ಕನ್ನಡಪ್ರಭ ವಾರ್ತೆ ಹಾಸನ
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರಿಗೆ ಅಭೂತಪೂರ್ವ ಜಯತಂದು ಕೊಟ್ಟ ಮತದಾರರು ಹಾಗೂ ಪಕ್ಷದ ಕಾರ್ಯಕರ್ತರಿಗೆ ಧನ್ಯವಾದ ಹೇಳುವುದಾಗಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಲಕ್ಷ್ಮಣ್ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಈ ಚುನಾವಣೆಯಲ್ಲಿ ಸಣ್ಣ ಪುಟ್ಟ ಮನಸ್ಥಾಪ ಇದ್ದರೂ ಕೂಡ ನಮ್ಮ ನಾಯಕರು ಎಲ್ಲಾರು ಒಟ್ಟಾಗಿ ಕೆಲಸ ಮಾಡುವ ಮೂಲಕ ಪ್ರತಿಫಲ ಸಿಕ್ಕಿದೆ. ಜಿಲ್ಲೆಯ ಮತದಾರರು ಲೋಕಸಭಾ ಚುನಾವಣೆಯಲ್ಲಿ ಶ್ರೇಯಸ್ ಪಟೇಲ್ ಅವರಿಗೆ ಗೆಲುವು ಕೊಡುವುದರ ಮೂಲಕ 25 ವರ್ಷಗಳ ಬದಲಾವಣೆ ತಂದುಕೊಟ್ಟಿರುವುದಕ್ಕೆ ಎಲ್ಲಾ ಮತದಾರರಿಗೆ ನಮಗೆ ಶಕ್ತಿ ಕೊಟ್ಟಂತಹ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರು ಸೇರಿ ಎಲ್ಲಾ ಸಮುದಾಯದವರಿಗೂ ಕೂಡ ಕಾಂಗ್ರೆಸ್ ಪಕ್ಷದ ಪರವಾಗಿ ಧನ್ಯವಾದವನ್ನು ಅರ್ಪಿಸುತ್ತೇನೆ.
ಎಂಪಿ ಚುನಾವಣೆಯಲ್ಲಿ ಗೆಲುವಿಗೆ ಮೂಲ ಕಾರಣಕರ್ತರೆಂದರೇ ಉಸ್ತವಾರಿ ಸಚಿವರು, ಚುನಾವಣಾ ಉಸ್ತುವಾರಿ ಆಗಿರುವ ಜಿ.ಸಿ. ಚಂದ್ರಶೇಖರ್ ಅವರ ಚುನಾವಣಾ ಚಾಣುಕ್ಯತನದಿಂದಾಗಿ ಇದ್ದಂತಹ ಅನೇಕ ವ್ಯತ್ಯಾಸಗಳನ್ನು ಸರಿಪಡಿಸಿ ಕೆಲಸ ಮಾಡಲು ಹುರಿದುಂಬಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಜೋಡಿ ಎತ್ತುಗಳಾಗಿ ಐದು ಕ್ಷೇತ್ರಗಳಿಗೂ ಕೂಡ ಬಿಡುವಿಲ್ಲದಿದ್ದರೂ ಬಂದಿದ್ದರಿಂದ ಈ ಗೆಲುವು ಸಾಧಿಸಲು ಅವಕಾಶ ಸಿಕ್ಕಿದೆ ಎಂದರು.ಎಂಪಿ ಚುನಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಅವರು ತುಮಕೂರಿಗೆ ಹೆಚ್ಚಿನ ಜವಬ್ದಾರಿ ತೆಗೆದುಕೊಂಡಿದ್ದರು. ಹಾಸನ ಜಿಲ್ಲೆಗೂ ಕೂಡ ಅನೇಕ ಬಾರಿ ಬಂದು ಹೋಗಿದ್ದಾರೆ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಮತದಾರರು ಬದಲಾವಣೆ ಬಯಸಿ ಕಾಂಗ್ರೆಸ್ ಗೆ ಗೆಲುವು ತಂದುಕೊಟ್ಟಿದ್ದಾರೆ ಎಂದು ಹೇಳಿದರು.ಕಾಂಗ್ರೆಸ್ ಮುಖಂಡ ಹೆಚ್.ಕೆ. ಜವರೇಗೌಡ ಮಾತನಾಡಿ, ಎಂಪಿ ಚುನಾವಣೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್ ಅವರನ್ನು ಕೂಡ ಭೇಟಿ ಮಾಡಿ ಧನ್ಯವಾ
