ಕನ್ನಡಪ್ರಭ ವಾರ್ತೆ ಹಾಸನ
ಕಾಂಗ್ರೆಸ್ ಪಕ್ಷದವರೆಂದು ಡೇರಿಗೆ ಹಾಲನ್ನು ಹಾಕಬೇಡಿ ಎಂದು ನಾನು ಹೇಳಿಲ್ಲ. ಆದರೇ ಕಳೆದ ಒಂದು ದಿನಗಳ ಹಿಂದೆ ಡೀಸಿ ಕಛೇರಿ ಮುಂದೆ ಪ್ರತಿಭಟಿಸಿ ಆರೋಪ ಮಾಡಿರುವುದು ಸತ್ಯಕ್ಕೆ ದೂರವಾಗಿದ್ದು, ಇದು ರಾಜಕೀಯ ಪ್ರೇರಿತವಾಗಿದೆ ಎಂದು ಹೆಚ್.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಕಳೆದ ಒಂದು ದಿನಗಳ ಹಿಂದೆ ಮಾಡಿರುವ ಆರೋಪ ಸತ್ಯಕ್ಕೆ ದೂರವಾದ ವಿಚಾರ. ಹಾಲು ಉತ್ಪಾದಕರ ಸಂಘಗಳೆಲ್ಲಾ ರೈತರ ಸಂಸ್ಥೆಗಳು. ರೈತರ ಏಳಿಗೆಗೆ ಪೂರಕವಾದ ಸಂಸ್ಥೆಗಳಾಗಿದ್ದು, ನಾನು ಸಹಕಾರ ಸಂಘದ ಬ್ಯಾಂಕಿನ ಅಧ್ಯಕ್ಷನಾಗಿ 8 ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿದ್ದೇನೆ.ಎರಡನೇ ಬಾರಿಗೆ ಅಧ್ಯಕ್ಷನಾಗಿ ನಿರ್ವಹಿಸುತ್ತಿದ್ದು, ಜೂನ್ 4 ರಂದು ಎಂಪಿ ಚುನಾವಣೆಯ ಫಲಿತಾಂಶ ಬಂದಿದ್ದು, ಹಾಲು ಉತ್ಪಾದಕರ ಸಂಘ ಇದ್ದು, ಇಲ್ಲಿ ಜನರೇಟರ್ ಇದ್ದು, ಸುತ್ತ ಮೈದಾನವಿದ್ದು, ಜನರು ಯಾವಾಗಲು ಸೇರುತ್ತಾರೆ. ಗ್ರಾಮದ ಮಧ್ಯ ಭಾಗವಾಗಿದ್ದು, ಧನಕರುಗಳ ಕಟ್ಟಿದ್ದು, ಇಲ್ಲಿ ಮಕ್ಕಳುಗಳೆಲ್ಲಾ ಆಟವಾಡುತ್ತಿದ್ದು, ಇವರು ಪಟಾಕಿ ಸಿಡಿಸಲು ಬಂದಾಗ ರಸ್ತೆ ಮೇಲೆ ಹಚ್ಚಲು ಹೇಳಿದರೂ ಕೆಳದೇ ಪಟಾಕಿ ಹಚ್ಚಿದಾಗ ಒಂದು ಮಗುವಿಗೆ ತಾಕಿ ಮೈಗೆ ಗಾಯವಾಗಿತ್ತು. ಇನ್ನು ಹಸುವಿಗೆ ತಾಕಿ ಗಾಬರಿಯಾಗಿ ಬಿದ್ದು, ಕಾಲಿಗೆ ಏಟಾಗಿದೆ. ಇಷ್ಟೆಲ್ಲಾ ಘಟನೆ ನಡೆದಿತ್ತು. ರಾತ್ರಿ ಇಷ್ಟೆಲ್ಲಾ ಅನಾಹುತವಾಗಿದ್ದು, ಮಾತುಕತೆ ಆದಮೇಲೆ ಹಾಲು ಹಾಕುವಂತೆ ಹೇಳಿ ಯಾರದು ಹಾಲು ಹಾಕಿಸಿಕೊಂಡಿರಲಿಲ್ಲ. ಆಗಿರುವ ಘಟನೆ ಬಗ್ಗೆ ಕೇಳಿದಾಗ ಬೇರೆ ಬೇರೆ ಕಾರಣವನ್ನು ಕೊಟ್ಟರು. ಚುನಾವಣೆ ಮುಗಿದು ಶ್ರೇಯಸ್ ಪಟೇಲ್ ಗೆದ್ದಾಗಿದೆ. ಇನ್ನು ಗ್ರಾಮದಲ್ಲಿ ಇವೆಲ್ಲಾ ಬೇಕಾಗಿತ್ತಾ. ಪಟಾಕಿ ಹೊಡೆಯಬೇಕಾದರೇ ಊರಿನ ಹೊರಗೆ ದೂರದಲ್ಲಿ ಸುಡ ಬಹುದಿತ್ತು. ಜನಸಂದಣೆ ಇರುವ ಜಾಗದಲ್ಲಿ ಹಚ್ಚಿ ಇಷ್ಟೆಲ್ಲಾ ತೊಂದರೆ ಆಗಿದೆ ಏಕೆ ಮಾಡಿದಿರಿ ಎಂದಾಗ ಮಾತಿಗೆ ಮಾತು ಬೆಳೆದು ನಂತರ ಡಿಸಿ ಕಛೇರಿ ಬಳಿ ಬಂದಿದ್ದಾರೆ ಎಂದರು.