿಶ್ವ ಮೊಸಳೆ ದಿನ ಎಂದು ಘೋಷಣೆ ಮಾಡಿದೆ. ಅಂದಿನಿಂದ ಈ ದಿನಚರಣೆಯನ್ನು ಪ್ರಪಂಚದಲ್ಲೆಡೆ ಆಚರಿಸಲಾಗುವುದು, ವನ್ಯ ಜೀವಿಗಳು ಮನುಷ್ಯನಿಗೆ ಅತಿ ಉಪಾಯಕಾರಿಯಾಗಿವೆ. ಮೊಸಳೆ ಜೀವಿತಕಾಲ ಪ್ರಭೇದ, ವಿಧಗಳು, ವಿವಿಧ ರಾಜ್ಯಗಳು ಮತ್ತು ದೇಶಗಳಲ್ಲಿ ಬೇರೆ ಬೇರೆ ಪ್ರಭೇದದ ಮೊಸಳೆಗಳು ಇವೆ. ಅವುಗಳು ಎಂತಹ ಪ್ರದೇಶಗಳಲ್ಲಿ ಜೀವಿಸುತ್ತವೆ ಎನ್ನುವುದರ ಬಗ್ಗೆ ಸಾಕಷ್ಟು ವಿಚಾರಗಳನ್ನು ಪ್ರೊಜೆಕ್ಟರ್ ಮೂಲಕ ಎಲ್ಲ ವಿದ್ಯಾರ್ಥಿಗಳಿಗೆ ಮನದಟ್ಟು ಆಗುವಂತೆ ವಿವರಿಸಿದರು.

ಡಾ.ಎಸ್.ಎಲ್.ಪಾಟೀಲ್ ಮಾತನಾಡಿ, ಅರಣ್ಯಗಳನ್ನು ಸಂರಕ್ಷಿಸುವುದರಿಂದ ಶುದ್ಧ ಗಾಳಿ ಸಿಗುವುದು, ಮನಕುಲಕ್ಕೆ ಬೆಲೆ ಕಟ್ಟಲಾಗದಷ್ಟು ಬದುಕಲು ಅವಕಾಶ ಮಾಡಿಕೊಡುತ್ತದೆ ಎಂದರು.

ಭಾಗ್ಯವಂತ ಮಸೂದಿ ಮಾತನಾಡಿ, ಅರಣ್ಯ ಮನುಕುಲಕ್ಕೆ ಉಪಕಾರಿಯಾಗಿದೆ. ಅದನ್ನು ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ, ಪ್ರತಿ ತಮ್ಮ ಜನ್ಮ ದಿನಾಚರಣೆಗೊಂದು ಚಾಕ್ಲೇಟ್ ಸಿಹಿ ವಿತರಿಸುವ ಬದಲು ಒಂದು ಗಿಡ ನೆಡುವುದರಿಂದ ಒಳ್ಳೆಯ ಆಮ್ಲಜನಕವನ್ನು ಮತ್ತು ಗ್ಲೋಬಲ್‌ ವಾರ್ಮಿಂಗ್‌ನ್ನು ತಡೆಯಲಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಗಿಡಮರಗಳನ್ನು ಬೆಳೆಸಿದರೆ ಮನುಷ್ಯ ಸದಾ ಆರೋಗ್ಯವಂತನಾಗಿರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.ವಲಯ ಅರಣ್ಯಾಧಿಕಾರಿ ಬಸನಗೌಡ ಬಿರಾದಾರ, ಇಚಿಡಿ ವಲಯ ಅರಣ್ಯಾಧಿಕಾರಿ ಎಸ್.ವೈ.ಸಂಗಲ್ಕರ್, ಆದರ್ಶ ವಿದ್ಯಾಯಲದ ಮುಖ್ಯ ಶಿಕ್ಷಕ ಅನಿಲ್ ಕುಮಾರ್ ರಾಥೋಡ, ಪ್ರೇರಣಾ ಬೆಳಗಲ್, ಮಧುಶ್ರೀ ನಾಗರಬೆಟ್ಟ, ಇಂಚರ ಸಿದ್ದರಡ್ಡಿ, ಅಮೃತ ಕರೆಕಲ್ ಪ್ರಾರ್ಥಸಿದರು. ರಾಜೇಂದ್ರ ಹೊನ್ನೂರ್ ಸ್ವಾಗತಿಸಿದರು, ದೈಹಿಕ ಶಿಕ್ಷಕ ಎ.ಸಿ.ಕೆರೂರ, ಎನ್.ಎಸ್.ಬಿರಾದಾರ್ ನಿರೂಪಿಸಿದರು.

ಈ ವಿಷಯದ ಕುರಿತು ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮವನ್ನು ಶಾಲಾ ಹಂತದಲ್ಲಿ ಹಮ್ಮಿಕೊಳ್ಳಲಾಗಿತ್ತು. ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.ಶಿವಶರಣಯ್ಯ, ವಿವಿಧ ಗ್ರಾಮಗಳಲ್ಲಿ ವನ್ಯಜೀವಿಗಳ ಸಂರಕ್ಷಣೆ ಮಾಡುತ್ತಿರುವ ತಂಗಡಗಿ ಗ್ರಾಮದ ಸ್ನೇಕ್ ಭಾಷಾ ಚಪ್ಪರಬಂದ್, ನಾಗೇಶ್ ವಡ್ಡರ್, ಯಮನಪ್ಪ ಗೊಲ್ಲರ, ಎಸ್.ವೈ.ಯರಝರಿ ಅವರು ಗ್ರಾಮಾಂತರ ಪ್ರದೇಶಗಳಲ್ಲಿ ಮೊಸಳೆ, ವಿಷ ಜಂತು ಹಾವುಗಳು, ಯಾವುದೇ ರೀತಿ ಜನರಿಗೆ ಹಾನಿಯಾಗದಂತೆ ಮತ್ತು ಜಲಚರಗಳನ್ನು ಸಂರಕ್ಷಣೆ ಮಾಡಿ ಸುರಕ್ಷಿತವಾಗಿ ನದಿಗಳಿಗೆ ಕಾಡುಗಳಿಗೆ ಬಿಟ್ಟು ಸಂರಕ್ಷಿಸಿದ್ದಕ್ಕಾಗಿ ಅವರನ್ನು ₹ 10 ಲಕ್ಷದ ವಿಮಾ ನೋಂದಣಿ ಬಾಂಡ್‌ ನೀಡಿ ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