ತಿಳಿಸಿದ್ದು, ಅನಿರೀಕ್ಷಿತ ಭೇಟಿ ಇದರಲ್ಲಿ ಯಾವ ಸಮುದಾಯವನ್ನು ಕಡೆಗಣಿಸಿಲ್ಲ. ನೆನ್ನೆ ಎಂಪಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನೂತನ ಎಂಪಿ ಶ್ರೇಯಸ್ ಪಟೇಲ್ ಜೊತೆ ಕೆಲವು ಮುಖಂಡರು ನಾಯಕರನ್ನು ಭೇಟಿ ಮಾಡಿ ಧನ್ಯವಾದ ತಿಳಿಸಿದ್ದೇವೆ. ಈ ವೇಳೆ ಇದರಲ್ಲಿ ಯಾರೊಬ್ಬ ಜಾತಿ, ಹಾಗೂ ಸಮುದಾಯದ ಕಡೆಗಣನೆ ಬಗ್ಗೆ ಯೋಚಿಸುವುದು ಬೇಡ, ಮುಂದಿನ ದಿನಗಳಲ್ಲಿ ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸಿಕೊಂಡು ಹೋಗುವ ನಿಟ್ಟಿನಲ್ಲಿ ಕೆಲಸ ಮಾಡಲಾವುದು ಎಂದರು.ಎಲ್ಲಾರೂ ಒಟ್ಟಾಗಿ ಅಭಿವೃದ್ಧಿ ಕೆಲಸ ಮಾಡಲು ನಾವು ಸಹಕಾರ ಕೊಡುತ್ತೇವೆ. ಪಕ್ಷ ಸಂಘಟನೆ ಮಾಡುವಂತೆ ಮುಖ್ಯಮಂತ್ರಿಗಳು ಸೂಚನೆ ಕೊಟ್ಟರು. ಈ ಜಿಲ್ಲೆಯಲ್ಲಿ ಪಕ್ಷದ ಜವಬ್ದಾರಿ ಹೆಚ್ಚಿದ್ದು, ಮೊದಲು ನಾವು ಮನುಷ್ಯರಾಗಿ ನಡೆದುಕೊಳ್ಳಬೇಕು. ದುರಂಕಾರದ ಪರಮಾವಧಿ ಯಾರಿಗೂ ಇರಬಾರದು. ಉತ್ತಮ ನಡವಳಿಕೆ ಇದ್ದರೇ ಅವನು ಯೋಗ್ಯ ಎಂದು ಸಮಾಜದಲ್ಲಿ ಹೇಳುತ್ತಾರೆ. ಯಾವುದೇ ಪಕ್ಷದ ರಾಜಕಾರಣೀ ಇರಲಿ ದುರಂಕಾರ ಇದ್ದರೇ ಅದನ್ನ ಬಿಡಬೇಕು. ಮತದಾರ ಪ್ರಭುಗಳು ಕೊಟ್ಟಂತಹ ಭೀಕ್ಷೆ ಮೇಲೆ ನಾವು ಅಧಿಕಾರ ಮಾಡುವುದು. ಯಾವ ಸಂದರ್ಭದಲ್ಲೂ ಮತದಾರರು ಬಂದರೂ ನೋವು ಮಾಡಬಾರದು ಎಂದು ಲೋಕಸಭಾ ಚುನಾವಣೆಯಲ್ಲಿ ನಡೆದಂತಹ ಘಟನೆಯನ್ನು ಹೆಸರು ಹೇಳದೇ ಪರೋಕ್ಷವಾಗಿ ಜರಿದರು. ಸಮೀಕ್ಷೆಗಳು 400 ಬರುವುದಾಗಿ ಹೇಳಿದ್ದರು. ಆದರೇ 292 ಸೀಟುಗಳು ದೇಶದಲ್ಲಿ ಬಂದಿದೆ. ಜನರು ಕೊಟ್ಟಿರುವ ಭೀಕ್ಷೆ ಆಗಿದೆ. ಮತದಾರ ಪ್ರಭುಗಳು ಈ ದೇಶದಲ್ಲಿ ಏನು ಬೇಕಾದರೂ ಬದಲಾವಣೆ ಮಾಡಬಹುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಹುಡಾ ಮಾಜಿ ಅಧ್ಯಕ್ಷ ಕೃಷ್ಣಕುಮಾರ್, ಕೆಪಿಸಿಸಿ ಸದಸ್ಯ ಆರೀಫ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಮಲ್ಲಿಗೆವಾಳ್ ದೇವಪ್ಪ ಇತರರಿದ್ದರು.