ಚನ್ನಪಟ್ಟಣ: ನಾನೀಗ ಚನ್ನಪಟ್ಟಣ ತಾಲೂಕಿನ ಜನರಿಗೆ ಹತ್ತಿರ ಆಗುತ್ತಿಲ್ಲ. ನಾನು ತಾಲೂಕಿನ ಜನರ ಜೊತೆಯಲ್ಲೇ ಇದ್ದೇನೆ. ಮೊದಲು ಸಮಯ ಇರಲಿಲ್ಲ, ಇಲ್ಲಿ ಕುರ್ಚಿ ಖಾಲಿ ಇರಲಿಲ್ಲ. ಇಲ್ಲಿಂದ ಗೆದ್ದಿರೋರು ಸಮಸ್ಯೆ ಬಗೆಹರಿಸುತ್ತಾರೆ ಅಂದುಕೊಂಡಿದ್ದೆ. ಅವರು ಜನರ ಕಷ್ಟ ಕೇಳಿಲ್ಲ. ಹಾಗಾಗಿ ನಾನು ಅವರ ಕಷ್ಟ ಕೇಳುತ್ತಿದ್ದೇನೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.
ಚನ್ನಪಟ್ಟಣ ಉಪಚುನಾವಣೆಗೆ ಡಿಸಿಎಂ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿ, ಕೇವಲ ಚನ್ನಪಟ್ಟಣ ಅಲ್ಲ, ಎಲ್ಲಾ ಕಡೆಗೂ ಹೋಗ್ತೀನಿ. ಶಿಗ್ಗಾಂವಿ, ಸಂಡೂರಿಗೂ ಹೋಗಿ ಕೆಲಸ ಮಾಡ್ತೀನಿ. ಪ್ರವಾಸದ ಪಟ್ಟಿ ಮಾಡುತ್ತಿದ್ದೇನೆ. ಕಾಂಗ್ರೆಸ್ ಶಾಸಕರು ದೆಹಲಿಗೆ ಬಂದಿದ್ದಾರೆ, ಸರ್ಕಾರ ಅಳಿವಿನಂಚಿನಲ್ಲಿದೆ ಎಂಬ ಸಿಪಿವೈ ಹೇಳಿಕೆ ವಿಚಾರಕ್ಕೆಬಹಳ ಸಂತೋಷ, ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದರು.
ಹಾಲಿನ ದರ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ ವಿಚಾರಕ್ಕೆ ರೈತರ ಆದಾಯ ಹೆಚ್ಚಿಸಲು ಕೆಎಂಎಫ್ ದರ ಏರಿಕೆ ಮಾಡಿದೆ. ರೈತರಿಗೆ ಅನುಕೂಲ ಮಾಡಲು ಹೀಗೆ ಮಾಡಿದೆ. ಅದನ್ನ ವಿರೋಧಿಸುವ ಬಿಜೆಪಿಯವರು ರೈತ ವಿರೋಧಿಗಳು. ಬಿಜೆಪಿ ರೈತ ವಿರೋಧಿ, ವರ್ತಕರ ಪರ. ರೈತರಿಗೆ ಸಿಗುವ ಆದಾಯ ತಪ್ಪಿಸಲು ಹೀಗೆ ಮಾಡ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.(ಲೀಡ್ ಬಾಕ್ಸ್)
ಚನ್ನಪಟ್ಟಣ: ಚನ್ನಪಟ್ಟಣ ತಾಲೂಕಿನ ಜನರ ಸಮಸ್ಯೆ ಪರಿಹರಿಸಲು ಸರ್ಕಾರವೇ ನಿಮ್ಮ ಮನೆ ಬಾಗಿಲಿಗೆ ಬಂದಿದ್ದು, ಜನಸ್ಪಂದನಾ ಕಾರ್ಯಕ್ರಮದಲ್ಲಿ ಅರ್ಜಿ ಸಲ್ಲಿಸುವ ಮೂಲಕ ನಿಮ್ಮ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ವಿಶೇಷ ಕಾರ್ಯಕ್ರಮ:
ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ನುಡಿದಂತೆ ನಡೆದಿದೆ. ಸರ್ಕಾರ ಅಸ್ವಿತ್ವಕ್ಕೆ ಬಂದ ಕೂಡಲೇ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಜನರು ಪಂಚ ಗ್ಯಾರಂಟಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ನಿಮ್ಮ ಮನೆ ಬಾಗಿಲಿಗೆ ಬಂದು ಸಮಸ್ಯೆ ಬಗೆಹರಿಸುತ್ತಿದೆ. ಸಾರ್ವಜನಿಕರು ಈ ಕಾರ್ಯಕ್ಕೆ ಅಹವಾಲುಗಳನ್ನು ಸಲ್ಲಿಸಿ ತಮ್ಮ ಸಮಸ್ಯೆಗೆ ಸ್ಥಳದಲ್ಲಿಯೇ ಪರಿಹಾರ ಪಡೆದುಕೊಳ್ಳುವಂತೆ ತಿಳಿಸಿದರು.
ಪೊಟೋ೨೬ಸಿಪಿಟಿ೨:
ಪೊಟೋ೨೬ಸಿಪಿಟಿ೨: