ಕನ್ನಡಪ್ರಭ ವಾರ್ತೆ ಕುಷ್ಟಗಿ
ಹೈ-ಕ ಯುವಶಕ್ತಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಕಿರಣ ಜ್ಯೋತಿ ಮಾತನಾಡಿ, ಇತ್ತೀಚಿನ ಸರ್ಕಾರಗಳು ಕೆಳಹಂತದ ಸಿಬ್ಬಂದಿ ವರ್ಗದವರನ್ನು ಜೀತದಾಳುಗಳಂತೆ ನಡೆಸಿಕೊಳ್ಳುತ್ತಿರುವುದು ಖಂಡನಾರ್ಹ. ಕಂದಾಯ ಇಲಾಖೆಯ ಸಾಕಷ್ಟು ಮೊಬೈಲ್ ಆ್ಯಪ್ ಹಾಗೂ ಗ್ರಾಮೀಣ ಪ್ರದೇಶದ ಸೇವೆಗಳನ್ನು ಒದಗಿಸುತ್ತಿರುವ ವಿಎಗಳ ಬೇಡಿಕೆಗಳನ್ನು ಕೂಡಲೇ ಸರ್ಕಾರ ಈಡೇರಿಸಬೇಕಿದೆ ಎಂದರು.
ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಗಾಣಿಗೇರ ಮಾತನಾಡಿ, ಪ್ರಸ್ತುತ ಸರ್ಕಾರ ಗ್ಯಾರಂಟಿಗಳಿಗೆ ಜೋತುಬಿದ್ದು ಸಾರ್ವಜನಿಕರಿಗೆ ಕೆಲವೊಂದು ಇಲಾಖೆಗಳ ಮೂಲಕ ಪರೋಕ್ಷ ಆರ್ಥಿಕ ಹೊರೆ ಉಂಟು ಮಾಡುವುದರ ಜೊತೆಗೆ, ಗೊಂದಲ ಸೃಷ್ಟಿಸಿದೆ.ಸಿ ಮತ್ತು ಡಿ ನೌಕರರ ವರ್ಗಗಳಿಗೆ ಸಮರ್ಪಕ ಸೌಲಭ್ಯ ಕೊಡದೆ, ಧೋರಣೆ ಖಂಡಿಸಿ ಹೋರಾಟ ನಡೆಸಿದರೆ, ಹೋರಾಟಗಳನ್ನು ಹತ್ತಿಕುವ ಇಲ್ಲವೇ, ಪರೋಕ್ಷ ರೀತಿಯ ಭೀತಿ ಉಂಟುಮಾಡುವ ಹುನ್ನಾರ ನಡೆಸುತ್ತಿರುವುದು ಅಮಾನವೀಯವಾಗಿದೆ ಎಂದರು.
ಸದ್ಯ ಮನವೊಲಿಸಿ ಮುಂಬರುವ ಬಜೆಟ್ ಅಧಿವೇಶನದಲ್ಲಿ ಅಂತಿಮ ಆದೇಶದೊಂದಿಗೆ ಸದರಿ ನೌಕರರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿಸರು.ಸಂಘಟನೆಯ ಮುಖಂಡರಾದ ರಾಮಣ್ಣ ಭಜಂತ್ರಿ, ಸಂಚಾಲಕ ಜಗದೀಶ ನಾಗರಾಳ, ವಿರೂಪಾಕ್ಷ ಚೂರಿ, ಗ್ರಾಮಾಡಳಿತಧಿಕಾರಿ ಸಂಘದ ತಾಲೂಕು ಅಧ್ಯಕ್ಷ ಶರಣಪ್ಪ ಹುಡೇದ ಸೇರಿದಂತೆ ಅನೇಕರು ಇದ್ದರು.