ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಜಯಗಳಿಸಿದ ಹಿನ್ನಲೆ ಅರೇಹಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.
ಕನ್ನಡಪ್ರಭ ವಾರ್ತೆ ಬೇಲೂರು
ಹಾಸನ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಎನ್ ಡಿ ಎ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಪರವಾಗಿ ಅರೇ ಹಳ್ಳಿ ಹೋಬಳಿಯ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಮುಖಂಡ ತುಳಸಿ ದಾಸ್ ನೇತೃತ್ವದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಲಾಯಿತು. ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ತುಳಸಿದಾಸ್, ಕಳೆದ 25 ವರ್ಷಗಳಿಂದ ಒಂದೇ ಕುಟುಂಬದ ವಶದಲ್ಲಿದ್ದ ಲೋಕಸಭಾ ಸದಸ್ಯರ ಸ್ಥಾನವನ್ನು ಮರಳಿ ಪಡೆಯುವಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಯಶಸ್ವಿಯಾಗಿದ್ದಾರೆ. ಅರೇ ಹಳ್ಳಿ ಜಿಪಂ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ರವರಿಗೆ ಅತಿ ಹೆಚ್ಚು ಮತ ನೀಡಿ ಆಶೀರ್ವಾದ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ತಿಳಿಸಿದರು.
ಕಾಂಗ್ರೆಸ್ ಹೋಬಳಿ ಘಟಕದ ಅಧ್ಯಕ್ಷ ಅನುಘಟ್ಟ ಮಂಜುನಾಥ್ ಮಾತನಾಡಿ, ಶ್ರೇಯಸ್ ಪಟೇಲ್ ಗೆಲುವು ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಗೆಲುವಾಗಿದೆ. ಸಂವಿಧಾನ ಬದಲಾವಣೆ ಮಾಡುವ ಕೋಮುವಾದಿ ಪಕ್ಷಗಳನ್ನು ಜನರು ಮನೆಗೆ ಕಳುಹಿಸಿದ್ದಾರೆ. ಈ ಗೆಲುವಿನಿಂದಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಕಾರ್ಯಕರ್ತರಿಗೆ ಹೂಸ ಭರವಸೆ ಮೂಡಿಸಿದ್ದು ಜಿಲ್ಲೆಯ ಕುಟುಂಬ ರಾಜಕಾರಣವನ್ನು ಮತದಾರರು ತಿರಸ್ಕರಿಸಿ ಭವಿಷ್ಯದ ಯುವ ನಾಯಕ ಶ್ರೇಯಸ್ ಪಟೇಲ್ ಅವರನ್ನು ಆಯ್ಕೆ ಮಾಡಿರುವುದು ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಲ್ಲಿ ಹೂಸ ಚೈತನ್ಯ ಮೂಡಿಸಿದೆ ಎಂದರು ಈ ವೇಳೆ ಮುಖಂಡರಾದ ಸಿರಾಜ್ ಅಹಮದ್, ಮಾಜಿ ತಾ ಪಂ ಅಧ್ಯಕ್ಷ ಅಣ್ಣಪ್ಪ, ಎಸ್ ವಿರೂಪಾಕ್ಷ, ಲಿಂಗರಾಜು ನಾರ್ವೆ, ಮಲ್ಲಿಕಾರ್ಜುನ್ ಸುಲಗಳಲೆ ಮುಸ್ತಾಫ, ವೀರಭದ್ರ ಶೆಟ್ಟಿ, ಟಿ ಪಿ ಮಲ್ಲೇಶ್, ಸೋಮಶೇಖರ್, ಕಾರ್ತಿಕ್, ಯೋಗೇಶ್, ಮಹೇಂದ್ರ, ಭದ್ರೇಶ್ ಮತ್ತಿತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.