ನಾನೇ ವೀಣೆ, ನೀನೇ ತಂತಿ.. ಯುಗಳ ಗೀತೆಗಳ ಗಾಯನ ಕಾರ್ಯಕ್ರಮ

KannadaprabhaNewsNetwork |  
Published : Sep 30, 2026, 01:15 AM IST
9 | Kannada Prabha

ಸಾರಾಂಶ

ಶ್ರೀ ಅನಂತೇಶ್ವರ ಟ್ರಸ್ಟ್‌ ಹಾಗೂ ಕರ್ನಾಟಕ ಸುಗಮ ಸಂಗೀತ ಪರಿಷತ್‌ ವತಿಯಿಂದ ನಗರದ ಜೆಎಲ್‌ಬಿ ರಸ್ತೆಯ ನಾದಬ್ರಹ್ಮ ಸಂಗೀತ ಸಭಾದಲ್ಲಿ ‘ನಾನೇ ವೀಣೆ, ನೀನೇ ತಂತಿ’ ಶೀರ್ಷಿಕೆಯಡಿ ಖ್ಯಾತ ಗಾಯಕ ಡಾ. ಪಿ.ಬಿ. ಶ್ರೀನಿವಾಸ್‌ ಅವರು ಎಸ್‌. ಜಾನಕಿ, ಪಿ. ಸುಶೀಲಾ ಅವರೊಂದಿಗೆ ಹಾಡಿರುವ ಹಳೆಯ ಜನಪ್ರಿಯ ಯುಗಳ ಗೀತೆಗಳ ವಿಶೇಷ ಕಾರ್ಯಕ್ರಮ.

ಕನ್ನಡಪ್ರಭ ವಾರ್ತೆ ಮೈಸೂರು

ಶ್ರೀ ಅನಂತೇಶ್ವರ ಟ್ರಸ್ಟ್‌ ಹಾಗೂ ಕರ್ನಾಟಕ ಸುಗಮ ಸಂಗೀತ ಪರಿಷತ್‌ ವತಿಯಿಂದ ನಗರದ ಜೆಎಲ್‌ಬಿ ರಸ್ತೆಯ ನಾದಬ್ರಹ್ಮ ಸಂಗೀತ ಸಭಾದಲ್ಲಿ ‘ನಾನೇ ವೀಣೆ, ನೀನೇ ತಂತಿ’ ಶೀರ್ಷಿಕೆಯಡಿ ಖ್ಯಾತ ಗಾಯಕ ಡಾ. ಪಿ.ಬಿ. ಶ್ರೀನಿವಾಸ್‌ ಅವರು ಎಸ್‌. ಜಾನಕಿ, ಪಿ. ಸುಶೀಲಾ ಅವರೊಂದಿಗೆ ಹಾಡಿರುವ ಹಳೆಯ ಜನಪ್ರಿಯ ಯುಗಳ ಗೀತೆಗಳ ವಿಶೇಷ ಕಾರ್ಯಕ್ರಮ ಮಂಗಳವಾರ ನಡೆಯಿತು.

ಹಿರಿಯ ಗಾಯಕ ಶ್ರೀಕಂಠರಾವ್‌ ಗಾಯನ ಸಾರಥ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಎ.ಡಿ. ಶ್ರೀನಿವಾಸನ್‌, ರೇವಣ್ಣ, ಕೃಷ್ಣಮೂರ್ತಿ, ಎನ್‌. ಬೆಟ್ಟೇಗೌಡ, ಎ.ಸಿ. ರವಿ, ಲಕ್ಷ್ಮಿ ದಿನೇಶ್‌, ಇಂದ್ರಾಣಿ ಅನಂತರಾಮ್‌, ತೇಜೋವತಿ, ರೇಣುಕಾ ಆರಾಧ್ಯ ಅವರು ಗಾಯನ ಪ್ರಸ್ತುತಪಡಿಸುವ ಮೂಲಕ.ಅಪಾರ ಸಂಖ್ಯೆಯಲ್ಲಿ ಸೇರಿದ್ದ ಸಂಗೀತಾಸಕ್ತರಿಗೆ ಕನ್ನಡ ಚಿತ್ರರಂಗದ ಸುವರ್ಣ ಯುಗದಲ್ಲಿ ತೇಲುವಂತೆ ಮಾಡಿದರು. ಶುಭಪಲ್ಲವಿ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್‌ ಸದಸ್ಯ ಡಾ.ಡಿ. ತಿಮ್ಮಯ್ಯ ಮಾತನಾಡಿ, ಸಂಗೀತ ಯಾವತ್ತೂ ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ. ಮನಸ್ಸಿಗೆ ಮುದ ನೀಡುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸುಗಮ ಸಂಗೀತ ಪರಿಷತ್‌ ಜಿಲ್ಲಾಧ್ಯಕ್ಷ ಹಾಗೂ ಶ್ರೀ ಅನಂತೇಶ್ವರ ಟ್ರಸ್ಟ್‌ ಅಧ್ಯಕ್ಷ ನಾಗರಾಜ್‌ ವಿ. ಬೈರಿ ಮಾತನಾಡಿ, ಕಳೆದ ಎರಡೂವರೆ ವರ್ಷಗಳಲ್ಲಿ ಸುಗಮ ಸಂಗೀತ ಪರಿಷತ್‌ ನಡೆಸುತ್ತಿರುವ 54ನೇ ಕಾರ್ಯಕ್ರಮ ಇದು. ಆ.6 ರಂದು ಮತ್ತೊಂದು ಕಾರ್ಯಕ್ರಮ ಇದೇ ಸಭಾಂಗಣಧಲ್ಲಿ ನಡೆಯಲಿದ್ದು, ಸಂಗೀತಪ್ರಿಯರು ಎಂದಿನಂತೆ ಬೆಂಬಲಿಸುವಂತೆ ಮನವಿ ಮಾಡಿದರು.

ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಮುಖ್ಯಅತಿಥಿಗಳಾಗಿದ್ದರು.ಎಲ್ಲಿಗೆ ಪಯಣ...

ನಾನೇ ವೀಣೆ ನೀನೆ ತಂತಿ, ಆಕಾಶವೇ ಬೀಳಲಿ ಮೇಲೆ, ಬೆಳ್ಳಿ ಮೋಡದ ಅಂಚಿನಿಂದ, ರವಿವರ್ಮನ, ಉತ್ತರ ಧ್ರುವದಿಂ, ನೀ ಮುಡಿದ ಮಲ್ಲಿಗೆ ಹೂವೇ,

ಹಳ್ಳಿಯಾದರೇನು ಶಿವ, ಓಡುವ ನದಿ ಸಾಗರವ, ಬರದೇ ನೀನು ನಿನ್ನ ಹೆಸರ, ನೀ ಬಂದು ನಿಂತಾಗ, ಕನಸಲು ನೀನೆ ಮನಸಲು ನೀನೆ, ಆಡುತ್ತಿರುವ ಮೋಡಗಳೆ, ಚಂದಿರ ಭೂಮಿಯ, ಹಾಯಾಗಿದೆ ಈ ದಿನ ಮನ, ಬಾರೇ ಬಾರೇ, ಪ್ರೀತಿನೇ ಆದ್ಯಾವ್ರು ತಂದ, ಮಲೆನಾಡ ಹೆಣ್ಣ ಮೈಬಣ್ಣ, ಆಡಿಸಿ ನೋಡು ಬಿಳಿಸಿ ನೋಡು, ಬಾಡಿ ಹೋದ ಬಳ್ಳಿಯಿಂದ, ಆಹಾ ಮೈಸೂರು ಮಲ್ಲಿಗೆ, ನೀರಿನಲ್ಲಿ ಅಲೆಯ ಉಂಗುರ, ನೀ ತಂದ ಕಾಣಿಕೆ, ಗಂಗಿ ನಿನ್‌ ಮೇಲೆ ನಂಗೆ ಮನಸೈತೆ, ನಿನದೇ ನೆನಪು, ಹರಿನಾಮವೇ ಚೆಂದ, ಕೊಡಗಿನ ಕಾವೇರಿ, ನಿನ್ನ ನಗುವು ಹೂವಂತೆ, ನಿನ್ನ ಕಣ್ಣ ಕನ್ನಡಿಯಲ್ಲಿ, ಒಂದು ದಿನ ಎಲ್ಲಿಂದಲೆ, ಬೀಸೋ ಗಾಳಿಯಲಿ, ಎಲ್ಲಿಗೆ ಪಯಣ, ಬಾನಿಗೆ ನೀಲಿಯ...ಮೊದಲಾದ ಗೀತೆಗಳು ಗಮನ ಸೆಳೆದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕರಕುಶಲ ಕಲೆಗಳಿವೆ ತನ್ನದೇ ವೈಶಿಷ್ಟ್ಯತೆ: ಕಿರಣ
ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಸ್ವಪಕ್ಷದವರ ಆಕ್ರೋಶ