ತಾಲೂಕಿನ ಸುಕ್ಷೇತ್ರ ಹುನ್ಸಿಹಡಗಿಲ್ ಗ್ರಾಮದ ಪರಮ ಪೂಜ್ಯ ಲಿಂಗೈಕ್ಯ ಬಸವಲಿಂಗಪ್ಪಾ ಅಪ್ಪಾಜಿ ಅವರ 22ನೇ ವರ್ಷದ ಜಾತ್ರಾ ಮಹೋತ್ಸವ ಆ.22ರಿಂದ ಮೂರು ದಿನಗಳ ಕಾಲ ಜರುಗಲಿವೆ.
ಕನ್ನಡಪ್ರಭ ವಾರ್ತೆ ಕಲಬುರಗಿ
ತಾಲೂಕಿನ ಸುಕ್ಷೇತ್ರ ಹುನ್ಸಿಹಡಗಿಲ್ ಗ್ರಾಮದ ಪರಮ ಪೂಜ್ಯ ಲಿಂಗೈಕ್ಯ ಬಸವಲಿಂಗಪ್ಪಾ ಅಪ್ಪಾಜಿ ಅವರ 22ನೇ ವರ್ಷದ ಜಾತ್ರಾ ಮಹೋತ್ಸವ ಆ.22ರಿಂದ ಮೂರು ದಿನಗಳ ಕಾಲ ಜರುಗಲಿವೆ.ಪ್ರತಿ ವರ್ಷದಂತೆ ಜಾತ್ರಾ ಮಹೋತ್ಸವ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ಚಿನ್ಮಯಗಿರಿ ಮಹಾಂತೇಶ್ವರ ಮಠದ ವೀರ ಮಹಾಂತ ಶಿವಾಚಾರ್ಯರ ಅಧ್ಯಕ್ಷತೆಯಲ್ಲಿ ಮತ್ತು ಪೂಜ್ಯ ಶಿವಶರಣಪ್ಪ ಅಪ್ಪಾಜಿ ಮತ್ತು ರಾಜಕುಮಾರ ಅಪ್ಪಾಜಿ ಅವರ ಸಾನ್ನಿಧ್ಯದಲ್ಲಿ, ಪರಮಪೂಜ್ಯ ಬಸವರಾಜಪ್ಪ ಅಪ್ಪಾಜಿ ಅವರ ನೇತೃತ್ವದಲ್ಲಿ ಜಾತ್ರಾ ಮಹೋತ್ಸವ ನಡೆಯಲಿದ್ದು, ಆ.23ರಂದು ಸಂಜೆ 6ಕ್ಕೆ ರಥೋತ್ಸವ ಜರುಗಲಿದೆ.ನೂತನ ಕಳಸಾರೋಹಣ ಮೂರ್ತಿ ಪ್ರತಿಷ್ಠಾಪನೆ: ಆ. 22ರಂದು ಬೆಳಿಗ್ಗೆ 9ಕ್ಕೆ ರಾಜಕುಮಾರ ಗುಂಡೂರಾವ್ ಮುತ್ಯಾ ಅವರ ಮನೆತನದಿಂದ ಶ್ರೀ ಹನುಮಾನ ದೇವಸ್ಥಾನದ ನೂತನ ಗೋಪುರ ಲೋಕಾರ್ಪಣೆ ಹಾಗೂ ಕಳಸಾರೋಹಣ ವೀರ ಮಹಾಂತ ಶಿವಾಚಾರ್ಯರ ಅಮೃತ ಹಸ್ತದಿಂದ ನಡೆಯಲಿದೆ. ತದನಂತರ ಬೆಳಿಗ್ಗೆ 10ಕ್ಕೆ ಗೂಂಡೂರಾವ್ ಮುತ್ಯಾ ಅವರ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದೆ.ಪುಸ್ತಕ ಬಿಡುಗಡೆ: ಆ. 22ರಂದೇ ಮಧ್ಯಾಹ್ನ 1ಕ್ಕೆ ಲೇಖಕ, ಕಲಾವಿದ ಹಣಮಂತರಾವ ಬಿ. ಮಂಗಾಣೆ ಅವರು ಬರೆದ ಮಹಾಪುರುಷ ಪೂಜ್ಯ ಬಸವಲಿಂಗ ಶರಣರ 108 ನಾಮಾವಳಿ ಹಾಗೂ ಭಕ್ತಿ ಗಿತೇಗಳ ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದೆ. ಸಂಜೆ 6ಕ್ಕೆ ಬಸವರಾಜಪ್ಪ ಅಪ್ಪಾಜಿ ಹಾಗೂ ಓಂಕಾರ ಒಡೆಯರ ನೇತೃತ್ವದಲ್ಲಿ ಸಂಜೆ 6ಕ್ಕೆ ಉಚ್ಚಾಯಿ ಕಾರ್ಯಕ್ರಮ ಜರುಗಲಿದೆ.23ರಂದು ಸಾಯಂಕಾಲ 4ಕ್ಕೆ ಮಲ್ಲಿಕಾರ್ಜುನ ಮೂಲಗೆ ಅವರ ಮನೆತನದಿಂದ ಹಾಗೂ ವೀರಯ್ಯ ಎಸ್ ಹಿರೇಮಠ ಅವರ ಮಠದಿಂದ ನಂದಿ ಧ್ವಜ ಮೆರವಣಿಗೆ ಕೈಲಾ ಎಸ್. ಪೊಲೀಸ್ ಪಾಟೀಲ್, ಶರಣಬಸಪ್ಪ ಮಾಲಿಪಾಟೀಲ್ ಇವರ ಮನೆತನದಿಂದ ಕುಂಭ ಮೆರವಣಿಗೆ ಹಾಗೂ ಪುರಂತರ ಸೇವೆ ಜರುಗಲಿವೆ.. ಸಂಜೆ 6ಕ್ಕೆ ರಥೋತ್ಸವ ಜರುಗಲಿದ್ದು, ತದನಂತರ ಸಂಗೀತ ಕಾರ್ಯಕ್ರಮ ಸೇರಿ ವಿವಿಧ ಕಾರ್ಯಕ್ರಮಗಳು ಜರುಗಲಿವೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.