ರ್‍ಯಾಗಿಂಗ್ ನಿಂದ ದೂರವಿರದಿದ್ದರೆ ಭವಿಷ್ಯ ಶೂನ್ಯ: ಬಿ.ಜಿ. ಪ್ರಸಾದ್

KannadaprabhaNewsNetwork |  
Published : Sep 30, 2026, 01:15 AM IST
41 | Kannada Prabha

ಸಾರಾಂಶ

ವಿದ್ಯಾರ್ಥಿಗಳು ರ್‍ಯಾಗಿಂಗ್‌ ನಿಂದ ದೂರವಿರಬೇಕು. ಅರಿತೋ ಅರಿಯದೆಯೋ ಅದರಲ್ಲಿ ತೊಡಗಿದರೆ ವಿದ್ಯಾರ್ಥಿಗಳ ಪ್ರವೇಶಾತಿ ರದ್ದಾಗುತ್ತದೆ. ಸರ್ಕಾರಿ ಮತ್ತು ಅರೆ ಸರ್ಕಾರಿ ಕೆಲಸದಿಂದ ದೂರ ಇರಿಸಲಾಗುತ್ತದೆ. ಅವರು ವಿದೇಶಗಳಿಗೂ ಕೂಡ ಹೋಗಲು ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಕಾನೂನಿನ ಅರಿವಿರಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ರ್‍ಯಾಗಿಂಗ್‌ ಒಂದು ಪಿಡುಗಾಗಿದ್ದು, ಅದರಿಂದ ದೂರವಿರಬೇಕು. ಇಲ್ಲವಾದಲ್ಲಿ ಕಾಲೇಜಿನಲ್ಲಿ ಓದುವ ವಾತಾವರಣವೇ ಹಾಳಾಗುತ್ತದೆ. ಭವಿಷ್ಯದಲ್ಲಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ರ್‍ಯಾಗಿಂಗ್ ನಿಂದ ದೂರವಿರದಿದ್ದರೆ ಭವಿಷ್ಯ ಶೂನ್ಯವಾಗುವುದು ಎಂದು ವಕೀಲ ಬಿ.ಜಿ. ಪ್ರಸಾದ್‌ ಹೇಳಿದರು.

ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ನಡೆದ ರ್‍ಯಾಗಿಂಗ್ ವಿರೋಧಿ ಕ್ರಮಗಳು, ಸುರಕ್ಷಿತ ಕ್ಯಾಂಪಸ್ ಸಂಸ್ಕೃತಿ, ಮಾನಸಿಕ ಆರೋಗ್ಯ ಮತ್ತು ವಿದ್ಯಾರ್ಥಿಗಳ ಜವಾಬ್ದಾರಿಗಳು ಕುರಿತ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ರ್‍ಯಾಗಿಂಗ್‌ ನಿಂದ ದೂರವಿರಬೇಕು. ಅರಿತೋ ಅರಿಯದೆಯೋ ಅದರಲ್ಲಿ ತೊಡಗಿದರೆ ವಿದ್ಯಾರ್ಥಿಗಳ ಪ್ರವೇಶಾತಿ ರದ್ದಾಗುತ್ತದೆ. ಸರ್ಕಾರಿ ಮತ್ತು ಅರೆ ಸರ್ಕಾರಿ ಕೆಲಸದಿಂದ ದೂರ ಇರಿಸಲಾಗುತ್ತದೆ. ಅವರು ವಿದೇಶಗಳಿಗೂ ಕೂಡ ಹೋಗಲು ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಕಾನೂನಿನ ಅರಿವಿರಬೇಕು. ವಿದ್ಯಾರ್ಥಿ ಭವಿಷ್ಯ ನಶಿಸಲು ಕಾರಣವಾಗುತ್ತದೆ. ಇದು ಸಮಾಜ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದರು.

ಜೆಎಸ್‌ಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮನೋವೈದ್ಯ ಡಾ.ಪಿ.ಸಿ. ಪ್ರದೀಪ್ ಕುಮಾರ್ ಮಾತನಾಡಿ, ಪ್ರಸ್ತುತ ಯುವ ಪೀಳಿಗೆ ಮಾನಸಿಕ ಒತ್ತಡದ ಕಾರಣದಿಂದಾಗಿ ದುಡುಕಿನ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ಧೂಮಪಾನ, ಮದ್ಯಪಾನ ಹಾಗೂ ಇತರೆ ದ್ಯಶ್ಚಟಗಳಿಗೆ ಗುರಿಯಾಗುತ್ತಿದ್ದಾರೆ. ಇದು ಅವರ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರುತ್ತಿದೆ ಎಂದರು.

ಇಂದು ಶೇ.15 ರಿಂದ 20 ರಷ್ಟು ವಿದ್ಯಾರ್ಥಿಗಳು ಚಟಗಳಿಗೆ ಗುರಿಯಾಗಿ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಗೂ ಒತ್ತಡವಿರುತ್ತದೆ. ಮನುಷ್ಯ ಇದರಿಂದ ಹೊರತಲ್ಲ. ಯುವಪೀಳಿಗೆಗೆ ಇದರ ಅರಿವಿರಬೇಕು. ಕಾಲೇಜಿನ ಆವರಣದಲ್ಲಿ ಶಿಸ್ತನ್ನು ಪಾಲಿಸಬೇಕು. ಬದುಕಿನಲ್ಲಿ ಬರುವ ಎಲ್ಲಾ ಸಮಸ್ಯೆ ಮತ್ತು ಸನ್ನಿವೇಶಗಳನ್ನು ಧೈರ್ಯವಾಗಿ ಎದುರಿಸುವ ಸಾಮರ್ಥ್ಯ ಹೊಂದಬೇಕು. ಮಾನಸಿಕ ಒತ್ತಡಕ್ಕೆ ಕಾರಣವಾಗುವ ವಿಷಯಗಳಿಂದ ದೂರವಿರಬೇಕು ಎಂದು ಕಿವಿಮಾತು ಹೇಳಿದರು.

ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ ಅಧ್ಯಕ್ಷತೆ ವಹಿಸಿದ್ದರು. ರ್ಯಾಗಿಂಗ್ ತಡೆ ಸಮಿತಿ ಸಂಚಾಲಕ ಎಲ್.ಎನ್. ಶುಭ ಇದ್ದರು. ಡಾ. ಕುಮುದಿನಿ ಅಚ್ಚಿ ಸ್ವಾಗತಿಸಿದರು. ಎಲ್. ಆಶಾ ವಂದಿಸಿದರು. ಡಾ.ಎಚ್.ಪಿ. ಸ್ಫೂರ್ತಿ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕರಕುಶಲ ಕಲೆಗಳಿವೆ ತನ್ನದೇ ವೈಶಿಷ್ಟ್ಯತೆ: ಕಿರಣ
ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಸ್ವಪಕ್ಷದವರ ಆಕ್ರೋಶ