ಉಳಿದವರೆಲ್ಲಾ ಹಾಲು ಹಾಕಿದರು. ನಾನು ಸಾರ್ವಜನಿಕ ಜೀವನದಲ್ಲಿ 30ವರ್ಷಗಳ ಕಾಲ ಇದ್ದು, ಸೇವೆ ಮಾಡಿಕೊಂಡು ಬಂದಿದ್ದೇನೆ. ಇದುವರೆಗೂ ಯಾವುದೇ ಪಕ್ಷದ ಪರವಾಗಿ ಕೆಲಸ ಮಾಡಿರುವುದಿಲ್ಲ. ರೈತರ, ಕಾರ್ಮಿಕರ ಪರವಾಗಿ ಕೆಲಸಮಾಡಿದ್ದು, ಇದುವರೆಗೂ ಯಾವುದೇ ಕಪ್ಪು ಚುಕ್ಕಿ ಬಾರದಾಗೆ ಕೆಲಸ ಮಾಡಿದ್ದೇನೆ. ಹಾಲು ಹಾಕಲು ಯಾವ ಕಾರಣಕ್ಕೂ ಅಡಚಣೆ ಮಾಡಿರುವುದಿಲ್ಲ. ರಾತ್ರಿ ಬೆಳಗ್ಗೆನೂ ಹಾಲು ಹಾಕಿದ್ದಾರೆ. 2015 ರಿಂದ ಡೇರಿಗೆ ಹಾಲು ಹಾಕಲು ಪ್ರಾರಂಭ ಮಾಡಲಾಗಿದ್ದು, ಅಲ್ಲಿಂದ ಇಲ್ಲಿವರೆಗೂ ಪ್ರತಿ ವರ್ಷ ಬೋನಸ್ ಕೊಡುವ ಕೆಲಸ ಮಾಡಲಾಗಿದೆ. ಹಾಲು ಉತ್ಪಾದಕರ ಸಂಘದಲ್ಲಿ ನಾನು ಕೂಡ ಒಬ್ಬ ಸದಸ್ಯನಾಗಿದ್ದು, ರೈತರ ಪರವಾಗಿ ನಾವು ಸೋಮನಹಳ್ಳಿಯಲ್ಲಿ ಅನೇಕ ಕೆಲಸ ಮಾಡಲಾಗಿದೆ. ಎರಡು ಮೂರು ಸಾವಿರ ಜನ ಸಾಲಗಾರ ರೈತರಿದ್ದು, ಕೃಷಿಗೆ ಸಾಲ ಕೊಡುವ ಕೆಲಸ ನಾವು ಪ್ರಾಮಾಣಿಕವಾಗಿ ಮಾಡಿದ್ದೇವೆ. ನೆನ್ನೆ ಪುಣ್ಯಾತ್ಮರು ನಮ್ಮ ಮೇಲೆ ಆರೋಪ ಯಾರು ಮಾಡಿದ್ದಾರೆ ಅವರು ಬಂದು ನಾನುಕಾಂಗ್ರೆಸ್ ಪಕ್ಷದವನು ಎಂದು ಸಾಲ ಕೊಟ್ಟಿಲ್ಲ. ಹೊರಕ್ಕೆ ಹಾಕಿದ್ದಾರೆ ಎಂದು ನನ್ನ ಗಮನಕ್ಕೆ ತಂದರೇ ನಾಳೆನೇ ಅದನ್ನು ಕೊಡುವ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಯಾವುದೇ ಕಳಂಕ, ಆರೋಪವಿಲ್ಲದೇ ಯಾರನ್ನು ಕಡೆಗಣಿಸಿದೇ ಕೆಲಸ ಮಾಡಿದ್ದೇನೆ ಎಂದು ಪ್ರತಿಭಟನೆ ಮಾಡಿದ ಪ್ರತಿಭನಗಾರರಿಗೆ ಉತ್ತರಿಸಿದರು. ರಾಜಕಾರಣ ಎಲ್ಲಾ ಮಾಡುತ್ತಾರೆ. ಜೆಡಿಎಸ್ ಸೋತಿದೆ ಎಂದು ನಾವು ಹತಾಶರಾಗಿ ಯಾವ ಕೆಲಸ ಮಾಡುವುದಿಲ್ಲ. ನಾವು ಯಾವಾಗಲು ರೈತರ ಪರವಾಗಿ, ರೈತರ ಹಿತಕಾಯುವ ಕೆಲಸ ಮಾಡಿದ್ದು, ಮುಂದೆಯೂ ಮಾಡುವುದಾಗಿ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಲಕ್ಷ್ಮಣ್, ಪುಟ್ಟಸ್ವಾಮಿಗೌಡ, ರಂಗಸ್ವಾಮಿ, ಜಯಣ್ಣ, ಸಿದ್ದಗೌಡ, ನಿಂಗರಾಜು, ದೊರಸ್ವಾಮಿ ಉಪಸ್ಥಿತರಿದ್ದರು.